AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ! ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ

ಅಡುಗೆ ಮನೆಯಲ್ಲಿ ಹೆಡೆ ಎತ್ತಿ ಕುಳಿತಿದ್ದ ನಾಗಪ್ಪ! ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ

TV9 Web
| Edited By: |

Updated on: Mar 17, 2026 | 11:05 AM

Share

ಕೋಲಾರದ ಜಯನಗರ ಬಡಾವಣೆಯ ಮನೆಯೊಂದರ ಅಡುಗೆಮನೆಯಲ್ಲಿ ಬೃಹತ್ ನಾಗರಹಾವು ಪತ್ತೆಯಾಗಿ ಆತಂಕ ಸೃಷ್ಟಿಸಿತು. ಮನೆಯವರು ಹಾವನ್ನು ಕಂಡು ಬೆಚ್ಚಿಬಿದ್ದಿದ್ದು, ಕೂಡಲೇ ಸ್ಥಳೀಯ ಉರಗ ರಕ್ಷಕ ನಾಗರಾಜ್‌ಗೆ ಮಾಹಿತಿ ನೀಡಿದರು. ನಾಗರಾಜ್ ಅವರು ಸುಮಾರು ಅರ್ಧಗಂಟೆ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಇದರಿಂದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಕೋಲಾರ, ಮಾ.17: ಜಿಲ್ಲೆಯ ಜಯನಗರ ಬಡಾವಣೆಯಲ್ಲಿ ಇಂದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮನೆಯ ಅಡುಗೆ ಕೋಣೆಯೊಳಗೆ ಬೃಹತ್ ಗಾತ್ರದ ನಾಗರಹಾವೊಂದು ಪ್ರತ್ಯಕ್ಷವಾಗಿದ್ದು, ಮನೆಯವರನ್ನು ಬೆಚ್ಚಿಬೀಳಿಸಿದೆ. ಕೋಲಾರದ ಜಯನಗರ ಬಡಾವಣೆಯ ನಿವಾಸಿ ಮಂಜುನಾಥ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಅಡುಗೆ ಕೆಲಸಕ್ಕಾಗಿ ಅಡುಗೆ ಮನೆಗೆ ಹೋದಾಗ, ಅಲ್ಲಿದ್ದ ಸಾಮಗ್ರಿಗಳ ನಡುವೆ ನಾಗರಹಾವು ಅಡಗಿ ಕುಳಿತಿರುವುದು ಪತ್ತೆಯಾಗಿದೆ. ಹಾವನ್ನು ಕಂಡು ಮನೆಯವರು ದಿಕ್ಕಾಪಾಲಾಗಿ ಓಡಿದ್ದು, ಕೂಡಲೇ ಸ್ಥಳೀಯ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಖ್ಯಾತ ಉರಗ ರಕ್ಷಕ ನಾಗರಾಜ್, ಸುಮಾರು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಡುಗೆ ಮನೆಯ ಪುಟ್ಟ ಜಾಗದಲ್ಲಿ ಕುಳಿತಿದ್ದ ಹಾವನ್ನು ಚಾಕಚಕ್ಯತೆಯಿಂದ ಹಿಡಿದಾಗ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ರಕ್ಷಿಸಲಾದ ನಾಗರಹಾವನ್ನು ಉರಗ ರಕ್ಷಕ ನಾಗರಾಜ್ ಅವರು ಜನವಸತಿ ಪ್ರದೇಶದಿಂದ ದೂರವಿರುವ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us