AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘12th ಫೇಲ್​’ ನಿರ್ದೇಶಕನ ಹೆಂಡತಿ ಮೇಲೆ ಸರಣಿ ಆರೋಪ ಮಾಡಿದ ಕಂಗನಾ ರಣಾವತ್​

ಬಾಲಿವುಡ್​ನ ಅನೇಕರ ಜೊತೆ ಕಂಗನಾ ರಣಾವತ್​ ದ್ವೇಷ ಕಟ್ಟಿಕೊಂಡಿದ್ದಾರೆ. ನೇರ ಮಾತುಗಳ ಮೂಲಕ ಹಲವರ ಕೆಂಗಣ್ಣಿಗೆ ಅವರು ಗುರಿ ಆಗಿದ್ದಾರೆ. ಈಗ ಸಿನಿಮಾ ವಿಮರ್ಶಕಿ ಅನುಪಮಾ ಚೋಪ್ರಾ ವಿರುದ್ಧ ಕಂಗನಾ ಅವರು ಸಾಲು ಸಾಲು ಆರೋಪ ಮಾಡಿದ್ದಾರೆ. ಇವುಗಳಿಗೆ ಅನುಪಮಾ ಚೋಪ್ರಾ ಅವರು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

‘12th ಫೇಲ್​’ ನಿರ್ದೇಶಕನ ಹೆಂಡತಿ ಮೇಲೆ ಸರಣಿ ಆರೋಪ ಮಾಡಿದ ಕಂಗನಾ ರಣಾವತ್​
ಕಂಗನಾ ರಣಾವತ್​, ವಿಧು ವಿನೋದ್​ ಚೋಪ್ರಾ, ಅನುಪಮಾ ಚೋಪ್ರಾ
ಮದನ್​ ಕುಮಾರ್​
|

Updated on: Feb 05, 2024 | 3:53 PM

Share

ನೈಜ ಘಟನೆ ಆಧಾರಿತ ‘12th ಫೇಲ್​’ ಸಿನಿಮಾ (12th Fail) ಸೂಪರ್​ ಹಿಟ್​ ಆಗಿದೆ. ಈ ಸಿನಿಮಾದಲ್ಲಿ ವಿಕ್ರಾಂತ್​ ಮಾಸ್ಸಿ, ಮೇಧಾ ಶಂಕರ್​ ಮುಂತಾದವರು ನಟಿಸಿದ್ದಾರೆ. ವಿಧು ವಿನೋದ್​ ಚೋಪ್ರಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಗೆಲುವನ್ನು ಎಲ್ಲರೂ ಸಂಭ್ರಮಿಸಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಕಂಗನಾ ರಣಾವತ್​ (Kangana Ranaut) ಕೂಡ ಈ ಚಿತ್ರವನ್ನು ಹೊಗಳಿದ್ದರು. ನಿರ್ದೇಶಕ ವಿಧು ವಿನೋದ್​ ಚೋಪ್ರಾ ಅವರ ಕೆಲಸವನ್ನು ಕಂಗನಾ ಮೆಚ್ಚಿಕೊಂಡಿದ್ದರು. ಆದರೆ ಈಗ ಏಕಾಏಕಿಯಾಗಿ ನಿರ್ದೇಶಕರ ಪತ್ನಿ ಅನುಪಮಾ ಚೋಪ್ರಾ (Anupama Chopra) ಮೇಲೆ ಕಂಗನಾ ಗರಂ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅನುಪಮಾ ಮೇಲೆ ಕಂಗನಾ ರಣಾವತ್​ ಸರಣಿ ಆರೋಪಗಳನ್ನು ಮಾಡಿದ್ದಾರೆ.

ಸಿನಿಮಾ ವಿಮರ್ಶಕಿಯಾಗಿ, ಸಿನಿಮಾ ಪತ್ರಕರ್ತೆಯಾಗಿ ಅನುಪಮಾ ಚೋಪ್ರಾ ಅವರು ಗುರುತಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಬಹುತೇಕ ಎಲ್ಲ ಸ್ಟಾರ್​ ಸೆಲೆಬ್ರಿಟಿಗಳ ಸಂದರ್ಶನವನ್ನು ಅವರು ಮಾಡಿದ್ದಾರೆ. ತಮ್ಮದೇ ಯೂಟ್ಯೂಬ್​ ಚಾನಲ್​ ಮತ್ತು ವೆಬ್​ಸೈಟ್​ ಹೊಂದಿರುವ ಅವರನ್ನು ಸಾಕಷ್ಟು ಜನರು ಫಾಲೋ ಮಾಡುತ್ತಾರೆ. ಆದರೆ ಅವರನ್ನು ಕಂಗನಾ ರಣಾವತ್​ ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: ‘ಬಿಲ್ಕಿಸ್​ ಬಾನು ಬಗ್ಗೆ ಸ್ಕ್ರಿಪ್ಟ್​ ಸಿದ್ಧವಿದೆ, ಆದರೆ ಸಿನಿಮಾ ಮಾಡೋಕೆ ಆಗುತ್ತಿಲ್ಲ’: ಕಂಗನಾ ರಣಾವತ್​

‘ವಿಧು ಸರ್​ ಅವರ ಹೆಂಡತಿ ಅನುಪಮಾ ಚೋಪ್ರಾ ಸಿನಿಮಾ ಪತ್ರಕರ್ತೆಯಾಗಿ ಅಪಾಯಕಾರಿ ಆಗಿದ್ದಾರೆ. ಹೊರಗಿನವರನ್ನು ಅವರು ದ್ವೇಷಿಸುತ್ತಾರೆ. ಪ್ರತಿಭಾವಂತ, ಕಿರಿಯ ಮಹಿಳೆಯರನ್ನು ಕಂಡರೆ ಅವರಿಗೆ ಅಸೂಯೆ ಇದೆ. ತನ್ನ ಗಂಡನ ಬಗ್ಗೆಯೂ ಅವರಿಗೆ ಹೊಟ್ಟೆಕಿಚ್ಚು ಇದೆ ಎಂದರೆ ಅಚ್ಚರಿ ಏನಿಲ್ಲ’ ಎಂದು ಕಂಗನಾ ರಣಾವತ್​ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಗಂಡನ ಖ್ಯಾತಿಯಿಂದಲೇ ಅನುಪಮಾ ಚೋಪ್ರಾ ಹಣ, ಹೆಸರು ಗಳಿಸಿದ್ದಾರೆ. ವೆಬ್​ಸೈಟ್​ ಮತ್ತು ಇತರೆ ಬಿಸ್ನೆಸ್​ ನಡೆಸುತ್ತಿದ್ದಾರೆ. ನಿರ್ದೇಶಕನ ಪತ್ನಿ ಅಂತ ಹೇಳಿಕೊಂಡು ಬಾಲಿವುಡ್​ನ ಪಾರ್ಟಿಗೆ ಬರುತ್ತಾರೆ. ಬಾಲಿವುಡ್​ನ ಗಾಸಿಪ್​ ಗ್ಯಾಂಗ್​ ಜೊತೆ ಸೇರಿಕೊಳ್ಳುತ್ತಾರೆ. ನಿಜವಾದ ಪ್ರತಿಭಾವಂತರು ಮತ್ತು ಒಳ್ಳೆಯ ಸಿನಿಮಾಗಳ ವಿರುದ್ಧವಾಗಿ ಗಾಸಿಪ್ ಮಾಡುತ್ತಾರೆ’ ಎಂದು ಕಂಗನಾ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ನಿವೃತ್ತಿ ಪಡೆಯುವ ಮಾತಾಡಿದ ‘12th ಫೇಲ್​’ ಚಿತ್ರದ ನಟ; ಇದಕ್ಕೆ ಕಾರಣ ಕರೀನಾ ಕಪೂರ್​

‘12th ಫೇಲ್​’ ಸಿನಿಮಾವನ್ನು ನೇರವಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದು ಬೇಡ ಎಂದು ವಿಧು ವಿನೋದ್​ ಚೋಪ್ರಾ ಅವರಿಗೆ ಅನುಪಮಾ ಚೋಪ್ರಾ ಸಲಹೆ ನೀಡಿದ್ದರು. ಈ ಚಿತ್ರವನ್ನು ಯಾರೂ ಕೂಡ ಥಿಯೇಟರ್​ನಲ್ಲಿ ನೋಡುವುದಿಲ್ಲ ಎಂದು ಅವರು ಹೇಳಿದ್ದರು. ಆದರೆ ಅವರ ಊಹೆ ನಿಜವಾಗಲಿಲ್ಲ. ಹೆಂಡತಿಯ ಮಾತನ್ನು ನಿರ್ಲಕ್ಷಿಸಿ ವಿಧು ವಿನೋದ್​ ಚೋಪ್ರಾ ಅವರು ‘12th ಫೇಲ್​’ ಚಿತ್ರವನ್ನು ಥಿಯೇಟರ್​ನಲ್ಲಿ ರಿಲೀಸ್​ ಮಾಡಿದರು. ವಿಶ್ವಾದ್ಯಂತ ಈ ಸಿನಿಮಾ ಅಂದಾಜು 70 ಕೋಟಿ ರೂಪಾಯಿ ಗಳಿಸಿತು. ನಂತರ ಒಟಿಟಿಯಲ್ಲೂ ಬಿಡುಗಡೆಯಾಗಿ ಸೂಪರ್​ ಹಿಟ್​ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ