ಐಶ್ವರ್ಯಾ ರೈ-ಅಭಿಷೇಕ್​ ಡಿವೋರ್ಸ್​ ಬಗ್ಗೆ ಹಲವು ಪ್ರಶ್ನೆಗೆ ಒಂದೇ ಫೋಟೋದಲ್ಲಿದೆ ಉತ್ತರ

ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಅವರ ಸುದೀರ್ಘ 17 ವರ್ಷಗಳ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನ ಹಲವರಿಗೆ ಇದೆ. ಆದಷ್ಟು ಬೇಗ ಈ ದಂಪತಿ ವಿಚ್ಛೇದನ ಪಡೆಯುತ್ತಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಇಂಥ ಸಂದರ್ಭದಲ್ಲಿ ಐಶ್ವರ್ಯಾ ರೈ ಅವರು ಹಂಚಿಕೊಂಡ ಹೊಸ ಫೋಟೋ ವೈರಲ್​ ಆಗಿದೆ.

ಐಶ್ವರ್ಯಾ ರೈ-ಅಭಿಷೇಕ್​ ಡಿವೋರ್ಸ್​ ಬಗ್ಗೆ ಹಲವು ಪ್ರಶ್ನೆಗೆ ಒಂದೇ ಫೋಟೋದಲ್ಲಿದೆ ಉತ್ತರ
ಐಶ್ವರ್ಯಾ ರೈ ಬಚ್ಚನ್​, ಅಭಿಷೇಕ್​ ಬಚ್ಚನ್​, ಆರಾಧ್ಯ ಬಚ್ಚನ್​
Follow us
ಮದನ್​ ಕುಮಾರ್​
|

Updated on:Feb 05, 2024 | 7:33 PM

ಒಂದಷ್ಟು ದಿನಗಳಿಂದ ನಟಿ ಐಶ್ವರ್ಯಾ ರೈ ಬಚ್ಚನ್​ (Aishwarya Rai Bachchan) ಅವರ ಸಂಸಾರದ ಬಗ್ಗೆ ಇಲ್ಲಸಲ್ಲದ ಗಾಸಿಪ್​ ಕೇಳಿಬರುತ್ತಿತ್ತು. ಪತಿ ಅಭಿಷೇಕ್​ ಬಚ್ಚನ್​ ಜೊತೆ ಐಶ್ವರ್ಯಾ ರೈ ಕಿರಿಕ್​ ಮಾಡಿಕೊಂಡಿದ್ದಾರೆ ಎಂದು ಕೆಲವರು ಗಾಳಿಸುದ್ದಿ ಹಬ್ಬಿಸಿದ್ದಾರೆ. ಆ ಸುದ್ದಿಗೆ ಪೂರಕವಾಗುವ ರೀತಿಯಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್​ ಬಚ್ಚನ್​ (Abhishek Bachchan) ನಡೆದುಕೊಂಡಿದ್ದು ಕೂಡ ಅಚ್ಚರಿಗೆ ಕಾರಣ ಆಗಿತ್ತು. ಹಾಗಾದರೆ ನಿಜವಾಗಿಯೂ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ? ಶೀಘ್ರದಲ್ಲೇ ಅವರು ಡಿವೋರ್ಸ್ (Aishwarya Rai Divorce)​ ಪಡೆಯುತ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಮೂಡಿದ್ದವು. ಅವುಗಳಿಗೆಲ್ಲ ಉತ್ತರ ಎಂಬಂತೆ ಈಗ ಐಶ್ವರ್ಯಾ ರೈ ಅವರು ಒಂದು ಫೋಟೋ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಗಾಸಿಪ್​ ಮಂದಿಯ ಬಾಯಿ ಮುಚ್ಚಿಸಿದ್ದಾರೆ.

ಇಂದು (ಫೆಬ್ರವರಿ 5) ಅಭಿಷೇಕ್​ ಬಚ್ಚನ್​ ಬರ್ತ್​ಡೇ. ಆ ಪ್ರಯುಕ್ತ ಅನೇಕರು ಅವರಿಗೆ ಶುಭಾಶಯ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ಹತ್ತಿರದ ಸಂಬಂಧಿಕರೆಲ್ಲ ಸೋಶಿಯಲ್ ಮೀಡಿಯಾದಲ್ಲಿ ಅಭಿಷೇಕ್​ ಬಚ್ಚನ್​ಗೆ ಹ್ಯಾಪಿ ಬರ್ತ್​ಡೇ ಎಂದು ಶುಭ ಕೋರಿದ್ದರೂ ಕೂಡ ಐಶ್ವರ್ಯಾ ರೈ ಕಡೆಯಿಂದ ಯಾವುದೇ ವಿಶ್​ ಬಂದಿರಲಲ್ಲ. ಹಾಗಾಗಿ ಎಲ್ಲರಿಗೂ ಅನುಮಾನ ಹೆಚ್ಚಾಗಿತ್ತು. ಆದರೆ ತಡವಾಗಿದ್ದರೂ, ಸಂಜೆ ವೇಳಗೆ ಒಂದು ಸುಂದರವಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಐಶ್ವರ್ಯಾ ರೈ ಅವರು ಗಂಡನಿಗೆ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ‘ಐಶ್ವರ್ಯಾಗಿಂತ ಅಭಿಷೇಕ್ ಉತ್ತಮ ನಟ’; ಶ್ವೇತಾ ಬಚ್ಚನ್ ನೇರ ಮಾತು

ಈ ಫೋಟೋದಲ್ಲಿ ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ ಜೊತೆ ಅವರ ಮಗಳು ಆರಾಧ್ಯಾ ಕೂಡ ಇದ್ದಾಳೆ. ಮೂವರೂ ಖುಷಿಯಿಂದ ಪೋಸ್​ ನೀಡಿದ ಈ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ‘ಡಿವೋರ್ಸ್​ ಆಗುತ್ತದೆ ಅಂತ ಗಾಸಿಪ್​ ಹಬ್ಬಿಸಿದವರಿಗೆ ಈ ಫೋಟೋ ಮೂಲಕ ಐಶ್ವರ್ಯಾ ರೈ ಬಚ್ಚನ್​ ಸರಿಯಾದ ಉತ್ತರ ನೀಡಿದ್ದಾರೆ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ.

ಐಶ್ವರ್ಯಾ ರೈ ಇನ್​ಸ್ಟಾಗ್ರಾಮ್​ ಪೋಸ್ಟ್​:

‘ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಖುಷಿ, ಪ್ರೀತಿ, ಶಾಂತಿ, ನೆಮ್ಮದಿ ಮತ್ತು ಉತ್ತಮ ಆರೋಗ್ಯವನ್ನು ದೇವರ ನೀಡಲಿ. ಯಾವಾಗಲೂ ಮಿಂಚುತ್ತಿರಿ’ ಎಂದು ಪತಿಗೆ ಐಶ್ವರ್ಯಾ ರೈ ಶುಭ ಕೋರಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ಫೋಟೋಗೆ ಲಕ್ಷಾಂತರ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. 2007ರಲ್ಲಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಮದುವೆ ಬಳಿಕ ಐಶ್ವರ್ಯಾ ರೈ ಅವರು ಸಿನಿಮಾಗಳ ಆಯ್ಕೆಯಲ್ಲಿ ಅವಸರ ತೋರಿಸುತ್ತಿಲ್ಲ. ತೀರಾ ಅಪರೂಪಕ್ಕೆ ಒಂದೊಂದು ಸಿನಿಮಾಗಳನ್ನು ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅಭಿಷೇಕ್​ ಬಚ್ಚನ್​ ಅವರು ಸಿನಿಮಾಗಳ ಜೊತೆ ವೆಬ್​ ಸಿರೀಸ್​ಗಳ ಮೂಲಕವೂ ಮಿಂಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:30 pm, Mon, 5 February 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್