‘ಐಶ್ವರ್ಯಾಗಿಂತ ಅಭಿಷೇಕ್ ಉತ್ತಮ ನಟ’; ಶ್ವೇತಾ ಬಚ್ಚನ್ ನೇರ ಮಾತು

ಅಭಿಷೇಕ್ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಕಾಫಿ ವಿತ್ ಕರಣ್ ಶೋಗೆ ಬಂದಿದ್ದರು. ಈ ಶೋ ವಿವಾದದ ಮೂಲಕವೇ ಫೇಮಸ್. ಅಲ್ಲಿ ಎದುರಾಗುವ ಪ್ರಶ್ನೆಗಳಿಂದ ಸಾಕಷ್ಟು ವಿವಾದ ಹುಟ್ಟಿಕೊಂಡಿದ್ದು ಇದೆ. ಶ್ವೇತಾ ಬಚ್ಚನ್ ಆಡಿದ ಮಾತು ಈಗ ಚರ್ಚೆ ಹುಟ್ಟುಹಾಕಿದೆ.

‘ಐಶ್ವರ್ಯಾಗಿಂತ ಅಭಿಷೇಕ್ ಉತ್ತಮ ನಟ’; ಶ್ವೇತಾ ಬಚ್ಚನ್ ನೇರ ಮಾತು
‘ಐಶ್ವರ್ಯಾಗಿಂತ ಅಭಿಷೇಕ್ ಉತ್ತಮ ನಟ’; ಶ್ವೇತಾ ಬಚ್ಚನ್ ನೇರ ಮಾತು
Follow us
ರಾಜೇಶ್ ದುಗ್ಗುಮನೆ
|

Updated on:Dec 19, 2023 | 10:37 AM

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ (Aishwarya Rai) ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಇವರು ಒಟ್ಟಾಗಿ ಕಾಣಿಸಿಕೊಂಡಿರುವುದರಿಂದ ಈ ವದಂತಿಗಳಿಗೆ ಒಂದು ಹಂತದಲ್ಲಿ ಬ್ರೇಕ್ ಬಿದ್ದಿದೆ ಎಂಬುದು ಅನೇಕರ ಅಭಿಪ್ರಾಯ. ಆದರೆ, ಅನೇಕರು ಇವರ ಕಡೆಯಿಂದಲೇ ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಕಾಯುತ್ತಿದ್ದಾರೆ. ಈ ಮಧ್ಯೆ ಅಭಿಷೇಕ್ ಬಚ್ಚನ್ ಅವರ ಸಹೋದರಿ ಶ್ವೇತಾ ಬಚ್ಚನ್ ಆಡಿದ ಮಾತು ವೈರಲ್ ಆಗಿದೆ. ‘ಐಶ್ವರ್ಯಾಗಿಂತ ಅಭಿಷೇಕ್ ಉತ್ತಮ ಕಲಾವಿದ’ ಎಂದು ನೇರವಾಗಿ ಹೇಳಿದ್ದರು.

ಅಭಿಷೇಕ್ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಕಾಫಿ ವಿತ್ ಕರಣ್ ಶೋಗೆ ಬಂದಿದ್ದರು. ಈ ಶೋ ವಿವಾದದ ಮೂಲಕವೇ ಫೇಮಸ್. ಅಲ್ಲಿ ಎದುರಾಗುವ ಪ್ರಶ್ನೆಗಳಿಂದ ಸಾಕಷ್ಟು ವಿವಾದ ಹುಟ್ಟಿಕೊಂಡಿದ್ದು ಇದೆ. ಶ್ವೇತಾ ಬಚ್ಚನ್ ಆಡಿದ ಮಾತು ಈಗ ಚರ್ಚೆ ಹುಟ್ಟುಹಾಕಿದೆ. ಅನೇಕರು ಶ್ವೇತಾ ಬಚ್ಚನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

‘ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ಮಧ್ಯೆ ಯಾರು ಉತ್ತಮ ಕಲಾವಿದರು’ ಎನ್ನುವ ಪ್ರಶ್ನೆಯನ್ನು ಶ್ವೇತಾಗೆ ಕರಣ್ ಜೋಹರ್ ಕೇಳಿದರು. ಇದಕ್ಕೆ ಶ್ವೇತಾ ಬಚ್ಚನ್ ಅವರು ಒಂದು ಕ್ಷಣವೂ ಯೋಚಿಸದೇ ಅಭಿಷೇಕ್ ಬಚ್ಚನ್ ಎಂದಿದ್ದಾರೆ. ಈ ವಿಡಿಯೋ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಐಶ್ವರ್ಯಾ ಅಭಿಮಾನಿಗಳು ಶ್ವೇತಾ ಬಚ್ಚನ್ ಅವರ ಮಾತುಗಳನ್ನು ಒಪ್ಪುತ್ತಿಲ್ಲ. ಕಲಾವಿದರು ಮದುವೆ ಆದಾಗ ಯಾರು ಹೆಚ್ಚು ಉತ್ತಮ, ಯಾರ ಬಳಿ ಹೆಚ್ಚು ಆಸ್ತಿ ಇದೆ ಎಂಬಿತ್ಯಾದಿ ವಿಚಾರಗಳು ಚರ್ಚೆ ಆಗೋದು ಸಾಮಾನ್ಯ. ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚಾರದಲ್ಲೂ ಹಾಗೆಯೇ ಆಗಿದೆ.

Abhishek is just as shocked as the rest of us byu/Rheallygirl inBollyBlindsNGossip

ಇದನ್ನೂ ಓದಿ: ‘ಎಲ್ಲವನ್ನೂ ಹೇಳಿದೆ, ಎಲ್ಲವನ್ನೂ ಮಾಡಿದೆ’; ಐಶ್ವರ್ಯಾ ರೈ ಬಗ್ಗೆ ಟ್ವೀಟ್ ಮಾಡಿದ್ರಾ ಅಮಿತಾಭ್?

ಐಶ್ವರ್ಯಾ ರೈ ಬಗ್ಗೆ ಇಷ್ಟ ಆಗದ ಹಾಗೂ ಇಷ್ಟ ಆಗುವ ವಿಚಾರವನ್ನು ಶ್ವೇತಾ ಹೇಳಿದ್ದರು. ‘ಐಶ್ವರ್ಯಾ ರೈ ಮರಳಿ ಕರೆ ಮಾಡಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಇದು ಇಷ್ಟ ಆಗುವುದಿಲ್ಲ. ಅವರಲ್ಲಿ ಇಷ್ಟ ವಾಗುವ ವಿಚಾರ ಎಂದರೆ ಅವರು ಗಟ್ಟಿ ಮಹಿಳೆ ಮತ್ತು ಉತ್ತಮ ತಾಯಿ’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:34 am, Tue, 19 December 23