ಚಿತ್ರರಂಗಕ್ಕೆ ಕಾಲಿಡಲಿರುವ ಬಾಬಿ ಡಿಯೋಲ್ ಮಕ್ಕಳು; ಆದರೆ ಒಂದು ಷರತ್ತು ಹಾಕಿದ ‘ಅನಿಮಲ್’ ನಟ
ಬಾಬಿ ಡಿಯೋಲ್ ಅವರದ್ದು ಕಲಾವಿದರ ಕುಟುಂಬ. ತಂದೆ ಧರ್ಮೇಂದ್ರ, ಸಹೋದರ ಸನ್ನಿ ಡಿಯೋಲ್, ಸಹೋದರಿ ಇಶಾ ಡಿಯೋಲ್ ಮುಂತಾದವರು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಅವರ ಕುಟುಂಬದ ಹೊಸ ತಲೆಮಾರಿನ ಕಲಾವಿದರು ಚಿತ್ರರಂಗಕ್ಕೆ ಎಂಟ್ರಿ ನೀಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಬಾಲಿವುಡ್ನಲ್ಲಿ ನೆಪೋಟಿಸಂ (Nepotism) ಜಾಸ್ತಿ ಇದೆ. ಸ್ಟಾರ್ ನಟರ ಮಕ್ಕಳಿಗೆ ಸುಲಭವಾಗಿ ಅವಕಾಶ ಸಿಗುತ್ತದೆ ಎಂದು ಹಲವರು ಆರೋಪ ಮಾಡುತ್ತಲೇ ಇದ್ದಾರೆ. ಹಾಗಿದ್ದರೂ ಕೂಡ ಸ್ಟಾರ್ ಕಿಡ್ಗಳಿಗೆ ಹೊಸ ಹೊಸ ಚಾನ್ಸ್ ಸಿಗುತ್ತಲೇ ಇದೆ. ಅನೇಕರು ನೆಪೋಟಿಸಂ ಅನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈಗ ‘ಅನಿಮಲ್’ (Animal Movie) ಸಿನಿಮಾದ ಯಶಸ್ಸಿನಿಂದ ಖುಷಿಯಾಗಿರುವ ನಟ ಬಾಬಿ ಡಿಯೋಲ್ (Bobby Deol) ಕೂಡ ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಲು ಆಲೋಚನೆ ಹೊಂದಿದ್ದಾರೆ. ತಮ್ಮ ಇಬ್ಬರು ಗಂಡು ಮಕ್ಕಳಿಗೆ ಅವರು ಒಂದು ಷರತ್ತು ಹಾಕಿದ್ದಾರೆ.
ಬಾಬಿ ಡಿಯೋಲ್ ಅವರಿಗೆ ಆರ್ಯಮಾನ್ ಡಿಯೋಲ್ ಮತ್ತು ಧರಂ ಡಿಯೋಲ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮೊದಲ ಪುತ್ರನಿಗೆ 22 ವರ್ಷ ವಯಸ್ಸು. ಎರಡನೇ ಮಗನಿಗೆ 19ರ ಪ್ರಾಯ. ಇಬ್ಬರೂ ಕೂಡ ಸಿನಿಮಾ ನಟರಾಗುವ ಕನಸು ಕಂಡಿದ್ದಾರೆ. ಆದರೆ ಅವರಿಗೆ ಹಿಂದಿ ಭಾಷೆಯ ಮೇಲೆ ಹಿಡಿತ ಇಲ್ಲ. ಹಾಗಾಗಿ ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಕಲಿಯಬೇಕು ಎಂದು ಮಕ್ಕಳಿಗೆ ಬಾಬಿ ಡಿಯೋಲ್ ಅವರು ಷರತ್ತು ವಿಧಿಸಿದ್ದಾರೆ.
ಇದನ್ನೂ ಓದಿ: ‘ಅನಿಮಲ್’ ಚಿತ್ರದಲ್ಲಿ ಮಿಂಚಿದ ಬಾಬಿ ಡಿಯೋಲ್; ಆದರೂ ಫ್ಯಾನ್ಸ್ಗೆ ಇದೆ ಬೇಸರ
ಇಂದಿನ ಸ್ಟಾರ್ ಕಿಡ್ಗಳು ಇಂಗ್ಲಿಷ್ ವ್ಯಾಮೋಹ ಹೊಂದಿದ್ದಾರೆ. ಇಂಗ್ಲಿಷ್ನಲ್ಲೇ ಶಿಕ್ಷಣ ಪಡೆದ ಅವರಿಗೆ ಮಾತೃಭಾಷೆಯಲ್ಲಿ ಸರಿಯಾಗಿ ಮಾತನಾಡಲು ಬರುವುದಿಲ್ಲ. ಇತ್ತೀಚೆಗೆ ಅಜಯ್ ದೇವಗನ್ ಅವರ ಪುತ್ರಿ ನಿಸಾ ದೇವಗನ್ ಅವರು ಹಿಂದಿಯಲ್ಲಿ ಮಾತನಾಡಲು ಕಷ್ಟಪಟ್ಟ ವಿಡಿಯೋ ವೈರಲ್ ಆಗಿತ್ತು. ಆದರೆ ಬಾಬಿ ಡಿಯೋಲ್ ಅವರು ತಮ್ಮ ಮಕ್ಕಳನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಟಾರ್ ಕಿಡ್ಗಳ ಹೆಸರನ್ನು ಪ್ರಸ್ತಾಪಿಸಿಲ್ಲ.
ಇದನ್ನೂ ಓದಿ: ‘ಮೂವರು ಪತ್ನಿಯರನ್ನು ಹೊಂದಿದ ಅಬ್ರಾರ್ ವಿಲನ್ ಅಲ್ಲ, ಆತ ರೊಮ್ಯಾಂಟಿಕ್’: ಬಾಬಿ ಡಿಯೋಲ್
ಬಾಬಿ ಡಿಯೋಲ್ ಅವರದ್ದು ಕಲಾವಿದರ ಕುಟುಂಬ. ತಂದೆ ಧರ್ಮೇಂದ್ರ, ಸಹೋದರ ಸನ್ನಿ ಡಿಯೋಲ್, ಸಹೋದರಿ ಇಶಾ ಡಿಯೋಲ್ ಮುಂತಾದವರು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಅವರ ಕುಟುಂಬದ ಹೊಸ ತಲೆಮಾರಿನ ಕಲಾವಿದರು ಚಿತ್ರರಂಗಕ್ಕೆ ಎಂಟ್ರಿ ನೀಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಬಾಬಿ ಡಿಯೋಲ್ ಅವರ ಮಕ್ಕಳು ಹೀರೋ ಆಗಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.