AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಎಲ್ಲರಿಗೂ ಶಾಕಿಂಗ್ ನ್ಯೂಸ್ ಕೊಡ್ತಿನೀ’ ಎಂದಿದ್ದ ನಟಿ ಪೂನಂ ಪಾಂಡೆ

ಪೂನಂ ಪಾಂಡೆ ಹೇಳಿದ ಮಾತು ನಿಜವೇನೋ ಆಗಿದೆ. ಎಲ್ಲರಿಗೂ ಶಾಕ್ ಆಗೋ ಸುದ್ದಿಯನ್ನೇ ನೀಡಿದ್ದಾರೆ. ಆದರೆ, ಇದನ್ನು ನೋಡಲು ಅವರೇ ಇಲ್ಲ. ಅವರ ಸಾವಿನ ಸುದ್ದಿ ಅನೇಕರಿಗೆ ಶಾಕ್ ಮೂಡಿಸಿದೆ. ಅವರಿಗೆ ಇನ್ನೂ 32 ವರ್ಷ ಆಗಿತ್ತು. ಬದುಕಿ ಬಾಳಬೇಕಿದ್ದ ಅವರು ದುರಂತ ಅಂತ್ಯ ಕಂಡರು.

‘ಎಲ್ಲರಿಗೂ ಶಾಕಿಂಗ್ ನ್ಯೂಸ್ ಕೊಡ್ತಿನೀ’ ಎಂದಿದ್ದ ನಟಿ ಪೂನಂ ಪಾಂಡೆ
ಪೂನಂ
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 03, 2024 | 9:07 AM

Share

ಮಾಡೆಲ್ ಹಾಗೂ ನಟಿ ಪೂನಂ ಪಾಂಡೆ (Poonam Pandey) ಸಾವು ಅನೇಕರಿಗೆ ಶಾಕ್ ತಂದಿದೆ. ಅವರು ಇಲ್ಲ ಎಂಬ ವಿಚಾರವನ್ನು ಒಪ್ಪಿಕೊಳ್ಳೋಕೆ ಅಭಿಮಾನಿಗಳ ಬಳಿ ಸಾಧ್ಯವಾಗುತ್ತಿಲ್ಲ. ನಟಿಗೆ ಗರ್ಭಕಂಠ ಕ್ಯಾನ್ಸರ್ ಇತ್ತು ಎನ್ನಲಾಗಿದೆ. ಈ ಕ್ಯಾನ್ಸರ್ ಇರುವ ವ್ಯಕ್ತಿ ಏಕಾಏಕಿ ಮೃತಪಡುವುದಿಲ್ಲ. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೆಲವು ವರದಿಗಳ ಪ್ರಕಾರ ಅವರು ಅತಿಯಾಗಿ ಡ್ರಗ್ಸ್ ಸೇವನೆ ಮಾಡಿದ್ದರು ಎನ್ನಲಾಗುತ್ತಿದೆ. ಈ ಮಧ್ಯೆ ಅವರ ಹಳೆಯ ಸಂದರ್ಶನ ಒಂದು ವೈರಲ್ ಆಗಿದೆ. ಇದರಲ್ಲಿ ಪೂನಂ ಪಾಂಡೆ ಎಲ್ಲರಿಗೂ ಶಾಕ್ ನೀಡುವುದಾಗಿ ಹೇಳಿದ್ದರು.

ಕಳೆದ ವರ್ಷ ಪೂನಂ ಪಾಂಡೆ ಅವರು ಬ್ರೈಟ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದ್ದರು. ‘ನಿಮ್ಮ ಮುಂದೆ ಒಂದು ದೊಡ್ಡ ಸುದ್ದಿ ಬರುತ್ತಿದೆ. ಎಲ್ಲರಿಗೂ ಸರ್​ಪ್ರೈಸ್ ಆಗಲಿದೆ. ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡೋದು ಎಂದರೆ ನನಗೆ ಖುಷಿ. ನಾನು ಬದಲಾಗಿದ್ದದೇನೆ ಎಂದು ಜನರಿಗೆ ತಿಳಿದಾಗ ಸರ್​ಪ್ರೈಸ್ ಎನಿಸುತ್ತದೆ. ಶೀಘ್ರವೇ ದೊಡ್ಡ ಸುದ್ದಿ ಸಿಗಲಿದೆ. ನೀವು ಅದರ ಭಾಗವಾಗಲಿದ್ದೀರಿ. ಎಲ್ಲರಿಗೂ ಶಾಕ್ ಆಗಲಿದೆ. ನಿಮ್ಮ ಪ್ರತಿಕ್ರಿಯೆ ನೋಡಲು ಕಾದಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದರು.

ಪೂನಂ ಪಾಂಡೆ ಹೇಳಿದ ಮಾತು ನಿಜವೇನೋ ಆಗಿದೆ. ಎಲ್ಲರಿಗೂ ಶಾಕ್ ಆಗೋ ಸುದ್ದಿಯನ್ನೇ ಅವರು ನೀಡಿದ್ದಾರೆ. ಆದರೆ, ಇದನ್ನು ನೋಡಲು ಅವರೇ ಇಲ್ಲ. ಅವರ ಸಾವಿನ ಸುದ್ದಿ ಅನೇಕರಿಗೆ ಅಚ್ಚರಿ ಹಾಗೂ ಶಾಕ್ ಮೂಡಿಸಿದೆ. ಅವರಿಗೆ ಇನ್ನೂ 32 ವರ್ಷ ಆಗಿತ್ತು. ಬಾಳಿ ಬದುಕ ಬೇಕಿದ್ದ ಅವರು ಈ ರೀತಿ ದುರಂತ ಅಂತ್ಯ ಕಂಡಿದ್ದು ಅನೇಕರಿಗೆ ಬೇಸರ ಮೂಡಿಸಿದೆ.

ಪೂನಂ ಪಾಂಡೆ ಸಾವಿನ ಬಗ್ಗೆ ಅನುಮಾನ

ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪೂನಂ ಸಾವಿನ ಬಗ್ಗೆ ಪೋಸ್ಟ್ ಮಾಡಲಾಗಿದೆ. ‘ನಮ್ಮ ಪ್ರೀತಿಯ ಪೂನಂನ ಕಳೆದುಕೊಂಡಿದ್ದೇವೆ’ ಎಂದು ಪೋಸ್ಟ್ ಮಾಡಲಾಗಿತ್ತು. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿತ್ತು. ಈ ಮೊದಲು ಪ್ರಚಾರಕ್ಕಾಗಿ ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದರು ಪೂನಂ. ಹೀಗಾಗಿ, ಇದು ಕೂಡ ಪಬ್ಲಿಸಿಟಿ ಸ್ಟಂಟ್ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಅವರ ಸಾವನ್ನು ಮ್ಯಾನೇಜರ್ ಖಚಿತಪಡಿಸಿದ್ದಾರೆ. ಆ ಬಳಿಕವೇ ಎಲ್ಲರಿಗೂ ಪೂನಂ ಪಾಂಡೆ ಸಾವಿನ ಬಗ್ಗೆ ಖಾತ್ರಿ ಆಗಿದೆ.

ಇದನ್ನೂ ಓದಿ: ಪೂನಂ ಪಾಂಡೆ ಅಂತಿಮ ಸಂಸ್ಕಾರ ನಡೆದಿದ್ದು ಎಲ್ಲಿ? ಇಲ್ಲಿದೆ ವಿವರ..

ಸಾಯುವುದಕ್ಕೂ ಮೊದಲು ಪೂನಂ ಅವರು ಡ್ರಗ್ಸ್ ಸೇವನೆ ಮಾಡಿದ್ದರು ಎನ್ನಲಾಗಿದೆ. ಡ್ರಗ್ಸ್ ಹೆಚ್ಚಾಗಿದ್ದರಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪೂನಂ ಪಾಂಡೆ ಅವರ ಅಂತ್ಯಕ್ರಿಯೆ ನಡೆದಿದೆ. ಇದು ಅವರ ಹುಟ್ಟೂರು. ಹೀಗಾಗಿ ಇಲ್ಲಿಯೇ ಅವರ ಅಂತ್ಯಕ್ರಿಯೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್