ಪೂನಂ ಪಾಂಡೆ ಅಂತಿಮ ಸಂಸ್ಕಾರ ನಡೆದಿದ್ದು ಎಲ್ಲಿ? ಇಲ್ಲಿದೆ ವಿವರ..

ನಟಿ ಪೂನಂ ಹಾಯಾಗಿ ಓಡಾಡಿಕೊಂಡೇ ಇದ್ದರು. ಅವರು ಕ್ಯಾನ್ಸರ್​ನಿಂದ ಮೃತಪಟ್ಟರು ಎಂದು ಅವರ ಇನ್​ಸ್ಟಾಗ್ರಾಮ್ ಮೂಲಕ ಪೋಸ್ಟ್ ಮಾಡಲಾಯಿತು. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಅನೇಕರು ಇದನ್ನು ನಂಬಲು ಹೋಗಿಲ್ಲ. ಆ ಬಳಿಕ ಅವರ ಮ್ಯಾನೇಜರ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಪೂನಂ ಪಾಂಡೆ ಅಂತಿಮ ಸಂಸ್ಕಾರ ನಡೆದಿದ್ದು ಎಲ್ಲಿ? ಇಲ್ಲಿದೆ ವಿವರ..
ಪೂನಂ
Follow us
|

Updated on: Feb 03, 2024 | 6:59 AM

ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey)  ಅವರು ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕಿಂಗ್ ಎನಿಸಿದೆ. ಕೇವಲ 32ನೇ ವಯಸ್ಸಿಗೆ ಅವರು ಕೊನೆಯುಸಿರು ಎಳೆದರು. ಕಳೆದ ಕೆಲ ದಿನಗಳ ಹಿಂದಷ್ಟೇ ಹಾಯಾಗಿ ಸುತ್ತಾಡಿಕೊಂಡಿದ್ದ ಅವರು ಈಗ ಏಕಾಏಕಿ ಮೃತಪಟ್ಟರು ಎಂದರೆ ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ. ಪೂನಂ ಪಾಂಡೆ ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎನ್ನಲಾಗಿದೆ. ಶುಕ್ರವಾರ (ಫೆಬ್ರವರಿ 2) ರಾತ್ರಿ ವೇಳೆಗೆ ಅಂತ್ಯ ಸಂಸ್ಕಾರ ಪೂರ್ಣಗೊಂಡಿದೆ ಎಂದು ಅವರ ಮ್ಯಾನೇಜರ್ ಪಾರುಲ್ ಚಾವ್ಲಾ ತಿಳಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕೋರಿದ್ದಾರೆ.

ಸುದ್ದಿ ಗೊತ್ತಾಗಿದ್ದು ಯಾವಾಗ?

ಪೂನಂ ಪಾಂಡೆ ಇತ್ತೀಚೆಗೆ ಹಾಯಾಗಿ ಓಡಾಡಿಕೊಂಡೇ ಇದ್ದರು. ಅವರು ಏಕಾಏಕಿ ಗರ್ಭಕಂಠ ಕ್ಯಾನ್ಸರ್​ನಿಂದ ಮೃತಪಟ್ಟರು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಯಿತು. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಹಾಗೂ ಶಾಕ್ ಆಗಿದೆ. ಅನೇಕರು ಇದನ್ನು ನಂಬಲು ಹೋಗಿಲ್ಲ. ಆ ಬಳಿಕ ಅವರ ಮ್ಯಾನೇಜರ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಪೂನಂ ಪಾಂಡೆ ಬಗೆಗಿನ ಟ್ವೀಟ್

ಬಂದಿದೆ ಡ್ರಗ್ಸ್ ವಾಸನೆ

ಹೃದಯಾಘಾತದಿಂದ ಏಕಾಏಕಿ ಮೃತಪಟ್ಟರು ಎಂದರೆ ನಂಬಬಹುದು. ಆದರೆ, ಕ್ಯಾನ್ಸರ್​ ಉಂಟಾದರೆ ಏಕಾಏಕಿ ಮೃತಪಡಲು ಸಾಧ್ಯವೇ ಇಲ್ಲ. ಕಳೆದ ಮೂರು ದಿನಗಳ ಹಿಂದಷ್ಟೇ ಅವರು ಖುಷಿ ಖುಷಿಯಿಂದ ಪೋಸ್ಟ್ ಹಾಕಿದ್ದರು. ಪಾರ್ಟಿ ಮಾಡಿದ್ದರು. ಇದಾದ ಬಳಿಕ ಅವರು ಮೃತಪಟ್ಟಿದ್ದಾರೆ. ಡ್ರಗ್ಸ್ ಓವರ್​ಡೋಸ್​ನಿಂದ ಈ ರೀತಿ ಆಗಿದೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಪೂನಂ ಪಾಂಡೆ ಸಾವಿನ ಕುರಿತು ಅನುಮಾನ: ಸಾವಿಗೆ ಮಾದಕ ವಸ್ತು ಕಾರಣ?

ನಟನೆ ಬಗ್ಗೆ

2013ರಲ್ಲಿ ‘ನಶಾ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು ಪೂನಂ. ವಿದ್ಯಾರ್ಥಿ ಜೊತೆ ಅಕ್ರಮ ಲೈಂಗಿಕ ಸಂಬಂಧ ಇಟ್ಟುಕೊಳ್ಳುವ ಶಿಕ್ಷಕಿಯ ಪಾತ್ರದಲ್ಲಿ ಅವರು ನಟಿಸಿದ್ದರು. ಸಿನಿಮಾಗಳಲ್ಲಿ ಹಲವು ಬೋಲ್ಡ್ ಪಾತ್ರಗಳನ್ನು ಮಾಡಿ ಸುದ್ದಿ ಆಗಿದ್ದರು. 2018ರಲ್ಲಿ ರಿಲೀಸ್ ಆದ ‘ಜರ್ನಿ ಆಫ್ ಕರ್ಮ’ ಅವರ ನಟನೆಯ ಕೊನೆಯ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ