ಯುವತಿಗೆ ಕಿಸ್ ಮಾಡಿದ ಪ್ರಕರಣ; ‘ಸ್ಕ್ವಿಡ್ ಗೇಮ್’ ಕಲಾವಿದನಿಗೆ ಒಂದು ವರ್ಷ ಜೈಲು ಶಿಕ್ಷೆ
ಸಂತ್ರಸ್ತೆಯು ವಿಶೇಷ ಮನವಿ ಮಾಡಿಕೊಂಡಿದ್ದರಿಂದ ಪ್ರಕರಣವನ್ನು ಮತ್ತೆ ವಿಚಾರಣೆ ಮಾಡಲಾಯಿತು. ಶುಕ್ರವಾರ (ಫೆಬ್ರವರಿ 2) ನಡೆದ ವಿಚಾರಣೆಯಲ್ಲಿ ಓ ಯಂಗ್ ಸೂ ಅವರ ತಪ್ಪು ಸಾಬೀತಾಯಿತು. ಹೀಗಾಗಿ, ಜಿಲ್ಲಾ ನ್ಯಾಯಾಲಯ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ವರದಿ ಆಗಿದೆ.

ದಕ್ಷಿಣ ಕೊರಿಯಾದಲ್ಲಿ ಸಿದ್ಧವಾದ ‘ಸ್ಕ್ವಿಡ್ ಗೇಮ್’ (Squid Game) ಸೀರಿಸ್ 2021ರಲ್ಲಿ ನೆಟ್ಫ್ಲಿಕ್ಸ್ ಮೂಲಕ ಪ್ರಸಾರ ಕಂಡಿದೆ. ಕೊರಿಯಾ ಭಾಷೆಯ ಜೊತೆಗೆ ಇಂಗ್ಲಿಷ್ ಮೊದಲಾದ ಭಾಷೆಗಳಲ್ಲೂ ಈ ಸೀರಿಸ್ ಲಭ್ಯವಿದೆ. ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸುವ ಕೆಲವರ ಕಥೆ ಇಟ್ಟುಕೊಂಡು ಈ ಸೀರಿಸ್ ಮಾಡಲಾಗಿತ್ತು. ಈ ರಿಯಾಲಿಟಿ ಶೋನಲ್ಲಿ ಎಲಿಮಿನೇಷನ್ ಎಂದರೆ ಆಟದಿಂದ ಹೊರ ಹಾಕುವುದಿಲ್ಲ. ಅಲ್ಲಿ ನಡೆಯೋದು ಹತ್ಯೆ. ಈ ಸೀರಿಸ್ನಲ್ಲಿ ಪ್ರಮುಖ ಪಾತ್ರವಹಿಸಿದ್ದ, ಇಡೀ ಸರಣಿಗೆ ಟ್ವಿಸ್ಟ್ ಕೊಟ್ಟಿದ್ದ ಓ ಯಂಗ್ ಸೂ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಓ ಯಂಗ್ ಸೂ ಅವರಿಗೆ 79 ವರ್ಷ ವಯಸ್ಸು. 2017ರಲ್ಲಿ ಅವರು ಯುವತಿಯೊಬ್ಬರನ್ನು ಎಳೆದು ತಬ್ಬಿಕೊಂಡು ಕಿಸ್ ಮಾಡಿದ್ದರು. 2021ರ ಡಿಸೆಂಬರ್ನಲ್ಲಿ ಯುವತಿ ಕೇಸ್ ದಾಖಲು ಮಾಡಿದ್ದರು. ಆ ಬಳಿಕ ಕೋರ್ಟ್ ಅರ್ಜಿ ವಿಚಾರಣೆ ನಡೆಸಿತು. 2022ರಲ್ಲಿ ಈ ಪ್ರಕರಣವನ್ನು ರದ್ದು ಮಾಡಲಾಗಿತ್ತು.
ಆದರೆ, ಸಂತ್ರಸ್ತೆಯು ವಿಶೇಷ ಮನವಿ ಮಾಡಿಕೊಂಡಿದ್ದರಿಂದ ಪ್ರಕರಣವನ್ನು ಪುನರ್ ವಿಚಾರಣೆ ಮಾಡಲಾಯಿತು. ಶುಕ್ರವಾರ (ಫೆಬ್ರವರಿ 2) ನಡೆದ ವಿಚಾರಣೆಯಲ್ಲಿ ಓ ಯಂಗ್ ಸೂ ಅವರ ತಪ್ಪು ಸಾಬೀತಾಗಿದೆ. ಹೀಗಾಗಿ, ಜಿಲ್ಲಾ ನ್ಯಾಯಾಲಯ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಮಕ್ಕಳು ಹಾಗೂ ಯುವ ನಟಿಯರ ಜೊತೆ ಅವರು ಕೆಲಸ ಮಾಡುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ. ಇದರಿಂದ ಅವರಿಗೆ ಹಿನ್ನಡೆ ಆಗಿದೆ.
‘ಓ ಯಂಗ್ ಸೂ ತಮ್ಮ ಜವಾಬ್ದಾರಿ ಮರೆತಿದ್ದಾರೆ. ಸಂತ್ರಸ್ತೆಯನ್ನು ತನ್ನ ಮಗಳು ಎನ್ನುತ್ತಿದ್ದರು. ಸಂತಸ್ತೆ ಬಂದು ಕ್ಷಮೆ ಕೇಳಲು ಸೂಚಿಸಿದರು. ಆದರೆ, ಅವರು ಇದಕ್ಕೆ ಒಪ್ಪಲಿಲ್ಲ’ ಎಂದು ಸಂತ್ರಸ್ತೆ ಪರ ವಕೀಲರು ಹೇಳಿದ್ದಾರೆ. ಓ ಯಂಗ್ ಸೂ ಅವರ ಸಿನಿಮಾ ಕೆಲಸಗಳು ಅರ್ಧಕ್ಕೆ ನಿಲ್ಲಲಿದೆ.
ಇದನ್ನೂ ಓದಿ: ‘ಸ್ಕ್ವಿಡ್ ಗೇಮ್ಸ್’ ರಿಯಾಲಿಟಿ ಶೋ: ಗೆದ್ದವರಿಗೆ 37 ಕೋಟಿ ಬಹುಮಾನ
ಓ ಯಂಗ್ ಸೂ ಚಿತ್ರರಂಗಕ್ಕೆ ಕಾಲಿಟ್ಟಿದ್ದು 1994ರಲ್ಲಿ. ಅವರು ಚಿತ್ರರಂಗದಲ್ಲಿ 30 ವರ್ಷ ಕಳೆದಿದ್ದಾರೆ. ಹಲವು ಸಿನಿಮಾ ಹಾಗೂ ಸೀರಿಸ್ಗಳಲ್ಲಿ ಅವರು ನಟಿಸಿದ್ದಾರೆ. ಅವರಿಗೆ ‘ಸ್ಕ್ವಿಡ್ ಗೇಮ್’ನಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ‘ಗೋಲ್ಡನ್ ಗ್ಲೋಬ್’ ಅಂಥ ಅವಾರ್ಡ್ಗಳು ಅವರಿಗೆ ಸಿಕ್ಕಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:40 am, Sat, 3 February 24




