AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭರ್ಜರಿ ಮೈಲೇಜ್ ನೀಡುವ ಮಹೀಂದ್ರಾ ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಸೀರಿಸ್ ವಾಹನ ಬಿಡುಗಡೆ

ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಸುಪ್ರೊ ವಾಣಿಜ್ಯ ವಾಹನಗಳ ಸರಣಿಯಲ್ಲಿ ಹೊಸದಾಗಿ ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಸೀರಿಸ್ ಬಿಡುಗಡೆ ಮಾಡಿದೆ.

ಭರ್ಜರಿ ಮೈಲೇಜ್ ನೀಡುವ ಮಹೀಂದ್ರಾ ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಸೀರಿಸ್ ವಾಹನ ಬಿಡುಗಡೆ
ಮಹೀಂದ್ರಾ ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಸೀರಿಸ್ ವಾಹನ ಬಿಡುಗಡೆ
Praveen Sannamani
|

Updated on: Jan 18, 2024 | 10:01 PM

Share

ವಾಣಿಜ್ಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಅಂಡ್ ಮಹೀಂದ್ರಾ (Mahindra & Mahindra) ವಾಣಿಜ್ಯ ವಾಹನಗಳ ವಿಭಾಗವು ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಸೀರಿಸ್ ಲಘು ವಾಣಿಜ್ಯ ವಾಹನವನ್ನು ಬಿಡುಗಡೆ ಮಾಡಿದ್ದು, ಹೊಸ ವಾಣಿಜ್ಯ ವಾಹನವು ಎಕ್ಸ್ ಶೋರೂಂ ಪ್ರಕಾರ ರೂ. 6.61 ಲಕ್ಷ ಆರಂಭಿಕ ಬೆಲೆ ಹೊಂದಿದೆ.

Mahindra Supro Profit Truck Excel Series (2)

ಭಾರತದಲ್ಲಿ ಮೊದಲ ಬಾರಿಗೆ 2015ರಲ್ಲಿ ಬಿಡುಗಡೆಯಾಗಿದ್ದ ಸುಪ್ರೊ ಸರಣಿ ವಾಣಿಜ್ಯ ವಾಹನವು ತನ್ನ ವಿಶೇಷ ಫೀಚರ್ಸ್ ಗಳೊಂದಿಗೆ ಭಾರೀ ಪ್ರಮಾಣದ ಬೇಡಿಕೆ ದಾಖಲಿಸಿದ್ದು, ಇದೀಗ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಹೊಸ ವಾಣಿಜ್ಯ ವಾಹನವು ಡೀಸೆಲ್ ಮತ್ತು ಸಿಎನ್ ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡೀಸೆಲ್ ಮಾದರಿಯು ರೂ. 6.61 ಲಕ್ಷ ಬೆಲೆ ಹೊಂದಿದ್ದರೆ ಸಿಎನ್ ಜಿ ಮಾದರಿಯು ರೂ. 6.93 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಫಾಸ್ಟ್‌ಟ್ಯಾಗ್‌ ಬಳಕೆಗೆ ಗುಡ್ ಬೈ! ಹೆದ್ದಾರಿಗಳಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ದವಾದ ಜಿಪಿಎಸ್ ಟೋಲ್ ಸಿಸ್ಟಂ..

ಮಹೀಂದ್ರಾ ಯಶಸ್ವಿ ಸುಪ್ರೊ ಪ್ಲಾಟ್‌ಫಾರ್ಮ್‌ ಹಲವಾರು ವಿಶೇಷತೆಗಳಿಗೆ ಕಾರಣವಾಗಿದ್ದು, ಇದು ಉನ್ನತ ಮಟ್ಟದ ಉತ್ಪಾದನಾ ಗುಣಮಟ್ಟ, ಅಸಾಧಾರಣ ಶೈಲಿ, ಸಾಟಿಯಿಲ್ಲದ ಸುರಕ್ಷತೆ ಮತ್ತು ಹೊಸ ಮಾದರಿಯ ತಾಂತ್ರಿಕ ಸೌಕರ್ಯಗಳೊಂದಿಗೆ ಕೊನೆಯ ಮೈಲಿ ಸಂಪರ್ಕವನ್ನು ಮರು ವ್ಯಾಖ್ಯಾನಿಸಲು ಸಹಕಾರಿಯಾಗಿದೆ. ಇದೀಗ ಹೊಸ ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಕೂಡಾ ವಿವಿಧ ಎಂಜಿನ್ ಆಯ್ಕೆಗಳು ಆಧುನಿಕ ಶೈಲಿಯ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಪ್ರೇರಿತ ಸುರಕ್ಷಾ ಫೀಚರ್ಸ್ ಮತ್ತು ತಂತ್ರಜ್ಞಾನದೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲು ಸಿದ್ದವಾಗಿದೆ.

Mahindra Supro Profit Truck Excel Series (1)

ಸುಪ್ರೊ ಪ್ರಾಫಿಟ್ ಟ್ರಕ್ ಎಕ್ಸೆಲ್ ಡೀಸೆಲ್ ಮಾದರಿಯು 900 ಕೆಜಿ ಅತ್ಯುತ್ತಮ-ಇನ್-ಕ್ಲಾಸ್ ಪೇಲೋಡ್ ಸಾಮರ್ಥ್ಯ ಹೊಂದಿದ್ದು, ಸಿಎನ್ ಜಿ ಮಾದರಿಯು ಗರಿಷ್ಠ 750 ಕೆಜಿ ಪೇಲೋಡ್ ಸಾಮರ್ಥ್ಯ ಹೊಂದಿದೆ. ಇದು 2050 ಎಂಎಂ ವೀಲ್‌ಬೇಸ್‌ ಮೂಲಕ ಪೇಲೋಡ್ ಸ್ಥಿರತೆ ಕಾಯ್ದುಕೊಳ್ಳುವ ಮೂಲಕ ಆಂಟಿ-ರೋಲ್ ಬಾರ್‌ನೊಂದಿಗೆ ವರ್ಧಿತ ಸುರಕ್ಷತಾ ವೈಶಿಷ್ಟ್ಯವು ಗಮನಸೆಳೆಯುತ್ತದೆ. ಹಾಗೆಯೇ ಹೊಸ ಸುಪ್ರೊ ಎಕ್ಸೆಲ್ ಡೀಸೆಲ್ ಮಾದರಿಯು 23.6 ಕಿಮೀ/ಲೀ ಇಂಧನ ದಕ್ಷತೆಯನ್ನು ಹೊಂದಿದ್ದರೆ ಸಿಎನ್ ಜಿ ಮಾದರಿಯು ಪ್ರತಿ ಕೆಜಿಗೆ 24.8 ಕಿಮೀ ಮೈಲೇಜ್ ನೀಡುತ್ತದೆ. ಪೂರ್ತಿ ಟ್ಯಾಂಕ್ ನೊಂದಿಗೆ ಸಿಎನ್ ಜಿ ಮಾದರಿಯು ಗರಿಷ್ಠ 500 ಕಿಮೀ ಗಿಂತಲೂ ಹೆಚ್ಚು ಮೈಲೇಜ್ ನೀಡಲಿದ್ದು, ಇದು ದೂರದ ಪ್ರಯಾಣದಲ್ಲಿ ಸಾಕಷ್ಟು ಸಹಕಾರಿಯಾಗಲಿದೆ ಎನ್ನಬಹುದು.

ಇದನ್ನೂ ಓದಿ: ಭಾರತದಲ್ಲಿ ಹೊಸ ಯೋಜನೆಗಾಗಿ ರೂ. 38,200 ಕೋಟಿ ಹೂಡಿಕೆ ಘೋಷಿಸಿದ ಮಾರುತಿ ಸುಜುಕಿ

ಜೊತೆಗೆ ಹೊಸ ವಾಣಿಜ್ಯ ವಾಹನವು ಬಲವರ್ಧಿತ ಸಸ್ಷೆಂಷನ್ ನೊಂದಿಗೆ ದೃಢತೆ ಮತ್ತು ಸ್ಥಿತಿಸ್ಥಾಪಕತ್ವದ ಹೊಸ ಮಾನದಂಡವನ್ನು ಪೂರೈಸಿದ್ದು, ಈ ಮೂಲಕ ಇದು ಹೆಚ್ಚಿನ ಕಾರ್ಯಕ್ಷಮತೆಯೊಂದಿಗೆ ಡೀಸೆಲ್ ಮತ್ತು ಸಿಎನ್ ಜಿ ಮಾದರಿಗಳು ಕ್ರಮವಾಗಿ 55 ಎನ್ಎಂ ಮತ್ತು 60 ಎನ್ಎಂ ಟಾರ್ಕ್ ಅನ್ನು ಒದಗಿಸುತ್ತವೆ. ಇದರೊಂದಿಗೆ ಹೊಸ ವಾಣಿಜ್ಯ ವಾಹನವು ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ವಲಯದಲ್ಲಿ ಬೇಡಿಕೆಗೆ ಅನುಗುಣವಾಗಿ ವಾಲ್ಯೂಮೆಟ್ರಿಕ್ ಸರಕುಗಳನ್ನು ಸಾಗಿಸಲು ವಿನ್ಯಾಸಗೊಳಿಸಲಾಗಿದೆ.