AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಹೊಸ ಯೋಜನೆಗಾಗಿ ರೂ. 38,200 ಕೋಟಿ ಹೂಡಿಕೆ ಘೋಷಿಸಿದ ಮಾರುತಿ ಸುಜುಕಿ

ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್ ಭಾರತದಲ್ಲಿ ಹೊಸ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ.

ಭಾರತದಲ್ಲಿ ಹೊಸ ಯೋಜನೆಗಾಗಿ ರೂ. 38,200 ಕೋಟಿ ಹೂಡಿಕೆ ಘೋಷಿಸಿದ ಮಾರುತಿ ಸುಜುಕಿ
Praveen Sannamani
|

Updated on:Jan 10, 2024 | 10:15 PM

Share

ವೈಬ್ರೆಂಟ್ ಗುಜರಾತ್ ಶೃಂಗಸಭೆಯಲ್ಲಿ ಸುಜುಕಿ ಮೋಟಾರ್ ಕಾರ್ಪೊರೇಷನ್‌ (Suzuki Motor Corporation) ಕಂಪನಿಯು ಭಾರತದಲ್ಲಿ ಉದ್ಯಮ ವಿಸ್ತರಣೆ ಮತ್ತು ಉತ್ಪಾದನಾ ಸಾಮಾರ್ಥ್ಯ ಹೆಚ್ಚಳಕ್ಕಾಗಿ ಹೊಸ ಹೂಡಿಕೆ ಘೋಷಣೆ ಮಾಡಿದ್ದು, ಹೊಸ ಯೋಜನೆಗಳಿಗಾಗಿ ಒಟ್ಟು ರೂ. 38,200 ಕೋಟಿ ರೂಪಾಯಿಗಳ ಹೂಡಿಕೆಯನ್ನು ಘೋಷಿಸಿದ್ದಾರೆ. ಹೊಸ ಹೊಡಿಕೆ ಬಗ್ಗೆ ಸುಜುಕಿ ಗ್ಲೊಬಲ್ ಸಿಇಒ ತೋಶಿಹಿರೊ ಸುಜುಕಿ ಅಧಿಕೃತವಾಗಿ ಘೋಷಣೆ ಮಾಡಿದ್ದು, ಹೊಸ ಯೋಜನೆಗಳಲ್ಲಿ ಹೊಸ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕ ಮತ್ತು ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಕಾರು ಉತ್ಪಾದನಾ ಘಟಕಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಲಾಗಿದೆ.

Suzuki Invest (2)

ವೈಬ್ರೆಂಟ್ ಗುಜರಾತ್‌ 10 ನೇ ಜಾಗತಿಕ ಶೃಂಗಸಭೆಯಲ್ಲಿ ಸಭೆಯಲ್ಲಿ ಮಾತನಾಡಿದ ತೋಶಿಹಿರೊ ಸುಜುಕಿ, ಭಾರತದ ಆರ್ಥಿಕ ಬೆಳವಣಿಗೆ ಕುರಿತು ಅಚ್ಚರಿ ವ್ಯಕ್ತಪಡಿಸುತ್ತಾ ನಾವು ಭವಿಷ್ಯದಲ್ಲಿ ಮತ್ತಷ್ಟು ಹೊಸ ಹೂಡಿಕೆಗಳಿಗೆ ಉತ್ಸುಕರಾಗಿದ್ದೇವೆ ಎಂದಿದ್ದಾರೆ. ಹೊಸ ಹೂಡಿಕೆಯಲ್ಲಿ ಮೊದಲು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ತೆರೆಯಲಾಗುತ್ತಿದ್ದು, ಈ ವರ್ಷಾಂತ್ಯಕ್ಕೆ ಹೊಸ ಇವಿ ಉತ್ಪಾದನಾ ಘಟಕದಿಂದಲೇ ಭಾರತದಲ್ಲಿ ಮಾತ್ರವಲ್ಲದೆ ಜಪಾನ್ ಮತ್ತು ಯುರೋಪಿಯನ್ ರಾಷ್ಟ್ರಗಳಿಗೂ ರಫ್ತು ಮಾಡಲು ನಾವು ಯೋಜಿಸಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಬೆಸ್ಟ್ ಮೈಲೇಜ್ ಸಿಎನ್​ಜಿ ಕಾರುಗಳಿವು!

ಗುಜರಾತ್ ಆರಂಭವಾಗುತ್ತಿರುವ ಮಾರುತಿ ಸುಜುಕಿ ಹೊಸ ಇವಿ ಉತ್ಪಾದನಾ ಘಟಕವು ವಾರ್ಷಿಕವಾಗಿ 2.5 ಲಕ್ಷ ವಾಹನ ಉತ್ಪಾದನಾ ಸಾಮರ್ಥ್ಯ ಹೊಂದಿಲಿದ್ದು, ಇದಕ್ಕಾಗಿ ರೂ. 3,200 ಕೋಟಿ ಆರಂಭಿಕ ಹೂಡಿಕೆ ಮಾಡಲಾಗುತ್ತಿದೆ. ಇದರೊಂದಿಗೆ ಸಾಮಾನ್ಯ ಕಾರುಗಳ ಉತ್ಪಾದನೆಗಾಗಿ ಹೊಸ ಘಟಕ ಸ್ಥಾಪನೆ ಮತ್ತು ಕಾರ್ಯಾಚರಣೆಯಲ್ಲಿರುವ ಘಟಕಗಳ ಉತ್ಪದನಾ ಸಾಮರ್ಥ್ಯ ಹೆಚ್ಚಳಕ್ಕಾಗಿ ರೂ. 35,000 ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.

Suzuki Invest (2)

ಹೊಸ ಬಂಡವಾಳ ಹೂಡಿಕೆಯೊಂದಿಗೆ ಮಾರುತಿ ಸುಜುಕಿಯು ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 7.5 ಲಕ್ಷ ಯುನಿಟ್ ನಿಂದ 10 ಲಕ್ಷ ಯುನಿಟ್‌ಗಳಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಈ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಹನ ಉತ್ಪಾದನೆಯಲ್ಲಿ 1.7 ಪಟ್ಟು ಹೆಚ್ಚಳ ಮತ್ತು ರಫ್ತು ಪ್ರಮಾಣದಲ್ಲಿ 2.6 ಪಟ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಾಮಾನ್ಯ ವಾಹನಗಳಿಂತಲೂ ಎಲೆಕ್ಟ್ರಿಕ್ ವಾಹನಗಳ ಇನ್ಸುರೆನ್ಸ್ ಯಾಕೆ ದುಬಾರಿ ಗೊತ್ತಾ?

ಇದರೊಂದಿಗೆ ವಾಹನ ತಯಾರಕರು ತಮ್ಮ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಗುಜರಾತ್ ರಾಜ್ಯವು ಆದ್ಯತೆಯ ಸ್ಥಳಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದ್ದು, ಇದು ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡು, ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕಕ್ಕೆ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಗುಜರಾತ್ ನಲ್ಲಿ ಮಾರುತಿ ಸುಜುಕಿ ಮಾತ್ರವಲ್ಲದೇ ಟಾಟಾ ಮೋಟಾರ್ಸ್, ಎಂಜಿ ಮೋಟಾರ್ ಇಂಡಿಯಾ, ಮಹೀಂದ್ರಾ ಮತ್ತು ಹೀರೋ ಮೋಟೋಕಾರ್ಪ್ ಸೇರಿದಂತೆ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳು ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಇದೀಗ ಹೊಸದಾಗಿ ಆರಂಭವಾಗಲಿರುವ ಮಾರುತಿ ಸುಜುಕಿ ಹೊಸ ಇವಿ ಕಾರು ಉತ್ಪಾದನಾ ಘಟಕವು ಎಲೆಕ್ಟ್ರಿಕ್ ಕಾರ್ ಹಬ್ ಆಗಿ ಹೊರಹೊಮ್ಮಲು ನೆರವಾಗಲಿದೆ ಎನ್ನಬಹುದು.

Published On - 10:09 pm, Wed, 10 January 24