Ramraj & Rishab Shetty: ರಾಮ್​ರಾಜ್ ಕಾಟನ್​ಗೆ ಹೊಸ ಪರಿಚಯ ರಿಷಬ್ ಶೆಟ್ಟಿ

Ramraj Dhotis: ಭಾರತೀಯ ಸಾಂಪ್ರದಾಯಿಕ ಉಡುಗೆಗಳಾದ ಪಂಚೆ, ಷರ್ಟ್, ಕುರ್ತಾಗಳಿಗೆ ಖ್ಯಾತವಾಗಿರುವ ರಾಮ್​ರಾಜ್ ಸಂಸ್ಥೆ ತನ್ನ ಹೊಸ ಬ್ರ್ಯಾಂಡ್ ಅಂಬಾಸಡರ್ ಆಗಿ ಕನ್ನಡ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿಯವರನ್ನು ಆಯ್ಕೆ ಮಾಡಿಕೊಂಡಿದೆ.

Ramraj & Rishab Shetty: ರಾಮ್​ರಾಜ್ ಕಾಟನ್​ಗೆ ಹೊಸ ಪರಿಚಯ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಮತ್ತು ರಾಮ್​ರಾಜ್ ಶೋರೂಂ
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 29, 2024 | 11:10 AM

ರಾಮ್‍ರಾಜ್ ಪಂಚೆಗಳು, ಷರ್ಟ್‍ಗಳು ಹಾಗೂ ಕುರ್ತಾಗಳ ಹೊಸ ಬ್ರ್ಯಾಂಡ್ ಅಂಬಾಸಿಡರ್ ಆಗಿ ಖ್ಯಾತ ನಟ ರಿಷಬ್ ಶೆಟ್ಟಿಯವರನ್ನು ಪರಿಚಯಿಸಿದ ರಾಮ್‍ರಾಜ್ ಕಾಟನ್ ಸಂಸ್ಥೆಯ ನಿರ್ದೇಶಕರಾದ ಅರುಣ್ ಈಶ್ವರ್ ಅವರು, ರಾಮ್‍ರಾಜ್ ಪಂಚೆಗಳ ಹೊಸ ಪರಿಚಯವಾಗಿ ರಿಷಬ್ ಶೆಟ್ಟಿಯವರು ತಮ್ಮೊಂದಿಗೆ ಸೇರಿರುವುದಕ್ಕೆ ಸಂತೋಷವನ್ನೂ ಹೆಮ್ಮೆಯನ್ನೂ ಹೊಸ ನಂಬಿಕೆಯನ್ನೂ ವ್ಯಕ್ತಪಡಿಸಿದರು.

‘ಖ್ಯಾತ ನಟ ರಿಷಬ್ ಶೆಟ್ಟಿ ಅವರು ಮೊಟ್ಟ ಮೊದಲ ಬಾರಿಗೆ ನಮ್ಮ ರಾಮ್​ರಾಜ್ ಬ್ರ್ಯಾಂಡ್‍ನೊಂದಿಗೆ ಕೈಜೋಡಿಸಿರುವುದು ನಮಗೆ ಅತ್ಯಂತ ಗೌರವದ ಹಾಗೂ ಹೆಮ್ಮೆ ಭರಿತ ಕ್ಷಣವಾಗಿದೆ’ ಎಂದು ಹೇಳಿದ ಅರುಣ್ ಈಶ್ವರ್ ಅವರು, ‘ಶ್ರಿ. ರಿಷಬ್ ಶೆಟ್ಟಿಯವರು ಅತ್ಯುತ್ತಮ ನಟ ಮತ್ತು ನಿರ್ದೇಶಕರು ಎಂಬುದನ್ನೂ ದಾಟಿ, ಒಬ್ಬ ಸರಳವಾದ ಮನುಷ್ಯರು. ಅವರು ಪರಂಪರೆಯ ಬೇರುಗಳೊಡನೆ ತುಂಬ ಆಪ್ತ ಸಂಬಂಧವನ್ನೂ ಉಳ್ಳವರು’ ಎಂದೂ ತಿಳಿಸಿದರು.

ಸಂಸ್ಕೃತಿಯ ಮೇಲೆ ಅವರಿಗಿರುವ ಅಪಾರ ಆಸ್ಥೆಯನ್ನು ಮನಃಪೂರ್ವಕವಾಗಿ ಅಭಿನಂದಿಸಿದ ಅರುಣ್ ಅವರು, “ರಿಷಬ್ ಶೆಟ್ಟಿಯವರು ತಮ್ಮ ಸೃಜನಾತ್ಮಕ ಸಾಮರ್ಥ್ಯ ಹಾಗೂ ನಟನಾ ಸಾಮರ್ಥ್ಯಕ್ಕಾಗಿ ದೇಶದಾದ್ಯಂತ ಚಿರಪರಿಚಿತರಾಗಿರುವ ಒಬ್ಬ ಅದ್ಭುತ ವ್ಯಕ್ತಿತ್ವ ಹೊಂದಿರುವವರು. ಅವರು ಪ್ಯಾನ್ ಇಂಡಿಯಾ ಯಶಸ್ಸಿಗೆ ಪಾತ್ರವಾದ ತಮ್ಮ ‘ಕಾಂತಾರ’ ಚಿತ್ರದ ಮೂಲಕ ಇದನ್ನು ನಿರೂಪಿಸಿದ್ದಾರೆ. ನಾನು ಅವರ ಬಗ್ಗೆ ತುಂಬಾ ಓದಿದ್ದೇನೆ. ಕೆಲವು ತಿಂಗಳುಗಳ ಹಿಂದೆ ನಾನು ಅವರನ್ನು ಸಂಪರ್ಕಿಸಿದೆ. ಆಗ, ಅವರು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗೌರವಿಸಿ, ಅವುಗಳನ್ನು ಪಾಲಿಸುವವರು; ಪರಂಪರೆಯ ಬಗ್ಗೆ ತುಂಬ ಹೆಮ್ಮೆಯ ಭಾವನೆಯನ್ನು ಉಳ್ಳವರು ಎಂಬುದನ್ನು ನಾನು ಅರ್ಥ ಮಾಡಿಕೊಂಡೆ. ಅವರ ಎಲ್ಲಾ ಚಲನಚಿತ್ರಗಳನ್ನೂ ನಾನು ನೋಡಿದ್ದೇನೆ. ನಮ್ಮ ಪಾರಂಪಾರಿಕ ಉಡುಪಾದ ಪಂಚೆಯನ್ನುಡುವ ಕೆಲವು ಭಾರತೀಯ ನಟರಲ್ಲಿ ಇವರೂ ಒಬ್ಬರು ಎನ್ನುವುದು ಅನನ್ಯವಾದ ಸಂಗತಿ. ಈ ಅಂಶವೇ ಅವರ ಕಡೆಗೆ ನಾವು ಆಕರ್ಷಿತರಾಗಿ ಅವರ ಜೊತೆ ಸಂಪರ್ಕ ಬೆಳೆಸಲು ಮೂಲ ಕಾರಣವಾಗಿದೆ” ಎನ್ನುವ ಅರುಣ್ ಅವರು, “ರಾಮ್​ರಾಜ್ ಹಾಗೂ ರಿಷಬ್ ಶೆಟ್ಟಿ ಇಬ್ಬರೂ ಸಾಂಸ್ಕೃತಿಕ ಉತ್ಪನ್ನಗಳ ಬಗ್ಗೆ ಒಂದೇ ಬಗೆಯ ದಾರಿ ಹಾಗೂ ನಂಬಿಕೆಯನ್ನು ಹೊಂದಿರುವವರು” ಎಂದು ರಿಷಬ್ ಶೆಟ್ಟಿ ತಿಳಿಸುತ್ತಾರೆ ಎಂದೂ ಹೇಳಿದರು.

‘ರಿಷಬ್ ಸಾರ್ ಅವರೊಂದಿಗೆ ಬೆಸೆಯುವುದೇ ನಮಗೆ ತುಂಬಾ ಸಂತೋಷದ ಕ್ಷಣ. ನಮ್ಮ ಈ ಬೆಸುಗೆ ನಮ್ಮ ಬ್ರ್ಯಾಂಡ್ ಅನ್ನು ಇನ್ನೂ ಹೆಚ್ಚಿನ ಔನ್ನತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂದು ನಾವು ಭಾವಿಸಿದೆವು. ಇದು ದಕ್ಷಿಣ ಭಾರತದ ರಾಜ್ಯಗಳನ್ನೂ ದಾಟಿ ಉತ್ತರ ಭಾರತಕ್ಕೂ ಹರಡುತ್ತಿರುವುದರಿಂದ, ಈ ಬಾಂಧವ್ಯ ನಮ್ಮ ಬ್ರ್ಯಾಂಡ್‍ಗೆ ಖಂಡಿತವಾಗಿಯೂ ನೆರವಾಗುತ್ತದೆ’ ಎಂದು ಅರುಣ್ ಅವರು ತಿಳಿಸಿದರು.

ರಾಮ್‍ರಾಜ್ ಕಾಟನ್ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ತನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ರಿಷಬ್ ಶೆಟ್ಟಿ ಅವರು ತಮ್ಮ ಧನ್ಯವಾದಗಳನ್ನೂ, ಪ್ಯಾನ್ ಇಂಡಿಯಾ ವೇದಿಕೆಯಲ್ಲಿ ಈ ಬ್ರ್ಯಾಂಡನ್ನು ಪ್ರತಿನಿಧಿಸಲು ಹೆಮ್ಮೆ ಪಡುವುದಾಗಿಯೂ ಹೇಳಿದರು. ಸಂಸ್ಥೆಯ ನಿರ್ದೇಶಕರಾದ ಅರುಣ್ ಅವರಿಗೆ ಉತ್ತರಿಸುತ್ತಾ, ‘ನಾನು ಯಾವಾಗಲೂ ಶ್ರೀ.ನಾಗರಾಜನ್ ಅವರ ಮೇಲೆ ಗೌರವಾದರ ಭಾವನೆಯನ್ನು ಹೊಂದಿದ್ದೇನೆ ಸಾರ್. ಅವರು ಮಾಡುವ ಸಾಮಾಜಿಕ ಕೆಲಸಗಳ ಬಗ್ಗೆ ನಾನು ಚೆನ್ನಾಗಿ ಬಲ್ಲೆ. ಆದುದರಿಂದಲೇ ರಾಮ್‍ರಾಜ್ ಜೊತೆಗೆ ಸೇರುವಂತೆ ಕೇಳಿದಾಗ, ಒಂದೇ ಸಲಕ್ಕೆ ನೇರವಾಗಿ ಓಕೆ ಎಂದು ಹೇಳಿಬಿಟ್ಟೆ. ಇದು ನನಗೆ ಸಂತೋಷ!’ ಎಂದರು.

ಆಗ ನಾಗರಾಜನ್ ಅವರು, ರಿಷಬ್ ಶೆಟ್ಟಿಯವರೊಂದಿಗೆ ಮೊದಲ ಬಾರಿಗೆ ಮಾತನಾಡಿದ್ದನ್ನು ನೆನಪಿಸಿದ ಅರುಣ್, ‘ಶ್ರೀ.ನಾಗರಾಜನ್ ನಿಮ್ಮನ್ನು ಕಳೆದ ವರ್ಷ ಮೊದಲ ಬಾರಿಗೆ ನೋಡಿದ್ದು ಎಂದು ಭಾವಿಸುತ್ತೇನೆ. ಚನಚಿತ್ರಗಳಲ್ಲೂ, ಅವರು ನಿಮ್ಮನ್ನು ಭೇಟಿಯಾದಾಗ ನೀವು ಪಂಚೆ ಧರಿಸಿದ ವಿಧವನ್ನೂ ನೋಡಿ ಅವರು ನಿಮ್ಮೆಡೆಗೆ ಸೆಳೆಯಲ್ಪಟ್ಟರು. ಅವರು ಅಂದು ರಾತ್ರಿಯೇ ನನಗೆ ಫೋನ್ ಮಾಡಿ, ‘ನಾನು ಶ್ರೀ. ರಿಷಬ್ ಶೆಟ್ಟಿಯವರನ್ನು ಭೇಟಿ ಮಾಡಿದೆ. ಅವರು ತಮ್ಮನ್ನು ವ್ಯಕ್ತಪಡಿಸಿಕೊಳ್ಳುವ ರೀತಿಯೂ, ಅವರು ಪಂಚೆ ಉಡುವ ವಿಧವೂ ನನಗೆ ತುಂಬಾ ಇಷ್ಟವಾಗಿದೆ. ಕೂಡಲೇ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಸ್ವಲ್ಪ ಹೊತ್ತಿನೊಳಗೆ ನಾವಿಬ್ಬರೂ ಸಂಪರ್ಕ ಸಾಧಿಸಿದೆವು. ನಂತರ ನಾವು ಅವರನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋದೆವು. ಇಂದು ಅವರು ಒಪ್ಪಂದಕ್ಕೆ ಸಹಿ ಹಾಕಿದುದರಲ್ಲಿ ನಾವು ತುಂಬಾ ಸಂತೋಷ ಹೊಂದಿದ್ದೇವೆ’ ಎಂದರು ಅರುಣ್.

ತಮ್ಮ ವೈವಿಧ್ಯಮಯವಾದ ನಟನೆ ಹಾಗೂ ನಿರ್ದೇಶನದ ಮೂಲಕ ಇಡೀ ದೇಶವನ್ನೇ ಅಚ್ಚರಿಯಲ್ಲಿ ಮುಳುಗಿಸಿದ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ, ‘ರಾಮ್​ರಾಜ್ ಕಾಟನ್, ಷರ್ಟ್‍ಗಳು ಮತ್ತು ಪಂಚೆಗಳನ್ನು ಒಂದು ಬ್ರ್ಯಾಂಡ್ ಆಗಿ ರೂಪಿಸಿದೆ. ಇದು ನಮ್ಮೆಲ್ಲರ ಜೀವನದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಬೆರೆತು ಹೋಗಿದೆ. ನಿರ್ದಿಷ್ಟವಾಗಿ ನನ್ನೊಂದಿಗೆ ಇದು ತುಂಬಾ ಬೆರೆತು ಹೋಗಿದೆ. ನಮ್ಮ ಸಮುದಾಯದಲ್ಲೂ, ನಮ್ಮ ಊರಿನಲ್ಲೂ, ನಮ್ಮ ಮನೆಗಳಲ್ಲೂ, ನಮ್ಮ ಎಲ್ಲ ಕಾರ್ಯಕ್ರಮಗಳಲ್ಲೂ ಕಾಟನ್ ಷರ್ಟ್‍ಗಳು ಮತ್ತು ಪಂಚೆಗಳು ದೈನಂದಿನ ಜೀನವದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ’ ಎಂದರು ಶ್ರೀ. ರಿಷಬ್ ಶೆಟ್ಟಿ.

‘ರಾಮ್​ರಾಜ್ ಒಂದು ಬ್ರ್ಯಾಂಡ್ ಆಗಿ ಮಾರುಕಟ್ಟೆಗೆ ಪರಿಚಯವಾದ ದಿನಗಳಲ್ಲಿಯೇ, ಇದು ಒಂದು ದೊಡ್ಡ ಬ್ರ್ಯಾಂಡ್ ಆಗಿ ಮುಂದಿನ ದಿನಗಳಲ್ಲಿ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತದೆ ಎಂದು ನಾನು ಅಂದುಕೊಂಡಿದ್ದೆ. ಇಂದು ಭಾರತದಲ್ಲಿ ಹೆಚ್ಚೂಕಡಿಮೆ ಎಲ್ಲರೂ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಅದನ್ನು ಉಪಯೋಗಿಸುವುದನ್ನು ನೋಡುತ್ತಿದ್ದೇನೆ. ಒಂದು ಬ್ರ್ಯಾಂಡ್ ಆಗಿ ಇದು ತುಂಬಾ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.

ಇಂದು ಭಾರತದಲ್ಲೇ ಸಿದ್ಧವಾಗುವ ವಸ್ತುಗಳ ಬಗ್ಗೆ ನಾವು ತುಂಬಾ ದೊಡ್ಡ ಪ್ರಮಾಣದಲ್ಲಿ ಮಾತನಾಡುತ್ತಿದ್ದೇವೆ. ನಾನು ಹೇಳುತ್ತೇನೆ… ರಾಮ್​ರಾಜ್ ಒಂದು ಸ್ವದೇಶೀ ಬ್ರ್ಯಾಂಡ್. ರಾಮ್​ರಾಜ್ ಅನ್ನು ನಮ್ಮ ಬಂಧುಗಳು ಎಂದು ಭಾವಿಸುವುದು ನಮ್ಮೆಲ್ಲರಿಗೂ – ನಿರ್ದಿಷ್ಟವಾಗಿ ದಕ್ಷಿಣ ಭಾರತೀಯರಾದ ನಮಗೆ ತುಂಬ ಸಂತೋಷದ ಸಂಗತಿ ಎಂದು ನಾನು ಭಾವಿಸುತ್ತೇನೆ.

ಇಂದು, ಇದು ಒಂದು ಅತಿ ದೊಡ್ಡ ಬ್ರ್ಯಾಂಡ್ ಆಗಿ ಬದಲಾಗಿದೆ. ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುತ್ತಾ, ನಮ್ಮ ಮಾರುಕಟ್ಟೆಯಲ್ಲಿ ಸ್ವದೇಶೀ ಬ್ರ್ಯಾಂಡ್ ಆಗಿ ಇದು ಎತ್ತರಕ್ಕೇರಿದೆ. ಭಾರತೀಯ ಸಂಸ್ಕೃತಿಯನ್ನೂ, ನಮ್ಮ ಪರಂಪರೆಯನ್ನೂ ಜಗತ್ತಿನಾದ್ಯಂತ ಪರಿಚಯಿಸಲು ಇದು ಒಂದು ದಾರಿಯಾಗಿರುತ್ತದೆ’ ಎಂದು ಭಾವಿಸುತ್ತಾರೆ ರಿಷಬ್ ಶೆಟ್ಟಿ.

‘ನಾವು ಹೇಗೆ ಇದ್ದೇವೆ, ಜಗತ್ತಿಗೆ ನಮ್ಮನ್ನು ಹೇಗೆ ತೋರಿಸಿಕೊಳ್ಳುತ್ತೇವೆ ಎಂದು ಅರಿತುಕೊಳ್ಳುವುದು ತುಂಬಾ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಮ್ಮ ಸ್ವಂತ ಊರಿನಲ್ಲಿ ಎಲ್ಲರೂ ಇದನ್ನು ಸ್ವೀಕರಿಸುವ ಹಾಗೆಯೇ ನಾನೂ ಕಾಟನ್ ಷರ್ಟ್ ಮತು ಪಂಚೆಯನ್ನು ಸಹಜವಾಗಿ ಧರಿಸುತ್ತೇನೆ. ಹೊರ ಊರಿಗೆ ಹೋದಾಗಲೂ ಇದನ್ನು ಬದಲಾಯಿಸಬೇಕು ಎನ್ನುವ ಭಾವನೆ ನನಗೆ ಬಂದದ್ದಿಲ್ಲ. ನಾನು ಎಲ್ಲಿಗೇ ಹೋದರೂ, ಸಾಂಪ್ರದಾಯಿಕ ಉಡುಪುಗಳಲ್ಲಿ ನಮ್ಮನ್ನು ಸುಂದರವಾಗಿ ಪ್ರಕಟಪಡಿಸಿಕೊಳ್ಳಲು ಸಾಧ್ಯ. ನಮ್ಮ ಸಂಸ್ಕೃತಿ ಹಾಗೂ ನಮ್ಮ ಪರಂಪರೆಯನ್ನು ಜಗತ್ತಿಗೆ ತೋರಿಸಲು ಇದೇ ಮಾರ್ಗ ಎಂದು ವೈಯಕ್ತಿಕವಾಗಿ ನಾನು ಭಾವಿಸುತ್ತೇನೆ’ ಎಂದೂ ಅವರು ತಿಳಿಸಿದರು.

‘ನಾನು ರಾಮ್​ರಾಜ್ ಜೊತೆಗೆ ಸೇರಲು ಮುಖ್ಯವಾದ ಕಾರಣ ಶ್ರೀ. ನಾಗರಾಜನ್ ಸಾರ್ ಅವರೇ. ರಾಮ್​ರಾಜ್ ಒಂದು ಬ್ರ್ಯಾಂಡ್ ಎನ್ನುವುದನ್ನೂ ದಾಟಿ, ವ್ಯಾಪಾರ ಕ್ಷೇತ್ರಕ್ಕೆ ಸಮಾಜದ ಬಗ್ಗೆ ಜವಾಬ್ದಾರಿಯಿದೆ ಎಂದು ತೋರಿಸಿಕೊಟ್ಟಿದೆ ಎಂದು ನಾನು ಭಾವಿಸುತ್ತೇನೆ. ನಾಗರಾಜನ್ ಸಾರ್ ಅವರು ರಾಮ್​ರಾಜ್ ಮೂಲಕ ಸಮಾಜಕ್ಕೆ ಎಷ್ಟೆಷ್ಟೋ ಸೇವೆಗಳನ್ನು ಮಾಡಿದ್ದಾರೆ ಎಂದು ನಾನು ಕೇಳಿ ಬಲ್ಲೆ. ನಾನು ಈಗ ಆ ಭಾವನೆಯೊಳಗೇ ಸುಂದರವಾಗಿ ಬೆಸೆದಿರುವುದು. ಅವರ ಜೊತೆಯಲ್ಲಿ ನಾನು ಹಲವಾರು ಬಗೆಯ ¸ ಸಮಾಜ ಸೇವಾ ಕಾರ್ಯಗಳು ಹಾಗೂ ಶಾಲೆಗಳ ಬಗ್ಗೆ ಚರ್ಚಿಸಿದ್ದೇನೆ. ಅವರು ನನ್ನ ಬಳಿ ತಿಳಿಸಿದ ವಿಷಯಗಳಲ್ಲಿ ಒಂದು, ‘ನೀವು ಮುಂದುವರೆಯಿರಿ… ನಾನು ನಿಮ್ಮ ಜೊತೆಯಲ್ಲಿರುತ್ತೇನೆ. ನಾನೂ ನಿಮ್ಮೊಂದಿಗೆ ಸೇರಿ ಬೆಂಬಲ ನೀಡುತ್ತೇನೆ’ ಎಂಬುದಾಗಿದೆ. ರಾಮ್​ರಾಜ್ ಪ್ರಸಿದ್ಧವಾಗಿರುವ ಎಲ್ಲ ರಾಜ್ಯಗಳಲ್ಲೂ ತಮ್ಮ ಪ್ರೀತಿಯನ್ನೂ ಆದರವನ್ನೂ ಹರಡುವುದೇ ಅವರ ಉದ್ದೇಶ’ ಎಂದು ತಿಳಿಸಿದರು ರಿಷಬ್ ಶೆಟ್ಟಿ.

(ಗಮನಿಸಿ: ಇದು ಪ್ರಾಯೋಜಿತ ಸುದ್ದಿಯಾಗಿದೆ)

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ