ಬಿಗ್​ಬಾಸ್ ಮನೆಗೆ ಹೋದ ಶಿಶಿರ್: ಗೆಲ್ಲಲು ಬೇಕಾದ ವಿದ್ಯೆಗಳೆಲ್ಲ ಇವರಿಗೆ ಕರಗತ

ಬಿಗ್​ಬಾಸ್​ ಕನ್ನಡ ಸೀಸನ್ 11 ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಪರಿಚಯ ಮಾಡಿಸಿ ಬಿಗ್​ಬಾಸ್ ಮನೆಯ ಒಳಗೆ ಕಳಿಸುತ್ತಿದ್ದಾರೆ. ನಟ ಶಿಶಿರ್​ ಬಿಗ್​ಬಾಸ್ ಮನೆಗೆ ಹೋಗಿದ್ದಾರೆ. ಅಂದಹಾಗೆ ಶಿಶಿರ್​​ ಯಾರು? ಅವರ ಹಿನ್ನೆಲೆ ಏನು?

ಬಿಗ್​ಬಾಸ್ ಮನೆಗೆ ಹೋದ ಶಿಶಿರ್: ಗೆಲ್ಲಲು ಬೇಕಾದ ವಿದ್ಯೆಗಳೆಲ್ಲ ಇವರಿಗೆ ಕರಗತ
Follow us
ಮಂಜುನಾಥ ಸಿ.
|

Updated on:Sep 29, 2024 | 9:16 PM

ಬಿಗ್​ಬಾಸ್​ ಮನೆಗೆ ಈ ವರೆಗೆ ಅತಿ ಹೆಚ್ಚು ಹೋಗಿರುವುದು ಟಿವಿ ನಟ-ನಟಿಯರು, ಅತಿ ಹೆಚ್ಚು ಗೆದ್ದಿರುವುದು ಸಹ ಇವರೆ. ನಟ-ನಟಿಯರಿಗೆ ಸಾಮಾಜಕ ಜೀವನದ ಅನುಭವ ಚೆನ್ನಾಗಿ ಇರುತ್ತದೆ. ಅವರ ಸಂವಹನ ಕಲೆಯೂ ಚೆನ್ನಾಗಿರುತ್ತದೆ, ಗ್ಲಾಮರ್ ಸಹ ಇರುತ್ತದೆ, ಕ್ಯಾಮೆರಾ ಫ್ರೆಂಡ್ಲಿ ಮುಖವೂ ಇರುತ್ತದೆ ಹಾಗಾಗಿ ಪ್ರತಿ ಬಾರಿಯೂ ಟಿವಿ ನಟ-ನಟಿಯರೇ ಹೆಚ್ಚಾಗಿ ಗಮನ ಸೆಳೆಯುತ್ತಾರೆ. ಈ ಬಾರಿಯೂ ಸಹ ಬಿಗ್​ಬಾಸ್​ ಕನ್ನಡ11 ನಲ್ಲಿ ಟಿವಿ ನಟ-ನಟಿಯರು ಹೆಚ್ಚಾಗಿ ಮನೆ ಸೇರಿದ್ದಾರೆ. ಸುಮಾರು 13 ವರ್ಷಗಳಿಂದಲೂ ಟಿವಿ ಕ್ಷೇತ್ರದಲ್ಲಿ ಗಮನ ಸೆಳೆದಿರುವ ಶಿಶಿರ್ ಈಗ ಬಿಗ್​ಬಾಸ್​ ಸೇರಿದ್ದಾರೆ. ಅಂದಹಾಗೆ ಶಿಶಿರ್​ ಅವರ ಹಿನ್ನೆಲೆ ಏನು?

ಶಿಶಿರ್ ಮೂಲವಾಗಿ ಸಂಗೀತ ಹಾಗೂ ನೃತ್ಯ ಕಲಾವಿದ. ಎಳವೆಯಲ್ಲಿಯೇ ಮೃದಂಗ ಕಲಿತ ಶಿಶಿರ್, ಆ ಬಳಿಕ ತಂದೆಯವರ ಒತ್ತಾಸೆಯಿಂದ ಭರತನಾಟ್ಯ ಸಹ ಕಲಿತರು. ಹಲವು ಭರತನಾಟ್ಯ ಶೋಗಳಲ್ಲಿ ಭಾಗವಹಿಸಿರುವ ಶಿಶಿರ್, ಹಲವಾರು ಸಂಗೀತ ಕಛೇರಿಗಳಲ್ಲಿ ಮೃದಂಗ ನುಡಿಸಿದ್ದಾರೆ. ‘ಸೊಸೆ ತಂದ ಸೌಭಾಗ್ಯ’, ‘ಪುಟ್ಟ ಗೌರಿ ಮದುವೆ’, ‘ಭಾರತಿ’, ‘ಕವಲುದಾರಿ’ ಇನ್ನೂ ಕೆಲವು ಧಾರವಾಹಿಗಳಲ್ಲಿ ಶಿಶಿರ್ ನಟಿಸಿದ್ದಾರೆ. ತೆಲುಗಿನ ‘ಮಿತ್ತೈ ಕೊತ್ತು ಚಿತ್ತಮ್ಮ’, ‘ಇಂಟಿ ಗುಟ್ಟು’, ‘ವಂತಲಕ್ಕ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಉತ್ತಮ ಡ್ಯಾನ್ಸರ್ ಸಹ ಆಗಿರುವ ಶಿಶಿರ್​, ಬಿಗ್​ಬಾಸ್​ ಮನೆಯಲ್ಲಿ ಸಖತ್ ಮನರಂಜನೆ ನೀಡುವುದು ಪಕ್ಕಾ ಎನಿಸುತ್ತಿದೆ.

ಬಿಗ್​ಬಾಸ್​ ಮನೆಗೆ ಕಾಲಿಡುವ ಮುಂಚೆ ಸುದೀಪ್ ಜೊತೆ ಮಾತನಾಡಿದ ಶಿಶಿರ್, ‘ನಾನು ಹದಿಮೂರು ವರ್ಷದಿಂದ ಟಿವಿ ರಂಗದಲ್ಲಿ ಕೆಲಸ ಮಾಡಿದ್ದೇನೆ. ನಾನು ಇಷ್ಟು ವರ್ಷ ಮಾಡಿರುವ ಕೆಲಕ್ಕೆ ವ್ಯಾಲಿಡೇಷನ್ ಎಂದು ಬಿಗ್​ಬಾಸ್ ಅನ್ನು ಪರಿಗಣಿಸುತ್ತೇನೆ. ಇಷ್ಟು ವರ್ಷ ನನ್ನನ್ನು ಬೇರೆ-ಬೇರೆ ಪಾತ್ರಗಳಲ್ಲಿ ಜನ ನೋಡಿದ್ದಾರೆ, ಗುರುತಿಸಿದ್ದಾರೆ ಆದರೆ ಇನ್ನು ಮುಂದೆ ಶಿಶಿರ್ ಆಗಿಯೇ ನೋಡಲಿ, ನನ್ನನ್ನು ನನ್ನಂತೆ ನೋಡಿ ಗುರುತಿಸಲಿ ಎಂಬ ಕಾರಣಕ್ಕೆ ಬಿಗ್​ಬಾಸ್​ಗೆ ಬಂದಿದ್ದೇನೆ’ ಎಂದರು.

ಇದನ್ನೂ ಓದಿ:ಬಿಗ್​ಬಾಸ್​ ಮನೆಯಲ್ಲಿ ನರಕ: ನರಕವಾಸಿಗಳು ಪಾಲಿಸಬೇಕಾದ ನಿಯಮಗಳೇನು?

ಬಿಗ್​ಬಾಸ್​ಗೆ ಬೇಕಾಗಿರುವ ಹಲವು ಗುಣಗಳು ಶಿಶಿರ್​ ಬಳಿ ಇವೆ. ಅವರಿಗೆ ಚೆನ್ನಾಗಿ ಅಡುಗೆ ಮಾಡಲು ಬರುತ್ತದೆಯಂತೆ. ಬಹಳ ಒಳ್ಳೆಯ ಡ್ಯಾನ್ಸರ್, ಫಿಟ್​ನೆಸ್ ಚೆನ್ನಾಗಿದೆ. 33 ವರ್ಷವಾಗಿದ್ದರೂ ಸಹ ಇನ್ನೂ ಮದುವೆ ಆಗಿಲ್ಲ. ಗುಂಪಿನ ಜೊತೆ ಬೆರೆಯಬಲ್ಲರು, ಒಬ್ಬರೇ ಇರಬೇಕಾಗಿ ಬಂದರೂ ಬೇಸರ ಮಾಡಿಕೊಳ್ಳದೆ ಒಂಟಿತನವನ್ನು ಸಹಿಸಿಕೊಳ್ಳಬಲ್ಲ ಗುಣ ಅವರಿಗೆ ಇದೆಯಂತೆ. ಗಟ್ಟಿ ಧ್ವನಿ, ಭಾವುಕತೆ, ವಿನಯ ಹೀಗೆ ಬೇರೆ ಬೇರೆ ಷೇಡ್​ಗಳು ತನ್ನಲ್ಲಿವೆ ಎಂದು ಶಿಶಿರ್ ಹೇಳಿಕೊಂಡಿದ್ದಾರೆ.

ಶಿಶಿರ್​, ಸಿನಿಮಾಗಳಲ್ಲಿ ನಟಿಸುವ ಪ್ರಯತ್ನಪಟ್ಟು ಭಾರಿ ಹಿನ್ನಡೆ ಅನುಭವಿಸಿ ಖಿನ್ನತೆಗೆ ಜಾರಿದ ವಿಚಾರವನ್ನೂ ಸಹ ಬಿಗ್​ಬಾಸ್ ವೇದಿಕೆ ಮೇಲೆ ಹಂಚಿಕೊಂಡರು. ನಟ ತ್ರಿವಿಕ್ರಮ್ ಜೊತೆಗೆ ಶಿಶಿರ್​ ಬಿಗ್​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ಅವರು ನರಕವಾಸಿಗಳಾಗಿದ್ದಾರೆ. ತ್ರಿವಿಕ್ರಮ್ ಸ್ವರ್ಗಕ್ಕೆ ಹೋಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:12 pm, Sun, 29 September 24

ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್