ಬಿಗ್ ಬಾಸ್ ಮನೆಗೆ 6ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ ‘ನವಗ್ರಹ’ ನಟ ಧರ್ಮ ಕೀರ್ತಿರಾಜ್
‘ನವಗ್ರಹ’ ಸಿನಿಮಾದಲ್ಲಿ ಕ್ಯಾಡ್ಬರೀಸ್ ಎಂಬ ಪಾತ್ರ ಮಾಡಿ ಫೇಮಸ್ ಆದವರು ಧರ್ಮ ಕೀರ್ತಿರಾಜ್. ಚಂದನವನದ ಖ್ಯಾತ ವಿಲನ್ ಕೀರ್ತಿರಾಜ್ ಅವರ ಪುತ್ರನಾದ್ರೂ ತಮ್ಮದೇ ರೀತಿಯಲ್ಲಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಬರುವ ಮೂಲಕ ಅವರೀಗ ಹೊಸ ಇನ್ನಿಂಗ್ಸ್ ಆರಂಭಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ..
ವಿವಿಧ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ವ್ಯಕ್ತಿಗಳು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆಗೆ ಆಗಮಿಸಿದ್ದಾರೆ. ಅದ್ದೂರಿಯಾಗಿ ಈ ಸೀಸನ್ನ ಓಪನಿಂಗ್ ಆಗಿದೆ. ಕಿಚ್ಚ ಸುದೀಪ್ ಅವರು ಹೊಸ ಸೀಸನ್ನ ಸ್ಪರ್ಧಿಗಳಿಗೆ ಸ್ವಾಗತ ಕೋರಿದ್ದಾರೆ. ಶನಿವಾರವೇ (ಸೆ.28) ಗೋಲ್ಡ್ ಸುರೇಶ್, ಲಾಯರ್ ಜಗದೀಶ್, ಗೌತಮಿ ಜಾಧವ್, ಚೈತ್ರಾ ಕುಂದಾಪುರ ಅವರ ಹೆಸರುಗಳು ಬಹಿರಂಗ ಆಗಿದ್ದವು. ಇಂದು (ಸೆ.29) ಇನ್ನುಳಿದ ಸ್ಪರ್ಧಿಗಳ ಎಂಟ್ರಿ ಆಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ಧರ್ಮ ಕೀರ್ತಿರಾಜ್ ಅವರು ಕೂಡ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆಗಿದ್ದಾರೆ.
ಹಲವು ವರ್ಷಗಳಿಂದ ಧರ್ಮ ಕೀರ್ತಿ ರಾಜ್ ಅವರು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಅವರ ತಂದೆ ಕೀರ್ತಿರಾಜ್ ಸ್ಯಾಂಡಲ್ವುಡ್ನಲ್ಲಿ ಫೇಮಸ್ ವಿಲನ್. ಆದರೆ ಧರ್ಮ ಅವರು ಲವರ್ಬಾಯ್ ರೀತಿಯ ಪಾತ್ರಗಳಿಂದ ಜನಪ್ರಿಯತೆ ಪಡೆದರು. ‘ನವಗ್ರಹ’ ಸಿನಿಮಾದಲ್ಲಿ ಅವರು ಒಂದು ಮುಖ್ಯ ಪಾತ್ರ ಮಾಡಿದರು. ಅದರಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ದರ್ಶನ್ ಆಪ್ತ ಬಳಗದಲ್ಲಿ ಧರ್ಮ ಕೀರ್ತಿರಾಜ್ ಗುರುತಿಸಿಕೊಂಡರು.
ಇದನ್ನೂ ಓದಿ: ಬಿಗ್ ಬಾಸ್ 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಬಂದ ಯಮುನಾ ಶ್ರೀನಿಧಿ; ಸಿಕ್ತು ನೇರ ಸ್ವರ್ಗ
‘ನವಗ್ರಹ’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಅವರು ಶರ್ಮಿಳಾ ಮಾಂಡ್ರೆ ಜೊತೆ ಜೋಡಿಯಾಗಿ ನಟಿಸಿದರು. ‘ಕಣ್ ಕಣ್ಣ ಸಲಿಗೆ..’ ಹಾಡಿನಲ್ಲಿ ಅವರಿಬ್ಬರ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟ ಆಯಿತು. ಇಂದಿಗೂ ಆ ಹಾಡು ಟ್ರೆಂಡ್ನಲ್ಲಿದೆ. ಪ್ರೇಮಿಗಳ ಫೇವರಿಟ್ ಸಾಂಗ್ ಅದು. ‘ಮುಮ್ತಾಜ್’, ‘ಜಾಣಾಕ್ಷಾ’, ‘ಜಾಸ್ತಿ ಪ್ರೀತಿ’ ಮುಂತಾದ ಸಿನಿಮಾಗಳಲ್ಲಿ ಧರ್ಮ ಕೀರ್ತಿರಾಜ್ ನಟಿಸಿದ್ದಾರೆ. ಈಗ ಬಿಗ್ ಬಾಸ್ ಕಾರ್ಯಕ್ರಮದಿಂದ ಅವರ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್ ಶುರುವಾಗಿದೆ.
View this post on Instagram
‘ಬಿಗ್ ಬಾಸ್ ನನಗೆ ಅದ್ಭುತವಾದ ವೇದಿಕೆ. ಚಿತ್ರರಂಗಕ್ಕೆ ಬಂದು ನಾನು ಹಲವು ಏಳು-ಬೀಳು ಕಂಡಿದ್ದೇನೆ. ಬಿಗ್ ಬಾಸ್ನಿಂದ ನನಗೆ ಇನ್ನೊಂದು ಇಮೇಜ್ ಸಿಗಬಹುದು. ಈ ವೇದಿಕೆಯಿಂದ ನನ್ನ ಬಗ್ಗೆ ಜನರಿಗೆ ಹೆಚ್ಚು ಗೊತ್ತಾಗಲಿದೆ. ನನ್ನ ಬದುಕಿನಲ್ಲಿ ಈ ಶೋ ಹೊಸ ಅಧ್ಯಾಯ ಆಗಲಿ’ ಎನ್ನುತ್ತಾ ಧರ್ಮ ಕೀರ್ತಿರಾಜ್ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.