‘ಸಮಸ್ಯೆ ಆಗಿದೆ, ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗ್ತೀನಿ’; ಶಾಕಿಂಗ್ ವಿಚಾರ ತಿಳಿಸಿದ ಶಿವರಾಜ್​ಕುಮಾರ್

ಖ್ಯಾತ ನಟ ಶಿವರಾಜ್ ಕುಮಾರ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಅವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಉದ್ದೇಶಿಸಿದ್ದಾರೆ. ಶಿವಣ್ಣ ಅವರು ಚಿಕಿತ್ಸೆಗಾಗಿ ಒಂದು ತಿಂಗಳು ಅಮೆರಿಕಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಈ ಸುದ್ದಿಯಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ.

‘ಸಮಸ್ಯೆ ಆಗಿದೆ, ಶಸ್ತ್ರಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗ್ತೀನಿ’; ಶಾಕಿಂಗ್ ವಿಚಾರ ತಿಳಿಸಿದ ಶಿವರಾಜ್​ಕುಮಾರ್
ಶಿವರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on: Nov 07, 2024 | 11:35 AM

ನಟ ಶಿವರಾಜ್​ಕುಮಾರ್ ಅವರಿಗೆ 60 ವರ್ಷದ ಮೇಲಾಗಿದೆ. ಈಗಲೂ ಅವರು ಫಿಟ್ ಆಗಿದ್ದಾರೆ. ಅವರು ಆರೋಗ್ಯಕರ ಡಯಟ್ ಫಾಲೋ ಮಾಡುತ್ತಾರೆ. ನಿತ್ಯ ಶೂಟಿಂಗ್​​ನಲ್ಲಿ ಭಾಗವಹಿಸುತ್ತಾರೆ. ಸದ್ಯ ಅವರು ‘ಭೈರತಿ ರಣಗಲ್’ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿ ಇದ್ದಾರೆ. ಈಗ ಅವರು ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ. ತಮಗೆ ಅನಾರೋಗ್ಯ ಆಗಿರೋದು ಹೌದು ಎಂದಿರುವ ಅವರು, ಶಸ್ತ್ರಚಿಕಿತ್ಸೆಗಾಗಿ ಅಮೆರಿಕ ತೆರಳೋದಾಗಿ ಹೇಳಿದ್ದಾರೆ.

ಸುದ್ದಿ ಮನೆ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಶಿವಣ್ಣ ಮಾತನಾಡಿದ್ದಾರೆ. ಅಲ್ಲಿ ಅವರು ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ‘ನನಗೆ ಅನಾರೋಗ್ಯ ಇದೆ. ನಾನು ಸುಳ್ಳು ಹೇಳಲ್ಲ. ನನೂ ಮನುಷ್ಯನೇ. ಟ್ರೀಟ್​ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಅವರು.

‘ಟ್ರೀಟ್​ಮೆಂಟ್​ಗೆ ನಾಲ್ಕು ಸೆಷನ್ ಇದೆ. ಈಗಾಗಲೇ ಎರಡು ಸೆಷನ್ ಆಗಿದೆ. ಇನ್ನೆರಡು ಸೆಷನ್ ಮಾಡಬೇಕಿದೆ. ಒಂದು ಸರ್ಜರಿ ನಡೆಯಬೇಕಿದೆ. ಅಮೆರಿಕದಲ್ಲಿ ಮಾಡೋದಾ ಅಥವಾ ಇಲ್ಲಿ ಮಾಡೋದಾ ಎನ್ನುವ ಬಗ್ಗೆ ಯೋಚನೆ ನಡೆಯುತ್ತಿದೆ. ಅಮೆರಿಕದಲ್ಲಿ ಮಾಡೋದು ಎಂದಾದರೆ ಒಂದು ತಿಂಗಳು ನಾನು ಅಲ್ಲಿಗೆ ಹೋಗಬೇಕಾಗುತ್ತದೆ. ಜನವರಿಯಿಂದ ನಾನು ಫುಲ್ ಫಾರ್ಮ್ ಶಿವಣ್ಣ ಬರ್ತಾರೆ’ ಎಂದಿದ್ದಾರೆ ಅವರು.

ಶಿವರಾಜ್​ಕುಮಾರ್ ಅವರು ತಮ್ಮ ನಿರ್ಮಾಪಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರಂತೆ. ಮುಂದೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ಅವರು ಈ ರೀತಿ ಮಾಡಿದ್ದಾರೆ. ‘ಉಳಿದ ಸಮಯದಲ್ಲಿ ನಾವು ಅಭಿಮಾನಿಗಳು ಬೇಕು ಎನ್ನುತ್ತೇವೆ. ಈ ರೀತಿ ವಿಚಾರ ಬಂದಾಗ ಏಕೆ ಅವರನ್ನು ದೂರ ಇಡಬೇಕು? ಈ ಕಾರಣಕ್ಕೆ ನಾನು ಸುಳ್ಳು ಹೇಳೋದು ಬೇಡ ಎಂದು ಗೀತಾ ಅವರ ಬಳಿ ಹೇಳಿದೆ. ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳೋಕೆ ಬಂದಾಗ ದೂರ ನಿಲ್ಲಿ ಎನ್ನುತ್ತೇನೆ. ಅವರಿಗೆ ಇನ್​ಫೆಕ್ಷನ್ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಿದ್ದೇನೆ ಅಷ್ಟೇ. ಇದೆಲ್ಲ ಇನ್ನೆರಡು ತಿಂಗಳು ಅಷ್ಟೇ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ, ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’; ಮತ್ತೆ ಲಾಂಗ್ ಹಿಡಿದ ಶಿವರಾಜ್​ಕುಮಾರ್

ಶಿವರಾಜ್​ಕುಮಾರ್ ಅವರು ಯಾವ ರೀತಿಯ ತೊಂದರೆ ಎದುರಿಸುತ್ತಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ. ಆದರೆ, ಯಾವುದೋ ಗಂಭೀರ ಸಮಸ್ಯೆಯನ್ನು ಅವರು ಎದುಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರು ಬೇಗೆ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರ ನಟನೆಯ ‘ಭೈರತಿ ರಣಗಲ್’ ಚಿತ್ತ ನವೆಂಬರ್ 15ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್