AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ, ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’; ಮತ್ತೆ ಲಾಂಗ್ ಹಿಡಿದ ಶಿವರಾಜ್​ಕುಮಾರ್

ನಿರ್ದೇಶಕ ನರ್ತನ್, ನಟರಾದ ಶಿವರಾಜ್ಕುಮಾರ್, ಶ್ರೀಮುರಳಿ ಕಾಂಬಿನೇಷನ್ನಲ್ಲಿ ಬಂದ ‘ಮಫ್ತಿ’ ಸಿನಿಮಾ ಜನರ ಮೆಚ್ಚುಗೆ ಗಳಿಸಿತ್ತು. ಆ ಚಿತ್ರದಲ್ಲಿ ಶಿವಣ್ಣ ಮಾಡಿದ ಭೈರತಿ ರಣಗಲ್ ಎಂಬ ಪಾತ್ರ ಸಖತ್ ಹೈಲೈಟ್ ಆಗಿತ್ತು. ಈಗ ಅದೇ ಶೀರ್ಷಿಕೆಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಅದರ ಟೀಸರ್ ಇಲ್ಲಿದೆ.

‘ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ, ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’; ಮತ್ತೆ ಲಾಂಗ್ ಹಿಡಿದ ಶಿವರಾಜ್​ಕುಮಾರ್
ಶಿವಣ್ಣ
ರಾಜೇಶ್ ದುಗ್ಗುಮನೆ
|

Updated on: Jul 12, 2024 | 10:36 AM

Share

‘ಭೈರತಿ ರಣಗಲ್’ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆ ಇದೆ. ಇಷ್ಟು ದಿನ ಸಿನಿಮಾದ ಪೋಸ್ಟರ್​ಗಳು ಗಮನ ಸೆಳೆದಿದ್ದವು. ಈಗ ಇದೇ ಮೊದಲ ಬಾರಿಗೆ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಶಿವರಾಜ್​ಕುಮಾರ್ ಅವರಿಗೆ ಇಂದು (ಜುಲೈ 12) ಜನ್ಮದಿನ. ಇದರ ಅಂಗವಾಗಿ ಟೀಸರ್ ಬಿಡುಗಡೆ ಆಗಿದೆ. ಈ ಟೀಸರ್ ನೋಡಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದೆ. ಶಿವಣ್ಣ ಅವರು ಹೇಳುವ ಒಂದೇ ಒಂದು ಡೈಲಾಗ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಶಿವಣ್ಣ ಅವರ ಬರ್ತ್​ಡೇ ಕ್ರೇಜ್​ನ ಈ ಟೀಸರ್ ಹೆಚ್ಚಿಸಿದೆ.

ನರ್ತನ್ ಹಾಗೂ ಶಿವರಾಜ್​ಕುಮಾರ್ ಅವರು ‘ಮಫ್ತಿ’ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದರು. ಈಗ ಇವರು ಮತ್ತೆ ಒಂದಾಗಿರೋದು ಈ ಚಿತ್ರದ ಪ್ರೀಕ್ವೆಲ್​ಗಾಗಿ. ‘ಮಫ್ತಿ’ ಸಿನಿಮಾದಲ್ಲಿ ಶಿವಣ್ಣ ಅವರು ಭೈರತಿ ರಣಗಲ್ ಹೆಸರಿನ ಪಾತ್ರ ಮಾಡಿದ್ದರು. ಇದೇ ಪಾತ್ರವನ್ನು ಸಿನಿಮಾ ರೂಪದಲ್ಲಿ ತರಲಾಗುತ್ತಿದೆ. ಈಗ ರಿಲೀಸ್ ಆಗಿರೋ ಟೀಸರ್ ಭರ್ಜರಿ ಗಮನ ಸೆಳೆದಿದೆ.

ಭೈರತಿ ರಣಗಲ್ ಊರು ಹೇಗಿದೆ ಎನ್ನುವುದನ್ನು ತೋರಿಸುವ ಪ್ರಯತ್ನ ಟೀಸರ್​ನಲ್ಲಿ ಆಗಿದೆ. ಈ ಚಿತ್ರದಲ್ಲಿ ರೌಡಿಸಂ ಕಥೆ ಇರಲಿದೆ. ಈ ಟೀಸರ್​ನಲ್ಲಿ ಶಿವರಾಜ್​ಕುಮಾರ್ ಹೇಳುವ, ‘ನಾನು ತಾಳ್ಮೆ ಕಳೆದುಕೊಂಡಾಗೆಲ್ಲ ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’ ಎಂಬ ಡೈಲಾಗ್ ಹೈಲೈಟ್ ಆಗಿದೆ.

ಈ ಮೊದಲು ‘ಭೈರತಿ ರಣಗಲ್’ ಸಿನಿಮಾ ಆಗಸ್ಟ್ 15ರಂದು ರಿಲೀಸ್ ಆಗಲಿದೆ ಎನ್ನುವ ಮಾಹಿತಿ ನೀಡಲಾಗಿತ್ತು. ಆದರೆ, ಈಗ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಸೆಪ್ಟೆಂಬರ್​ನಲ್ಲಿ ಚಿತ್ರ ತೆರೆಗೆ ಬರಲಿದೆ ಎನ್ನುವ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಮಫ್ತಿಗಿಂತಲೂ ಭೈರತಿ ರಣಗಲ್ ಹೇಗೆ ಭಿನ್ನ? ಶಿವಣ್ಣನ ಲುಕ್ ಹೇಗಿರುತ್ತೆ? ನಿರ್ದೇಶಕ ನರ್ತನ್ ಉತ್ತರ

ಗೀತಾ ಪಿಕ್ಚರ್ಸ್ ಮೂಲಕ ಗೀತಾ ಶಿವರಾಜ್​ಕುಮಾರ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನರ್ತನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ರಿಲೀಸ್​ಗೆ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಮೇಕೆದಾಟು ಯೋಜನೆ ತಡೆಯಲು ತಮಿಳುನಾಡಿಗೆ ಅಧಿಕಾರವಿಲ್ಲ
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಎರಡು ವರ್ಷಗಳ ಬಳಿಕ ಹಾಸನದಲ್ಲಿ ರಾರಾಜಿಸಿದ ಪ್ರಜ್ವಲ್ ರೇವಣ್ಣ ಫ್ಲೆಕ್ಸ್ ಗಳು
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ಸಚಿವ ಸ್ಥಾನ ಹರಾಜು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಆಡಿಯೋ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ನಾಗೇಂದ್ರಗೆ ಮಂತ್ರಿ ಸ್ಥಾನ ಹೈಕಮಾಂಡ್ ತೀರ್ಮಾನ
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ಸಚಿವರ ಪ್ರಮಾಣವಚನಕ್ಕೆ ಸಿದ್ದು ಗೈರಾಗಿದ್ಯಾಕೆ? ಜಾರಕಿಹೊಳಿ ಹಿಂಗ್ಯಾಕಂದ್ರು?
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ರಾಜೀನಾಮೆ ನೀಡುವ ಮಟ್ಟಕ್ಕೆ ಹೋಗಿದ್ದ ಶಾಸಕ ಶ್ರೀನಿವಾಸ್ ದಿಢೀರ್ ಯುಟರ್ನ್
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸಂಪುಟ ವಿಸ್ತರಣೆ ಬೆನ್ನಲ್ಲೇ ಖಾತೆಗಳಿಗಾಗಿ ಹೆಚ್ಚಿದ ಪೈಪೋಟಿ
ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ!
ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಗುವಿಗೆ 1 ಗ್ರಾಂ ಚಿನ್ನದ ಉಂಗುರ!
ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ನಟ ರವಿಚಂದ್ರನ್
ಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ ನಟ ರವಿಚಂದ್ರನ್
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ
ಮೇಕೆದಾಟು ಯೋಜನೆ ವಿರುದ್ಧ ರಾಜ್ಯಸಭೆಯಲ್ಲಿ ಡಿಎಂಕೆ ನಿಲುವಳಿ ಮಂಡನೆ