ಕರ್ನಾಟಕದಲ್ಲಿ ಲವ್ ಜಿಹಾದ್ ನಂತರ ಲ್ಯಾಂಡ್ ಜಿಹಾದನ್ನು ಜಾರಿಗೆ ತರಲಾಗಿದೆ: ಶೋಭಾ ಕರಂದ್ಲಾಜೆ

ಕರ್ನಾಟಕದಲ್ಲಿ ಲವ್ ಜಿಹಾದ್ ನಂತರ ಲ್ಯಾಂಡ್ ಜಿಹಾದನ್ನು ಜಾರಿಗೆ ತರಲಾಗಿದೆ: ಶೋಭಾ ಕರಂದ್ಲಾಜೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 22, 2024 | 3:21 PM

ಭೂಮಿ ಭಯೋತ್ಪಾದಕರು ಅಂತ ಮೊದಲು ಯಾವತ್ತೂ ಕೇಳಿರಲಿಲ್ಲ, ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಲ್ಯಾಂಡ್ ಜಿಹಾದ್, ಲ್ಯಾಂಡ್ ಟೆರರಿಸಂ ಶುರುಮಾಡಿದ್ದಾರೆ, ಹೊಸದಾಗಿ ಖರೀದಿಸಿದ ಜಮೀನುಗಳಿಗೂ ವಕ್ಫ್ ಬೋರ್ಡ್ ನಿಂದ ನೋಟೀಸ್ ಜಾರಿಯಾಗುತ್ತಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಕ್ಫ್ ಕಾಯ್ದೆ ವಿರುದ್ಧ ಹೋರಾಟ ಮುಂದುವರಿಸಿದ್ದಾರೆ. ಇಂದು ನಗರದಲ್ಲಿ ಮಾಧ್ಯಮದವರೊಡನೆ ಮಾತಾಡಿದ ಅವರು 1994ರಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರೈತರ ಜಮೀನು, ಮಠಮಾನ್ಯ ಮತ್ತು ದೇವಸ್ಥಾನಗಳಿಗೆ ಸೇರಿದ ಜಮೀನುಗಳನ್ನು ಅಪಾಯಕ್ಕೆ ಸಿಲುಕಿಸಲಾಗಿದೆ, ವಕ್ಫ್ ಬೋರ್ಡ್ ಯಾವುದೇ ಜಮೀನನ್ನು ತನಗೆ ಸೇರಿದ್ದು ಅಂತ ಹೇಳಿದರೆ ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಬೇರೆ ಜನ ಸಿವಿಲ್ ಕೋರ್ಟ್​ಗೆ ಹೋಗಲಾಗದು, ಎಲ್ಲ ಮುಸ್ಲಿಮರೇ ಇರುವ ವಕ್ಫ್ ಟ್ರಿಬ್ಯೂನಲ್ ಮುಂದೆ ಗೋಗರೆಯಬೇಕು, ಹಾಗಾಗಿ ವಕ್ಫ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಬಿಜೆಪಿಯ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೇಂದ್ರ ವರಿಷ್ಠರ ಅನುಮತಿಯಿಲ್ಲದೆ ಶೋಭಾ ಕರಂದ್ಲಾಜೆ ಸತ್ಯಾಗ್ರಹದಲ್ಲಿ ಭಾಗಿಯಾಗುತ್ತಾರೆಯೇ? ಯತ್ನಾಳ್