ಕೇಂದ್ರ ವರಿಷ್ಠರ ಅನುಮತಿಯಿಲ್ಲದೆ ಶೋಭಾ ಕರಂದ್ಲಾಜೆ ಸತ್ಯಾಗ್ರಹದಲ್ಲಿ ಭಾಗಿಯಾಗುತ್ತಾರೆಯೇ? ಯತ್ನಾಳ್

ಕೇಂದ್ರ ವರಿಷ್ಠರ ಅನುಮತಿಯಿಲ್ಲದೆ ಶೋಭಾ ಕರಂದ್ಲಾಜೆ ಸತ್ಯಾಗ್ರಹದಲ್ಲಿ ಭಾಗಿಯಾಗುತ್ತಾರೆಯೇ? ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 15, 2024 | 2:24 PM

ತಾವು ನಡೆಸುತ್ತಿರುವ ಅಭಿಯಾನಕ್ಕೆ ಕೇಂದ್ರ ವರಿಷ್ಠರ ಅನುಮತಿ ಮತ್ತು ಬೆಂಬಲವೂ ಇದೆ ಎಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕರು ವಿಜಯಪುರದಲ್ಲಿ ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರು, ವರಿಷ್ಠರ ಅನುಮತಿಯಿಲ್ಲದೆ ಅವರು ಭಾಗಿಯಾಗುವುದು ಸಾಧ್ಯವೇ ಎಂದು ಪ್ರಶ್ನಿಸಿದರು.

ಬೆಂಗಳೂರು: ರಾಜ್ಯದಲ್ಲಿ ಅನೇಕ ಭಾಗಗಳಲ್ಲಿ ರೈತರಿಗೆ ವಕ್ಫ್ ಮಂಡಳಿಯಿಂದ ನೋಟೀಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ರೆಬೆಲ್ ಗುಂಪು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನವೆಂಬರ್ 25ರಿಂದ ಡಿಸೆಂಬರ್ 25 ರವರೆಗೆ ಜಾಗೃತಿ ಅಭಿಯಾನ ಮಾಡುತ್ತಿದೆ. ನಿಮ್ಮ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರ ಅನುಮತಿ ಇದೆಯೇ ಬೇರೆ ನಾಯಕರು ಸಹ ಭಾಗವಹಿಸುತ್ತಾರೆಯೇ ಎಂದು ಕೇಳಿದ ಪ್ರಶ್ನೆ ಅರವಿಂದ ಲಿಂಬಾವಳಿ ಉತ್ತರಿಸಿ ಇದು ಬಹಳ ಗಂಭೀರವಾದ ವಿಷಯವಾಗಿರುವುದರಿಂದ ಎಲ್ಲರೂ ಬರುತ್ತಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ವಕ್ಫ್ ತಿದ್ದುಪಡಿ ಮಸೂದೆ ಅನುಮೋದನೆಗೆ ರಾಜ್ಯ ಕಾಂಗ್ರೆಸ್ ಸಂಸದರು ಕೈಯೆತ್ತಲೇ ಬೇಕು: ಯತ್ನಾಳ್