ಬೆಂಗಳೂರು, ನವೆಂಬರ್ 15: ಟಿವಿ9 ಕನ್ನಡ ಮತ್ತು ಸ್ವೀಟ್ ಹೋಂ ಜಂಟಿಯಾಗಿ ಆಯೋಜಿಸಿರುವ ರಿಯಲ್ ಎಸ್ಟೇಟ್ ಎಕ್ಸ್ಪೋ 2024 ಚಾಲನೆಗೊಂಡಿದೆ. ಸಚಿವ ಭೈರತಿ ಸುರೇಶ್ ಅವರು ಇಂದು ಶುಕ್ರವಾರ ಈ ಪ್ರಾಪರ್ಟಿ ಎಕ್ಸ್ಪೋ ಉದ್ಘಾಟನೆ ನೆರವೇರಿಸಿದರು. ಭಾನುವಾರದವರೆಗೆ ಮೂರು ದಿನಗಳ ಕಾಲ ಈ ಎಕ್ಸ್ಪೋ ಇರಲಿದ್ದು, ನಗರದ ಹಲವು ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್ಗಳು ಭಾಗವಹಿಸಿದ್ದಾರೆ. ನಗರದ ವಿವಿಧೆಡೆ ಇರುವ ಪ್ರಾಜೆಕ್ಟ್ಗಳ ಬಗ್ಗೆ, ವಿವಿಧ ಬೆಲೆಗಳ ಸೈಟು, ಫ್ಲಾಟು ಇತ್ಯಾದಿ ವೈವಿಧ್ಯಮಯ ಪ್ರಾಪರ್ಟಿಗಳ ಅನಾವರಣ ಆಗಲಿದೆ. ಕಳೆದ ಬಾರಿ ನಡೆದ ಟಿವಿ9 ರಿಯಲ್ ಎಸ್ಟೇಟ್ ಎಕ್ಸ್ಪೋ ಭರ್ಜರಿ ಯಶಸ್ಸು ಗಳಿಸಿತ್ತು. ಈ ಬಾರಿಯೂ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ನಾಯಂಡಹಳ್ಳಿಯಿಂದ ಪಿಇಎಸ್ ಯುನಿವರ್ಸಿಟಿಯ ಹಾದಿಯಲ್ಲಿ ಸಿಗುವ ನೈಸ್ ರಸ್ತೆಯ ನಂದಿ ಲಿಂಕ್ ಗ್ರೌಂಡ್ನಲ್ಲಿ ಭಾನುವಾರದವರೆಗೂ ರಿಯಲ್ ಎಸ್ಟೇಟ್ ಪ್ರದರ್ಶನ ನಡೆಯಲಿದೆ. ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ