ಉದ್ದೇಶಪೂರ್ವಕವಾಗಿ ಕುಮಾರಸ್ವಾಮಿಯವರು ಜಮೀರ್ರಿಂದ ನಿಂದನೆ ಮಾಡಿಸಿದ್ದರೆ ಆಶ್ಚರ್ಯವಿಲ್ಲ: ರಮೇಶ್ ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ರನ್ನು ಎದುರಿಸುವುದು ಯಾರಿಗೂ ಸಾಧ್ಯವಿಲ್ಲ, ಜಮೀರ್ ಆಡಿದ ಮಾತಿನಿಂದ ಒಕ್ಕಲಿಗರು ತಮ್ಮ ನಿರ್ಧಾರವನ್ನು ಬದಲಿಸಿ ನಿಖಿಲ್ ಕುಮಾರಸ್ವಾಮಿ ಕಡೆ ತಿರುಗಿದರು ಅಂತಲೂ ಬಂಡಿಸಿದ್ದೇಗೌಡ ಹೇಳುತ್ತಾರೆ. ಉಪ ಚುನಾವಣೆ ನಡೆದ ಎಲ್ಲ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಅವರು ಹೇಳುತ್ತಾರೆ.
ಮಂಡ್ಯ: ವಕ್ಫ್ ಸಚಿವ ಜಮೀರ್ ಅಹ್ಮದ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ನಿಂದಿಸಿದ ಪ್ರಕರಣ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಎಲ್ಲ ಪಕ್ಷಗಳ ನಾಯಕರು ತಮ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಮೀರ್ ಮತ್ತು ಕುಮಾರಸ್ವಾಮಿ ನಡುವೆ ಉತ್ತಮ ಸ್ನೇಹವಿದೆ, ತಮ್ಮ ಮಾತುಗಳನ್ನು ಬೇರೆಯವರ ಬಾಯಿಂದ ಹೇಳಿಸುವುದನ್ನು ಕುಮಾರಸ್ವಾಮಿ ಮಾಡುತ್ತಿರುತ್ತಾರೆ, ಜಮೀರ್ ಬಾಯಿಂದ ಅವರೇ ಕರಿಯ ಅಂತ ಹೇಳಿಸಿರಬಹುದು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವೇಗೌಡರ ಕುಟುಂಬವನ್ನು ಖರೀದಿಸುವ ಮಾತು ನಾನಾಡಿಲ್ಲ: ಜಮೀರ್ ಅಹ್ಮದ್ ಖಾನ್
Published on: Nov 15, 2024 04:26 PM
Latest Videos