ದೇವೇಗೌಡರ ಕುಟುಂಬವನ್ನು ಖರೀದಿಸುವ ಮಾತು ನಾನಾಡಿಲ್ಲ: ಜಮೀರ್ ಅಹ್ಮದ್ ಖಾನ್

ದೇವೇಗೌಡರ ಕುಟುಂಬವನ್ನು ಖರೀದಿಸುವ ಮಾತು ನಾನಾಡಿಲ್ಲ: ಜಮೀರ್ ಅಹ್ಮದ್ ಖಾನ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 12, 2024 | 2:53 PM

ದೇವೇಗೌಡರ ಕುಟುಂಬವನ್ನು ಖರೀದಿ ಮಾಡುವುದು ಈ ರಾಜ್ಯದಲ್ಲಿ ಯಾರಿಗಾದರೂ ಸಾಧ್ಯವಾ ಎನ್ನುವ ಜಮೀರ್ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದಕ್ಕೋಸ್ಕರ ತಾನು ಬಸ್ ಓಡಿಸಿದ್ದು, ಅದರೆ ತಾನು ಬಸ್ ಡ್ರೈವರ್ ಅಲ್ಲ, ಬಸ್ಸಿನ ಮಾಲೀಕ, ತಮ್ಮ ತಾತನ ಕಾಲದಿಂದ ಬಸ್ಸುಗಳನ್ನು ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ.

ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ದೇವೇಗೌಡರ ಕುಟುಂಬವನ್ನು ಖರೀದಿ ಮಾಡುವ ಮಾತನ್ನು ತಾನು ಆಡೇ ಎಲ್ಲ ಎಂದು ಸಾಧಿಸಿದರು. ತಾನು ಹೇಳಿದ್ದೇ ಬೇರೆ, ವರದಿಯಾಗಿದ್ದೇ ಬೇರೆ, ಕುಮಾರಸ್ವಾಮಿಯವರು ಮುಸಲ್ಮಾನರ ವೋಟು ಖರೀದಿಸುವ ಮಾತುಗಳನ್ನಾಡಿದ್ದಾರೆ ಮತ್ತು ಅವರು ಮುಸಲ್ಮಾನರಿಗೆ ₹ 2,000 ಕೊಡುತ್ತಿರುವ ವಿಡಿಯೋ ವೈರಲ್ ಅಗಿದೆ, ಈ ಹಿನ್ನೆಲೆಯಲ್ಲಿ ತಾನು ಅವರಿಗೆ ಮುಸಲ್ಮಾನರ ವೋಟು ಖರೀದಿಸುವುದು ಸಾಧ್ಯವಿಲ್ಲ ಅಂತ ಹೇಳಿದ್ದು ಅಂತ ಜಮೀರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹುಬ್ಬಳ್ಳಿಯಲ್ಲಿ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ ಸಚಿವ ಜಮೀರ್ ಅಹ್ಮದ್ ಖಾನ್