ಸಿದ್ದರಾಮಯ್ಯ ಬಿಟ್ಟರೆ ತಾನೇ ಮುಖ್ಯಮಂತ್ರಿ ಅಂತ ಹಿಂದೆ ರಾಜ್ಯದಲ್ಲಿ ಯಾರೂ ಹೇಳಿಲ್ಲ: ಆರ್ ಅಶೋಕ

ಸಿದ್ದರಾಮಯ್ಯ ಬಿಟ್ಟರೆ ತಾನೇ ಮುಖ್ಯಮಂತ್ರಿ ಅಂತ ಹಿಂದೆ ರಾಜ್ಯದಲ್ಲಿ ಯಾರೂ ಹೇಳಿಲ್ಲ: ಆರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 12, 2024 | 3:52 PM

ಡಿಕೆ ಶಿವಕುಮಾರ್ ನಾನೇ ಮುಖ್ಯಮಂತ್ರಿ ಅಂತ ಚನ್ನಪಟ್ಟಣದಲ್ಲಿ ಹೇಳಿಕೊಂಡು ಓಡಾಡುತ್ತಿದ್ದಾರೆ, ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯರಿಂದ ಬೇಸತ್ತಿದ್ದಾರೆ, ಅವರ ಕ್ಷೇತ್ರಗಳ ಅಭಿವೃದ್ಧಿಗೆ ಮುಖ್ಯಮಂತ್ರಿ ಬಿಡಿಗಾಸೂ ನೀಡಿಲ್ಲ, ಅವರ ಜೊತೆ ಇದ್ದರೆ ಕಳ್ಳೆಬೀಜವೂ ದಕ್ಕಲಾರದು ಅಂತ ಶಾಸಕರಿಗೆ ಮನವರಿಕೆಯಾಗಿದೆ ಎಂದು ಅಶೋಕ ಹೇಳಿದರು.

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ಉಳಿ ಸಾಧ್ಯತೆ ಇಲ್ಲ, ದಿನಬೆಳಗಾದರೆ ಮಠಾಧೀಶರು, ಜ್ಯೋತಿಷಿಗಳು ರಾಜಕಾರಣಿಗಳು ಸಿದ್ದರಾಮಯ್ಯ ಸರ್ಕಾರ ಬಿದ್ದುಹೋಗುತ್ತದೆ ಅಂತ ಭವಿಷ್ಯ ನುಡಿಯುತ್ತಾರೆ ಎಂದು ವಿಷಕ್ಷ ನಾಯಕ ಆರ್ ಅಶೋಕ ಹೇಳಿದರು. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಅಂತ ಕನಿಷ್ಠ ಒಂದು ಸಾವಿರ ಸಲ ಹೇಳಿರಬಹುದು, ಅವರ ಸ್ಥಾನ ಭದ್ರವಿಲ್ಲ, ಜೊಳ್ಳಿನ ಮೇಲೆ ಕೂತು ಅವರು ಅಧಿಕಾರ ನಡೆಸುತ್ತಿದ್ದಾರೆ, ಸರ್ಕಾರ ಉಳಿಯಲ್ಲ ಅವರಿಗೂ ಗೊತ್ತಿದೆ, ಹಾಗಾಗಿ ಇರುವಷ್ಟು ದಿನ ಕಾಸು ಮಾಡಿಕೊಳ್ಳುವ ಬಗ್ಗೆ ಅವರು ಯೋಚಿಸುತ್ತಿರಬಹುದು ಎಂದು ಅಶೋಕ ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಕಾಂಗ್ರೆಸ್​ 60 ಪರ್ಸೆಂಟ್​ ಲಂಚ ಹೊಡೆದು ರಾಜ್ಯವನ್ನ ಲೂಟಿ ಮಾಡುತ್ತಿದೆ: ಅಶೋಕ್​ ತಿರುಗೇಟು