ಹುಬ್ಬಳ್ಳಿಯಲ್ಲಿ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ ಸಚಿವ ಜಮೀರ್ ಅಹ್ಮದ್ ಖಾನ್

ಹುಬ್ಬಳ್ಳಿಯಲ್ಲಿ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ ಸಚಿವ ಜಮೀರ್ ಅಹ್ಮದ್ ಖಾನ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 07, 2024 | 10:17 AM

ರೈತರು ನಮ್ಮ ಅನ್ನದಾತರು, ಅವರಿಗೆ ಯಾವುದೇ ಕಾರಣಕ್ಕೆ ತೊಂದರೆ ಕೊಡಲ್ಲ, ಅವರಿಗೆ ನೋಟೀಸ್​ಗಳು ಜಾರಿಯಾಗಿದ್ದರೆ ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಕ್ಫ್​ ಸಚಿವನಾಗಿ ತಾನು ಹಲವಾರು ಬಾರಿ ಸ್ಪಷ್ಟಪಡಿಸಿದ್ದೇವೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದರು.

ಹುಬ್ಬಳ್ಳಿ: ವಕ್ಫ್ ಮತ್ತು ವಸತಿ ಸಚಿವ ಬಿಜೆಡ್​ ಜಮೀರ್ ಅಹ್ಮದ್ ಖಾನ್ ಅವರು ನಿನ್ನೆ ಸಾಯಂಕಾಲ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿದ್ದು ಕುತೂಹಲ ಕೆರಳಿಸಿದೆ. ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ, ಇದೇ ತಿಂಗಳು 19ರಂದು ರಾಜ್ಯ ವಕ್ಫ್​ ಬೋರ್ಡ್​ಗೆ ಚುನಾವಣೆ ನಡೆಯಲಿದೆ, ಅದೇ ಹಿನ್ನೆಲೆಯಲ್ಲಿ ಬೋರ್ಡಿನ ಸದಸ್ಯರೊಂದಿಗೆ ಸಭೆ ನಡೆಸಿದ್ದು, ರೈತರಿಗೆ ನೋಟೀಸ್ ಮತ್ತು ಮೀಟಿಂಗ್ ನಡುವೆ ಯಾವುದೇ ಸಂಬಂಧವಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹಳೆಯ ದೋಸ್ತಿ ಜಮೀರ್ ಆಹ್ಮದ್ ಖಾನ್ ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೆಚ್ ಡಿ ಕುಮಾರಸ್ವಾಮಿ