AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ ದೋಸ್ತಿ ಜಮೀರ್ ಆಹ್ಮದ್ ಖಾನ್ ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೆಚ್ ಡಿ ಕುಮಾರಸ್ವಾಮಿ

ಹಳೆಯ ದೋಸ್ತಿ ಜಮೀರ್ ಆಹ್ಮದ್ ಖಾನ್ ರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 27, 2023 | 2:01 PM

Share

ಅಲ್ಪಸಂಖ್ಯಾತರ ಉದ್ಧಾರಕ ಎಂದು ದೊಡ್ಡದಾಗಿ ಪೋಸುಗಳನ್ನು ನೀಡುವ ನಾಯಕ ಬಿಜೆಪಿಯ ಐವರು ಬೆಂಬಲಕ್ಕೆ ಬಂದರೆ ಇನ್ನೂ ಐವರನ್ನು ಆ ಕಡೆ ಕಳಿಸ್ತೀವಿ ಅಂತ ವಿಧಾನ ಸಭೆಯಲ್ಲಿ ಹೇಳಿದ್ದರು ಎಂದ ಕುಮಾರಸ್ವಾಮಿ, ಇತಿಹಾಸ ತೆಗೆದು ನೋಡಿ ಗೊತ್ತಾಗುತ್ತದೆ ಎಂದು ಮಾಧ್ಯಮದವರಿಗೆ ಹೇಳಿದರು

ಬೆಂಗಳೂರು: ನಗರದಲ್ಲಿಂದು ಜೆಡಿಎಸ್ ನಾಯಕ ಹೆಚ್ ಡಿ ದೇವೇಗೌಡ (HD Devegowda) ಅವರು ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ತಮ್ಮ ಹಳೆಯ ದೋಸ್ತಿ ಮತ್ತು ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವರಾಗಿರುವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಹಿಂದಿನ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾಗ ತನಗೆ ಆಪ್ತರಾಗಿದ್ದ ಬಿಜೆಪಿಯ ಐವರು ಶಾಸಕರು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಲು ಮುಂದೆ ಬಂದಿದ್ದರು. ಆಗ ಅಲ್ಪಸಂಖ್ಯಾತರ ಉದ್ಧಾರಕ ಎಂದು ದೊಡ್ಡದಾಗಿ ಪೋಸುಗಳನ್ನು ನೀಡುವ ನಾಯಕ (ಕುಮಾರಸ್ವಾಮಿಯವರು ಜಮೀರ್ ಆಹ್ಮದ್ ಹೆಸರು ಉಲ್ಲೇಖಿಸದೆ ದಾಳಿ ನಡೆಸಿದರು) ಬಿಜೆಪಿಯ ಐವರು ಬೆಂಬಲಕ್ಕೆ ಬಂದರೆ ಇನ್ನೂ ಐವರನ್ನು ಆ ಕಡೆ ಕಳಿಸ್ತೀವಿ ಅಂತ ವಿಧಾನ ಸಭೆಯಲ್ಲಿ ಹೇಳಿದ್ದರು ಎಂದ ಕುಮಾರಸ್ವಾಮಿ, ಇತಿಹಾಸ ತೆಗೆದು ನೋಡಿ ಗೊತ್ತಾಗುತ್ತದೆ ಎಂದು ಮಾಧ್ಯಮದವರಿಗೆ ಹೇಳಿದರು. ಅವರು ಹೇಳುವ ತಾತ್ಪರ್ಯ ಮೈತ್ರಿ ಸರ್ಕಾರದ ಪತನಕ್ಕೆ ಕಾಂಗ್ರೆಸ್ ನಾಯಕರು ಅನ್ನುವಂತಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ