Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ ಆರಂಭ: ಗಜಪಡೆ ಸಾಗುವ ರಸ್ತೆಯಲ್ಲಿ ಮರದ ಕೊಂಬೆಗಳ ಕಟಾವು

ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ ಆರಂಭ: ಗಜಪಡೆ ಸಾಗುವ ರಸ್ತೆಯಲ್ಲಿ ಮರದ ಕೊಂಬೆಗಳ ಕಟಾವು

ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Sep 27, 2023 | 3:51 PM

Mysore Dasara: ಮೈಸೂರಿನಲ್ಲಿ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ನಾಡಹಬ್ಬಕ್ಕೆ ಸದ್ಯ ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಗಜಪಡೆ ಸಾಗುವ ಮಾರ್ಗದ ರಸ್ತೆಗೆ ಚಾಚಿಕೊಂಡಿರುವ ಮರದ ಕೊಂಬೆಗಳ ಕಟಾವು ಮಾಡಲಾಗಿದೆ.

ಮೈಸೂರು, ಸೆಪ್ಟೆಂಬರ್​ 27: ಮೈಸೂರಿನಲ್ಲಿ ಐತಿಹಾಸಿಕ ದಸರಾ (Dasara) ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ನಾಡಹಬ್ಬಕ್ಕೆ ಸದ್ಯ ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಗಜಪಡೆ ಸಾಗುವ ಮಾರ್ಗದ ರಸ್ತೆಗೆ ಚಾಚಿಕೊಂಡಿರುವ ಮರದ ಕೊಂಬೆಗಳ ಕಟಾವು ಮಾಡಲಾಗಿದೆ. ಅರಮನೆಯಿಂದ ಬನ್ನಿ ಮಂಟಪದವರೆಗೂ ರಂಬೆ, ಕೊಂಬೆಗಳ ಕಟಾವು ಮಾಡಲಾಗಿದ್ದು, ಸಯ್ಯಾಜಿರಾವ್ ರಸ್ತೆ, ಕೆ.ಆರ್ ವೃತ್ತ ಸೇರಿ ಹಲವೆಡೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇದೆ ಮಾರ್ಗವಾಗಿ ಗಜಪಡೆ ದಿನಕ್ಕೆ 2 ಬಾರಿ ತಾಲೀಮು ನಡೆಸುತ್ತಿವೆ. ಯಾವುದೇ ಅಡೆತಡೆಗಳು ಉಂಟಾಗದಂತೆ ಪಾಲಿಕೆ ಎಚ್ಚರಿಕೆ ವಹಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.