ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಮರ್ಸಿಡಿಸ್ ಬೆಂಜ್ ಪಾತ್ರ ಮಹತ್ವದ್ದು; ನ್ಯೂಸ್ 9 ಗ್ಲೋಬಲ್ ಶೃಂಗಸಭೆಯಲ್ಲಿ ಬಾಬಾ ಕಲ್ಯಾಣಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಮರ್ಸಿಡಿಸ್ ಬೆಂಜ್ ಪಾತ್ರ ಮಹತ್ವದ್ದು; ನ್ಯೂಸ್ 9 ಗ್ಲೋಬಲ್ ಶೃಂಗಸಭೆಯಲ್ಲಿ ಬಾಬಾ ಕಲ್ಯಾಣಿ

ಸುಷ್ಮಾ ಚಕ್ರೆ
|

Updated on: Nov 22, 2024 | 9:03 PM

ಭಾರತ್ ಫೋರ್ಜ್‌ನ ಅಧ್ಯಕ್ಷ ಮತ್ತು ಎಂಡಿ ಬಾಬಾ ಕಲ್ಯಾಣಿ ಅವರು ಸುಮಾರು 20 ವರ್ಷಗಳ ಹಿಂದೆ ಜರ್ಮನ್ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡಾಗ ತಾವು ಯಾವ ರೀತಿಯ ಸವಾಲುಗಳನ್ನು ಎದುರಿಸಬೇಕಾಯಿತು ಎಂಬ ಬಗ್ಗೆ ವಿವರಿಸಿದ್ದಾರೆ.

ನವದೆಹಲಿ: ಭಾರತ್ ಫೋರ್ಜ್‌ನ ಅಧ್ಯಕ್ಷ ಮತ್ತು ಎಂಡಿ, ಬಾಬಾ ಕಲ್ಯಾಣಿ ಅವರು ಸುಮಾರು 20 ವರ್ಷಗಳ ಹಿಂದೆ ಜರ್ಮನ್ ವ್ಯವಹಾರವನ್ನು ಸ್ವಾಧೀನಪಡಿಸಿಕೊಂಡಾಗ ತಮ್ಮ ಕಂಪನಿ ಎದುರಿಸಿದ ಸವಾಲುಗಳನ್ನು ವಿವರಿಸಿದರು. ತಮ್ಮ ಕಂಪನಿಯು ಹೇಗೆ ಉದ್ಯೋಗಿಗಳ ವಿಶ್ವಾಸವನ್ನು ಗೆದ್ದಿತು ಎಂಬುದರ ಬಗ್ಗೆ ಮಾತನಾಡಿದರು. ಇಂದು ನ್ಯೂಸ್ 9 ಗ್ಲೋಬಲ್ ಶೃಂಗಸಭೆಯಲ್ಲಿ ಭಾಷಣ ಮಾಡಿದ ಬಾಬಾ ಕಲ್ಯಾಣಿ, ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಮರ್ಸಿಡಿಸ್ ಬೆಂಜ್ ಹೇಗೆ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂಬುದರ ಕುರಿತು ಸಹ ಮಾತನಾಡಿದರು. ಹೆಚ್ಚಿನ ಯುರೋಪಿಯನ್ ಕಾರು ತಯಾರಕರು ಈಗ ತಮ್ಮ ಪೂರೈಕೆಗಾಗಿ ಭಾರತ್ ಫೋರ್ಜ್ ಅನ್ನು ಬಯಸುತ್ತಾರೆ. ನಾವು ಮರ್ಸಿಡಿಸ್ ಬೆಂಜ್ ಮುಂತಾದ ಆಟೊಮೊಬೈಲ್ ಕಂಪನಿಗಳಿಗೆ ಭಾಗಗಳನ್ನು ಸರಬರಾಜು ಮಾಡುತ್ತೇವೆ ಎಂದು ಅವರು ಹೇಳಿದರು.

ಬಾಬಾ ಕಲ್ಯಾಣಿ ಅವರು ಹೈಟೆಕ್ ಉತ್ಪಾದನೆಯಲ್ಲಿ ಭಾರತದ ಪಾತ್ರ ಮತ್ತು ಜಾಗತಿಕ ಮಟ್ಟದಲ್ಲಿ ಅದರ ಸ್ಪರ್ಧಾತ್ಮಕತೆಯ ಬಗ್ಗೆ ಮಾತನಾಡಿದರು. 2004ರಲ್ಲಿ ಜರ್ಮನಿ 3ನೇ ಅತಿದೊಡ್ಡ ಆರ್ಥಿಕತೆಯಾಗಿತ್ತು. ನಾವು ಏನೂ ಇರಲಿಲ್ಲ. ನಾವು ಜರ್ಮನಿ ಕಂಪನಿ ಖರೀದಿಸಿದಾಗ ಜನರಿಗೆ ಸಕಾರಾತ್ಮಕ ಅಭಿಪ್ರಾಯ ಇರಲಿಲ್ಲ. ಒಬ್ಬ ಭಾರತೀಯ ಬಂದು ಇಲ್ಲಿರುವ ತಂತ್ರಜ್ಞಾನ ಪಡೆದುಕೊಂಡು ಕಂಪನಿಯನ್ನು ಮುಚ್ಚಿ ಹೋಗುತ್ತಾನೆ ಎಂದೇ ಎಲ್ಲರೂ ಭಾವಿಸಿದ್ದರು. ಭಾರತ್ ಫೋರ್ಜ್ ಸಂಸ್ಥೆ ಇವತ್ತು ಉತ್ತಮವಾಗಿ ಬೆಳೆದಿದೆ ಎಂದು ಬಾಬಾ ಕಲ್ಯಾಣಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ