AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದು ಕಂದಮ್ಮಗಳನ್ನ ಕತ್ತು ಹಿಸುಕಿ ಕೊಂದ ತಾಯಿ, ಗಂಡ ಹೆಂಡ್ತಿ ಜಗಳಕ್ಕೆ ಬಲಿಯಾದ ಮಕ್ಕಳು

ಅದು ಗಂಡ ಹೆಂಡತಿ ಹಾಗೂ ಇಬ್ಬರು ಮಕ್ಕಳಿದ್ದ ಸುಂದರ ಸಂಸಾರ..ಜಾರ್ಖಾಂಡ್ ಮೂಲದ ಈ ದಂಪತಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ರು. ಆದ್ರೆ ಪತಿ ಪತ್ನಿ ನಡುವಿನ ಜಗಳ ಇಬ್ಬರು ಪುಟ್ಟ ಮಕ್ಕಳನ್ನ ಬಲಿ ಪಡೆದಿದೆ. ಹೆತ್ತ ಕರುಳೇ ಮುದ್ದು ಮಕ್ಕಳ ಹೆಣ ಉರುಳಿಸಿದ ಕರುಣಾಜನಕ ಕಥೆ ಇಲ್ಲಿದೆ.

ಮುದ್ದು ಕಂದಮ್ಮಗಳನ್ನ ಕತ್ತು ಹಿಸುಕಿ ಕೊಂದ ತಾಯಿ, ಗಂಡ ಹೆಂಡ್ತಿ ಜಗಳಕ್ಕೆ ಬಲಿಯಾದ ಮಕ್ಕಳು
ಮೃತ ಮಕ್ಕಳು
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ|

Updated on: Nov 22, 2024 | 10:15 PM

Share

ಬೆಂಗಳೂರು, (ನವೆಂಬರ್ 22): ಏನು ಅರಿಯದ ಈ ಮುದ್ದು ಮಕ್ಕಳು ತನ್ನ ತಾಯಿ ಕೈನಿಂದಲೇ ಕೊಲೆಯಾಗಿದ್ದಾರೆ ಎನ್ನುವುದನ್ನ ನಂಬಲಸಾಧ್ಯವಾದರು ನಂಬಲೇಬೇಕು..ಮಕ್ಕಳ ಬದುಕು ರೂಪಿಸಬೇಕಾದ ಹೆತ್ತಮ್ಮನೇ ಮಕ್ಕಳ ಜೀವನವನ್ನೇ ಮುಗಿಸಿಬಿಟ್ಟಿದ್ದಾಳೆ. ಹೌದು… ಮಹಿಳೆಯೊಬ್ಬರು ತನ್ನಿಬ್ಬರು ಮುದ್ದಾದ ಮಕ್ಕಳನ್ನು ಕೈಯಾರೆ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಗ್ಗದಿಂದ ಕುತ್ತಿಗೆಗೆ ಬಿಗಿದು ಶಂಭು(7), ಶಿಯಾ ಳನ್ನ (3) ಕೊಲೆ ಮಾಡಿದ್ದಾಳೆ.  ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ, ಸರಿಯಾದ ಸಮಯಕ್ಕೆ ಗಂಡ ಬಂದು ಕಾಪಾಡಿದ್ದಾನೆ.

ಜಾರ್ಖಾಂಡ್ ಮೂಲದ ಸುನಿಲ್ ಸಾಹು ಹಾಗೂ ಮಮತಾ ಸಾಹು ದಂಪತಿ ಬೆಂಗಳೂರಿನ ಸುಬ್ರಹ್ಮಣ್ಯಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ದರು. ಸುನಿಲ್ ಸಾಹು ಆಟೋ ಓಡಿಸಿಕೊಂಡಿದ್ರೆ ಮಮತಾ ಗೃಹಿಣಿಯಾಗಿದ್ದಳು. ಹೀಗಿರಬೇಕಾದ್ರೆ ಪತ್ನಿಗೆ ಪತಿ ಮೇಲೆ ಅನುಮಾನ. ಜಾರ್ಖಾಂಡ್ ಮೂಲದ ಮಹಿಳೆ ಜೊತೆಗೆ ಫೋನಲ್ಲಿ ಮಾತಾಡ್ತಾನೆ ಅನ್ನೋ ಸಂಶಯ ಇತ್ತು..ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೀತಿತ್ತು..ಅದರಂತೆ ನವಂಬರ್ 21 ರ ಸಂಜೆ ಕೂಡ ಗಲಾಟೆ ಆಗಿದೆ…

ಇದನ್ನೂ ಓದಿ: ಪ್ರೊಫೆಸರ್‌ಗೆ ಖಾಸಗಿ ಫೋಟೋ ಗುಮ್ಮ: ಜಿಮ್‌ನಲ್ಲಿ ಕಸರತ್ತು ಮಾಡಲು ಬಂದ ಲೇಡಿ ಮಾಡಿದ್ದೇನು?

ಗಲಾಟೆ ಬಳಿಕ ಸಂಜೆ 7.30 ಕ್ಕೆ ಸರಿಯಾಗಿ ಗಂಡ ಸುನಿಲ್ ಸಾಹು ಆಟೋ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದಾನೆ‌. ಹೀಗೆ ಹೋದವನಿಗೆ 9.45 ರ ಸುಮಾರಿಗೆ ಬಂದ ಅದೊಂದು ಫೋಟೊ ನಿಂತಲ್ಲೇ ನಡುಗುವಂತೆ ಮಾಡಿತ್ತು. ಯಾಕಂದ್ರೆ ಆ ಸೆಲ್ಫಿ ಫೋಟೊ ಅಷ್ಟೊಂದು ಭಯಾನಕವಾಗಿತ್ತು. ಮನೆಗೆ ಬಂದು ನೋಡಿದ ಪತಿ ಸುನೀಲ್ ಗೆ ಕಂಡಿದ್ದು ಮಾತ್ರ ಭಯಾನಕ.

ಇಬ್ಬರು ಮಕ್ಕಳು ಕುತ್ತಿಗೆ ಬಿಗಿದು ಕೊಲೆ ಮಾಡಿದ ಸ್ಥತಿಯಲ್ಲಿದ್ರೆ ಪತ್ನಿ ಕತ್ತು ಸೀಳಿತ್ತು..ಹಿಂದೂ ಮುಂದು ನೋಡದೆ ಪತ್ನಿಯನ್ನ ಮೊದಲು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾನೆ. ಬಳಿಕ ಏನಾಯ್ತು ಅಂತಾ ತಿಳಿತಿದ್ದಂತೆ ಬೆಚ್ಚಿಬಿದ್ದಿದ್ದ. ಯಾಕಂದ್ರೆ ಗಂಡನ ಮೇಲಿನ ಕೋಪಕ್ಕೆ ಪತ್ನಿಯೇ ಇಬ್ಬರು ಮಕ್ಕಳನ್ನ ಸೆಣಬಿನ ದಾರದಿಂದ ಕತ್ತು ಬಿಗಿದು ಕೊಲೆ ಮಾಡಿ ನಂತರ ತಾನು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದ್ರೆ ದಾರ ತುಂಡಾಗಿ ಕೆಳಗೆ ಬಿದ್ದಿದ್ದಾಳೆ…ಬಳಿಕ ಮನೆಯಲ್ಲಿದ್ದ ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದಾಳೆ..ಆದ್ರೆ ಪ್ರಾಣ ಹೋಗಿರಲಿಲ್ಲ.

ಸದ್ಯ ಮಮತಾ ಸಾಹು ಆಸ್ಪತ್ರೆಗೆ ದಾಖಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.