ಪ್ರೊಫೆಸರ್‌ಗೆ ಖಾಸಗಿ ಫೋಟೋ ಗುಮ್ಮ: ಜಿಮ್‌ನಲ್ಲಿ ಕಸರತ್ತು ಮಾಡಲು ಬಂದ ಲೇಡಿ ಮಾಡಿದ್ದೇನು?

ಹೊರಗಿನವರ ಜೊತೆ ವ್ಯವಹಾರ ಆಗಲಿ ಸಂಬಂಧ ಆಗಲಿ ಜಾಗರೂಕತೆಯಿಂದ ಮಾಡ್ಬೇಕು. ಯಾರನ್ನ ನಂಬಬೇಕು? ಯಾರನ್ನು ನಂಬಬಾರದು ಅನ್ನೊ ಬಹುಮುಖ್ಯ. ಯಾಕಂದ್ರೆ ಇಲ್ಲಿ ನಾಲ್ಕು ವರ್ಷಗಳ ಸ್ನೇಹವು ಹನಿಟ್ರಾಪ್ ಆಗಿ ಬದಲಾಗಬಹುದು. ಹೌದು...ಸ್ನೇಹ ಎಷ್ಟು ಹಳೆಯದಾಗಿರಲಿ ಅಥವಾ ಎಂತಹದ್ದೆ ಆಗಿರಲಿ ಎಚ್ಚರಿಕೆಯಿಂದ ಇದ್ದರೆ ಮಾತ್ರ ಒಳ್ಳೆಯದು. ಏಕೆ ಅಂತೀರಾ ಈ ಸ್ಟೋರಿ ನೋಡಿ.

ಪ್ರೊಫೆಸರ್‌ಗೆ ಖಾಸಗಿ ಫೋಟೋ ಗುಮ್ಮ: ಜಿಮ್‌ನಲ್ಲಿ ಕಸರತ್ತು ಮಾಡಲು ಬಂದ ಲೇಡಿ ಮಾಡಿದ್ದೇನು?
Follow us
Prajwal Kumar NY
| Updated By: ರಮೇಶ್ ಬಿ. ಜವಳಗೇರಾ

Updated on: Nov 22, 2024 | 7:22 PM

ಬೆಂಗಳೂರು, (ನವೆಂಬರ್ 22): ತಬಸುಂ ಬೇಗಂ, ಅಜೀಂ ಉದ್ದೀನ್ , ಅಭಿಷೇಕ್ ಇವರು ನಾಲ್ಕು ವರ್ಷಗಳ ಸ್ನೇಹಿತರು. ಬಳಿಕ ವ್ಯವಹಾರಿಕ ಸಂಬಂಧವನ್ನು ಹನಿಟ್ರಾಪ್ ಆಗಿ ಬದಲಾವಣೆ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿ ಒರ್ವ ಪ್ರೊಫೆಸರ್ ನಿಂದ ಬರೋಬ್ಬರಿ ಎರಡು ಕೋಟಿ ಇಪತ್ತೈದು ಲಕ್ಷ ಕ್ಕು ಹೆಚ್ಚಿನ ಹಣವನ್ನು ಸುಲಿಗೆ ಮಾಡಿದ್ದಾರೆ. ಹೌದು….42 ವಯಸ್ಸಿನ ಓರ್ವ ಪ್ರೊಫೆಸರ್​ಗೆ ಖಾಸಗಿ ಫೋಟೋಗಳನ್ನು ಹಾಕಿ ಬರೋಬ್ಬರಿ ಎರಡು ಕೋಟಿ ಪೀಕಿದ್ದಾರೆ. ಇಷ್ಟಕ್ಕೆ ಹಣದ ದಾಹ ತೀರದಿದ್ದಾಗ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈ ಆರೋಪಿತೆ ಮಹಿಳೆ ತಬಸುಂ ಆರ್ ಟಿ ನಗರದ ಒಂದು ಜಿಮ್ ನಲ್ಲಿ ರೆಸೆಪ್ಶನಿಸ್ಟ್ ಆಗಿ ಕೆಲಸ ಮಾಡ್ತಿದ್ದಳಂತೆ. ಅದೇ ಜಿಮ್ ಗೆ 2021 ರಲ್ಲಿ 42 ವಯಸ್ಸಿನ ಒರ್ವ ಪ್ರೊಫೆಸರ್ ಜಾಯಿನ್ ಆಗಿದ್ದಾರೆ. ಆತ ಜಿಮ್ ಗೆ ಸೇರಿದ ಕೆಲ ದಿನಗಳಲ್ಲಿ ತಬಸುಂ ಜೊತೆಗೆ ಪರಿಚಯ ಆಗಿ ಸ್ನೇಹ ಸಂಬಂಧ ಬೆಳದಿದೆ. ಈ ಸ್ನೇಹ ಇಬ್ಬರ ನಡುವೆ ಪ್ರೀತಿ ಯಾಗಿ ಬದಲಾಗಿದೆ . ನಂತರ ಆಕೆಗೆ ಮದುವೆಯಾಗಿ ಮಗು ಇದ್ದು ಗಂಡನ ಬಿಟ್ಟಿದ್ದಾಳೆ ಎನ್ನುವ ವಿಚಾರ ಪ್ರೊಫೆಸರ್ ಗೆ ಗೊತ್ತಾಗಿ ಆತ ಗಲಾಟೆ ಮಾಡಿದ್ದನಂತೆ.

ಇದನ್ನೂ ಓದಿ: ಬಾಗಲಕೋಟೆ ಹೇರ್​ ಡ್ರೈಯರ್​​ ಸ್ಫೋಟಕ್ಕೆ ಬಿಗ್​ ಟ್ವಿಸ್ಟ್​: ಪ್ರಕರಣದ ಹಿಂದಿದೆ ಪ್ರೇಮ ಪುರಾಣ

ಈ ನಡುವೆ ವ್ಯವಹಾರ ನಡೆಸಲು ಮತ್ತು ಒಂದಷ್ಟು ಬಿಜಿನೆಸ್ ಮಾಡಬೇಕು ಎಂದು ಹಂತ ಹಂತವಾಗಿ ಸುಮಾರು ಎರಡು ಕೋಟಿ ಇಪತ್ತೈದು ಲಕ್ಷಕ್ಕು ಹೆಚ್ಚಿನ ಹಣವನ್ನು ಈಕೆ ಪಡೆದಿದ್ದಾಳೆ. ಇಬ್ಬರ ನಡುವೆ ಗಲಾಟೆ ಆದ ಬಳಿಕ ಪ್ರೊಫೆಸರ್ ಹಣ ಕೊಡಲ್ಲಾ ಎಂದಿದ್ದಾನೆ. ಈ ವೇಳೆ ಪ್ರೊಫೆಸರ್ ಗೆ ವಾಟ್ಸ್ ಆಪ್ ಮೂಲಕ ಕೆಲ ಖಾಸಗಿ ಫೋಟೊಗಳನ್ನು ಕಳಿಸಿದ್ದ ತಬಸುಂ ಬೇಗಂ ತನಗೆ ಇನ್ನಷ್ಟು ಹಣ ಕೊಡಬೇಕು. ಇಲ್ಲವಾದ್ರೆ ಈ ಫೋಟೊ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಆಕೆಯ ಸಹೋದರ ಎಂದು ಹೆಳಿಕೊಂಡು ಅಜೀಂ ಉದ್ದಿನ್ ಮತ್ತು ಆಕೆಯ ವಕೀಲ ಮತ್ತು ಪೋಲಿಸ್ ಎಂದು ಹೇಳಿ ಅಭಿಷೇಕ್ ಎಲ್ಲರು ಬೆದರಿಗೆ ಹಣ ವಸೂಲಿ ಮಾಡಿದ್ದಾರೆ.

ಯಾವಾಗ ಇವರುಗಳ ಕಾಟ ಹೆಚ್ಚಾಗಿತ್ತು ಆಗ ತನ್ನ ಪಿಎಫ್ ನಲ್ಲಿ ಇದ್ದ ಹಣವನ್ನು ಸಹ ಪ್ರೊಫೆಸರ್ ನೀಡಿದ್ದ. ಅಷ್ಟು ಸಾಲುದು ಎಂದು ಆರೋಪಿಗಳು ಹೇಳಿದಾಗ ಕೊನೆಗೆ ಪ್ರೊಫೆಸರ್, ಸಿಸಿಬಿ ಮೆಟ್ಟಿಲೇರಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಕಾರ್ಚರಣೆಗಿಳಿದ ಸಿಸಿಬಿ, ಆರೋಪಿಗಳನ್ನು ಅರೆಸ್ಟ್ ಮಾಡಿ ತನಿಖೆ ನಡೆಸುತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ