ಭೋವಿ ನಿಗಮದ ಹಗರಣ: ಸಿಐಡಿ ವಿಚಾರಣೆ ಬಳಿಕ ಆತ್ಮಹತ್ಯೆಗೆ ಶರಣಾದ ಯುವತಿ
ವಾಲ್ಮೀಕಿ ನಿಗಮ, ಮುಡಾ ಹಗರಣಗಳ ಬಳಿಕ ಭೋವಿ ಅಭಿವೃದ್ಧಿ ನಿಗಮ ದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆರೋಪ ಕೇಳಿಬಂದಿತ್ತು. ರಾಜ್ಯ ರಾಜಕಾರಣದಲ್ಲಿ ಈ ಹಗರಣ ಆರೋಪ ಸಂಚಲನ ಮೂಡಿಸಿತ್ತು. ಸದ್ಯ ಇದೇ ಭೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್ ಪೂರೈಸ್ತಿದ್ದ ಓರ್ವ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲೂ ಸಿಐಡಿ ವಿಚಾರಣೆ ಬಳಿಕ ಆತ್ಮಹತ್ಯೆಗೆ ಶರಣಾಗಿರುವುದು ಸಾಕಷ್ಟು ಸಂಚಲನ ಮೂಡಿಸಿದೆ.
ಬೆಂಗಳೂರು, ನವೆಂಬರ್ 22: ಬಿಜೆಪಿ ಕಾಲದ ಭೋವಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ (Bhovi Development Corporation) ತನಿಖೆಗೆ ಸಿದ್ದರಾಮಯ್ಯ ಸರ್ಕಾರ ಸಿಐಡಿಗೆ ನೀಡಿದ್ದು, ಸಿಐಡಿ ಅಧಿಕಾರಿಗಳು ಸಹ ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆಹಾಕುತ್ತಿದ್ದಾರೆ. ಇದರ ಮಧ್ಯ ಬೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್ ಪೂರೈಸ್ತಿದ್ದ 35 ವರ್ಷದ ಜೀವಾ ಎನ್ನುವ ಯುವತಿ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದರಲ್ಲೂ ಮುಖ್ಯವಾಗಿ ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಯುವತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಭಾರೀ ಸಂಚಲನ ಮೂಡಿಸಿದೆ. ಖುದ್ದು ಮೃತ ಸಹೋದರಿ ಸಿಐಡಿ ತನಿಖಾಧಿಕಾರಿ ಕನಕಲಕ್ಷ್ಮೀ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಪದ್ಮನಾಭನಗರದ ನಿವಾಸದಲ್ಲಿ ಜೀವಾ(35) ನೇಣಿಗೆ ಶರಣಾಗಿದ್ದಾರೆ. 11 ಪುಟಗಳ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆಗೆ ಕರೆದು ಕಿರುಕುಳ ನೀಡಿದ್ದಾರೆಂದು ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದ್ದು, ಯುವತಿ ಸಹೋದರಿಯ ದೂರಿನ ಮೇರೆಗೆ ನಗರದ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಹೊಸ ವರ್ಷಾಚರಣೆಗೆ ಸಂಗ್ರಹಿಸಿಟ್ಟಿದ್ದ 6 ಕೋಟಿ ರೂ. ಮೌಲ್ಯದ ಕ್ವಿಂಟಾಲ್ಗಟ್ಟಲೆ ಮಾದಕ ವಸ್ತು ಜಪ್ತಿ
ಭೋವಿ ನಿಗಮದ ಖಾತೆಯಿಂದ ಕೋಟ್ಯಂತರ ರೂ ಹಣ ವರ್ಗಾವಣೆ ಆಗಿದೆ. ಇದೇ ವಿಚಾರವಾಗಿ ನಿನ್ನೆಯಷ್ಟೇ ಸಿಐಡಿ ತನಿಖಾಧಿಕಾರಿ ವಿಚಾರಣೆಗೆ ಕರೆದಿದ್ದರು. ಸಿಐಡಿ ತನಿಖಾಧಿಕಾರಿ ಕನಕಲಕ್ಷ್ಮೀ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಮೃತ ಜೀವಾ ಭೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ಸ್ ಪೂರೈಸುತ್ತಿದ್ದರು.
ಇಬ್ಬರು ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆಗೆ ಯತ್ನ
ಬೆಂಗಳೂರಿನ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಾಯಿಯೂ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಹಗ್ಗದಿಂದ ಕುತ್ತಿಗೆಗೆ ಬಿಗಿದು ಶಂಭು(7), ಶಿಯಾ(3) ಮಕ್ಕಳನ್ನು ಕೊಲೆ ಮಾಡಿ, ಮಮತಾ ಸಾಹು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಮತಾ ಸಾಹು ಮತ್ತು ಆಕೆಯ ಪತಿ ಸುನೀಲ್ ಸಾಹು ಜಾರ್ಖಂಡ್ ಮೂಲದವರು. 5 ತಿಂಗಳಿಂದ ಸುಬ್ರಮಣ್ಯಪುರ ವ್ಯಾಪ್ತಿಯಲ್ಲಿ ವಾಸವಿದ್ದರು. ಪತಿ ಜೊತೆ ಗಲಾಟೆಯಾಗಿ ಊರಿಗೆ ಹೋಗಲು ಸಿದ್ಧಳಾಗಿದ್ದಳು. ನಿನ್ನೆ ಪತಿ ಆಟೋ ಡ್ಯೂಟಿಗೆ ಹೋದಾಗ ಇಬ್ಬರು ಮಕ್ಕಳ ಹತ್ಯೆ ಮಾಡಿದ್ದು, ಬಳಿಕ ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದರು.
ಇದನ್ನೂ ಓದಿ: ವೃದ್ಧ ದಂಪತಿಯ ಮೇಲೆ ಕುಡಗೋಲು, ಬಂದೂಕು ಹಿಡಿದು ಹಲ್ಲೆಗೆ ಯತ್ನಿಸಿದ ಸಾಕು ಮಗ
ಬಳಿಕ ಪತಿಗೆ ಮಮತಾ ಸಾಹು ಸೆಲ್ಫಿ ಫೋಟೋ ಕಳುಹಿಸಿದ್ದರು. ಫೋಟೋ ನೋಡಿದ ತಕ್ಷಣ ಆಟೋದಲ್ಲಿ ಮನೆಗೆ ಬಂದಿದ್ದ ಪತಿ, ಸ್ಥಳದಲ್ಲೇ ಇಬ್ಬರು ಮಕ್ಕಳು ಸಾವಾಗಿದ್ದು, ಪತ್ನಿಯ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಪತ್ನಿ ಮಮತಾ ಸಾಹುಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.