AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ಹೇರ್​ ಡ್ರೈಯರ್​​ ಸ್ಫೋಟಕ್ಕೆ ಬಿಗ್​ ಟ್ವಿಸ್ಟ್​: ಪ್ರಕರಣದ ಹಿಂದಿದೆ ಪ್ರೇಮ ಪುರಾಣ

ಬಾಗಲಕೋಟೆ ಜಿಲ್ಲೆಯ ಇಳಕಲ್ ಟೌನ್​ನಲ್ಲಿ ನಡೆದಿದ್ದ ಹೇರ್​ ಡ್ರೈಯರ್​​ ಸ್ಫೋಟ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಘಟನೆ ನಡೆದು ಎರಡೇ ದಿನದಲ್ಲಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಪ್ರೀತಿಗೆ ಅಡ್ಡ ಬಂದವಳ ಕೊಲೆಗೆ ಆರೋಪಿ ಸ್ಕೆಚ್ ಹಾಕಿರುವುದು ಪೊಲೀಸ್​ ವಿಚಾರಣೆಯಲ್ಲಿ ತಿಳಿದುಬಂದಿದೆ. ​

ಬಾಗಲಕೋಟೆ ಹೇರ್​ ಡ್ರೈಯರ್​​ ಸ್ಫೋಟಕ್ಕೆ ಬಿಗ್​ ಟ್ವಿಸ್ಟ್​: ಪ್ರಕರಣದ ಹಿಂದಿದೆ ಪ್ರೇಮ ಪುರಾಣ
ಬಾಗಲಕೋಟೆ ಹೇರ್​ ಡ್ರೈಯರ್​​ ಸ್ಫೋಟಕ್ಕೆ ಬಿಗ್​ ಟ್ವಿಸ್ಟ್​: ಪ್ರಕರಣದ ಹಿಂದಿದೆ ಪ್ರೇಮ ಪುರಾಣ
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Nov 22, 2024 | 6:44 PM

Share

ಬಾಗಲಕೋಟೆ, ನವೆಂಬರ್​ 22: ಹೇರ್​ ಡ್ರೈಯರ್ (hair dryer) ಸ್ಫೋಟವಾಗಿ ಮೃತ ಯೋಧನ ಪತ್ನಿ ಕೈ ಕಳೆದುಕೊಂಡಿದ್ದಾಳೆ. ಈ ಸ್ಫೋಟದ ಭೀಕರತೆ ಕಂಡು ಎಲ್ಲರೂ ಶಾಕ್ ಆಗಿದ್ದರು. ಸ್ಫೋಟದ ಹಿಂದೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ಟಿವಿ9 ಎಕ್ಸ್ಲೂಸಿವ್ ವರದಿ ಮಾಡಿತ್ತು. ಇದೀಗ ಪ್ರಕರಣ ಗಂಭೀರವಾಗಿ ಪರಿಗಣಿಸಿ ನಡೆದ ತನಿಖೆಯಲ್ಲಿ ಸ್ಫೋಟದ ಹಿಂದೆ ಲವ್ ಸ್ಟೋರಿ ಮತ್ತು ಕೊಲೆಗೆ ಸ್ಕೆಚ್ ಇರುವುದು ಬಹಿರಂಗವಾಗಿದೆ.

ಬ್ಲಾಸ್ಟ್ ಹಿಂದೊಂದು ಲವ್ ಸ್ಟೋರಿ

ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನವೆಂಬರ್ 15 ರಂದು ಹೇರ್​ ಡ್ರೈಯರ್​​ ಬ್ಲಾಸ್ಟ್ ಆಗಿ, ಮೃತ ಯೋಧನ ಪತ್ನಿ  ಬಸವರಾಜೇಶ್ವರಿ ಯರನಾಳ (35) ಎರಡು ಮುಂಗೈ ಕಟ್ ಆಗಿದ್ದವು. ಕೇವಲ ಹೇರ್ ಡ್ರೈಯರ್ ಬ್ಲಾಸ್ಟ್​ನಿಂದ ಇಷ್ಟೊಂದು ಭೀಕರ ಸ್ಫೋಟ ಹೇಗೆ ಎಂದು ಅಚ್ಚರಿಯಾಗಿತ್ತು. ಜೊತೆಗೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು‌. ತನಿಖೆಯ ಗಂಭೀರತೆ ಅರಿತ ಇಳಕಲ್ ನಗರ ಠಾಣೆ ಪೊಲೀಸರು ಎರಡೇ ದಿನದಲ್ಲಿ ಪ್ರಕರಣ ಭೇದಿಸಿದ್ದಾರೆ. ಆ ಮೂಲಕ ಬ್ಲಾಸ್ಟ್ ಹಿಂದೆ ಲವ್ ಸ್ಟೋರಿ ಇರುವುದು ಬಹಿರಂಗವಾಗಿದೆ.

ಪ್ರೀತಿಗೆ ಅಡ್ಡ ಬಂದವಳ ಕೊಲೆಗೆ ಸ್ಕೆಚ್ ಹಾಕಿದ್ದ ವ್ಯಕ್ತಿ

ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಶೀಲವಂತರ ಮಧ್ಯೆ ಪ್ರೀತಿ ಇತ್ತು‌. ಇದಕ್ಕೆ ಬಸವರಾಜೇಶ್ವರಿ ಸ್ನೇಹಿತೆ ಶಶಿಕಲಾ ಅಡ್ಡಿಯಾಗಿದ್ದಳು‌. ಇದು ಸರಿಯಲ್ಲ ಎಂದು ಹೇಳಿದ್ದಳು. ನಂತರ ಬಸವರಾಜೇಶ್ವರಿ ಸಿದ್ದಪ್ಪ ಜೊತೆ ಮಾತಾಡೋದನ್ನು ಬಿಟ್ಟಿದ್ದಳು. ಇದಕ್ಕೆಲ್ಲ ಕಾರಣ ಶಶಿಕಲಾ, ಆಕೆಯನ್ನೇ ಮುಗಿಸೋಣ ಎಂದ ಸಿದ್ದಪ್ಪ ಗ್ರಾನೈಟ್ ಡೆಟೊನೇಟರ್ ಡ್ರೈಯರ್​ನಲ್ಲಿ ಅಳವಡಿಸಿ ಶಶಿಕಲಾ ಅವರಿಗೆ ಕೊರಿಯರ್ ಮಾಡಿದ್ದ. ಆದರೆ ಅದನ್ನು ರಿಸೀವ್ ಮಾಡಿದ ಪ್ರೇಯಸಿ ಬಸವರಾಜೇಶ್ವರಿ ಕೈ ಕಳೆದುಕೊಳ್ಳುವಂತಾಗಿದೆ‌.

ಇದನ್ನೂ ಓದಿ: ಬಾಗಲಕೋಟೆ: ಹೇರ್​ ಡ್ರೈಯರ್ ​​ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರ

ಸಿದ್ದಪ್ಪ ಎಮ್​ಎಬಿಎಡ್ ಓದಿದ್ದು, ಬಸವರಾಜೇಶ್ವರಿ ಹಾಗೂ ಸಿದ್ದಪ್ಪ ಮದುವೆಗೂ ಮುನ್ನವೇ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಬಸವರಾಜೇಶ್ವರಿ ಅವರನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ರಕ್ಕಸಗಿ ಗ್ರಾಮದ ಯೋಧ ಪಾಪಣ್ಣನಿಗೆ ಮದುವೆ ಮಾಡಿ ಕೊಡಲಾಗಿತ್ತು. ಪಾಪಣ್ಣ 2017 ರಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ನಂತರ ಇವರಿಬ್ಬರ ಲವ್ ಮತ್ತಷ್ಟು ಗಟ್ಟಿಯಾಗಿತ್ತು.

ಬಸವರಾಜೇಶ್ವರಿ ರಕ್ಕಸಗಿ ಬಿಟ್ಟು ಇಳಕಲ್ ನಗರದ ಬಸವನಗರದಲ್ಲಿ ಇಬ್ಬರು ಹೆಣ್ಣು ‌ಮಕ್ಕಳ‌ ಜೊತೆ ನೆಲೆಸಿದ್ದಳು. ಸಿದ್ದಪ್ಪ ಅಲ್ಲಿಗೆ ಬರುವುದು ಹೋಗೋದು ಮಾಡುತ್ತಿದ್ದ. ಶಶಿಕಲಾ ಕೂಡ ಮೃತ ಯೋಧನ ಪತ್ನಿಯಾಗಿದ್ದಳು. ಇದು ಸರಿಯಲ್ಲ ಆತನ ಸಹವಾಸ ಬಿಡು ಎಂದು ಹೇಳ್ತಿದ್ದಳು. ಈ ಹಿನ್ನೆಲೆ ಕೆಲ ದಿನಗಳಿಂದ ಬಸವರಾಜೇಶ್ವರಿ ಸಿದ್ದಪ್ಪನನ್ನು ಮನೆಗೆ ಬರಲು ಅವಕಾಶ ನೀಡಿರಲಿಲ್ಲ. ಇದರಿಂದ ಹದಿನೈದು ದಿನದಿಂದ ಶಶಿಕಲಾ ಕೊಲೆಗೆ ಸಿದ್ದಪ್ಪ ಸ್ಕೆಚ್ ಹಾಕಿದ್ದ. ಸಿದ್ದಪ್ಪ ಡಾಲ್ಫಿನ್ ಎಂಬ ಹೆಸರಿನ ಗ್ರಾನೈಟ್ ಕಂಪನಿಯಲ್ಲಿ 16 ವರ್ಷದಿಂದ ಕೆಲಸ ಮಾಡುತ್ತಿದ್ದ. ಆತನಿಗೆ ಡೆಟೊನೇಟರ್ ಸ್ಪೋಟದ ಬಗ್ಗೆ ಮಾಹಿತಿಯಿತ್ತು.

ಸಿದ್ದಪ್ಪ, ಡೆಟೊನೇಟರ್ ಸ್ಪೋಟಕ ಬಳಸಿ ಶಶಿಕಲಾ ಕೊಲೆಗೆ ಸ್ಕೆಚ್ ಹಾಕಿದ್ದ. ಇಳಕಲ್ ನಗರದ ದೇವಗಿರಿಕರ್ ಎಂಬುವರ ಅಂಗಡಿಯಲ್ಲಿ ನವೆಂಬರ್ 10 ರಂದು 500 ರೂ. ಕೊಟ್ಟು ಹೇರ್ ಡ್ರೈಯರ್ ಖರೀದಸಿದ್ದ. ಅದರಲ್ಲಿ ಡೆಟೊನೇಟರ್ ಅಳವಡಿಸಿ ನ. 13 ರಂದು ಕೊರಿಯರ್ ಮಾಡಿದ್ದ. ಬಾಗಲಕೋಟೆ ಡಿಟಿಡಿಸಿ ಕೊರಿಯರ್​ನಿಂದ ಇಳಕಲ್ ಡಿಟಿಡಿಸಿ ಕೊರಿಯರ್​ಗೆ ಶಶಿಕಲಾ ಹಾಗೂ ಆಕೆಯ ನಂಬರ್​ ಹಾಕಿ ಕಳಿಸಿದ್ದ. ಕವರ್ ಮೇಲೆ ವಿಶಾಖಪಟ್ಟಣ ಎಂದು ತಾನೆ ಬರೆದಿದ್ದ‌. ಹೇರ್ ಡ್ರೈಯರ್ ಶಶಿಕಲಾ ಪಡೆಯುತ್ತಾಳೆ. ಅದನ್ನು ಆಕೆ ಬಳಸೋದಕ್ಕೆ ಆನ್ ಮಾಡ್ತಾಳೆ. ಆಗ ಬ್ಲಾಸ್ಟ್ ಆಗೋದು ಪಕ್ಕಾ ಎಂದು ಲೆಕ್ಕಾಚಾರ ಸಿದ್ದಪ್ಪನದ್ದಾಗಿತ್ತು‌.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ: ಐಸಿಸ್ ತರಬೇತಿಯ ವಿವರ ಬಹಿರಂಗ

ಆದರೆ ಶಶಿಕಲಾ ತಾನು ಹೋಗುವ ಬದಲಾಗಿ ಬಸವರಾಜೇಶ್ವರಿ ಕಳಿಸಿದ್ದಾಳೆ. ಅದೃಷ್ಟವಶಾತ್ ಶಶಿಕಲಾ ಪಾರಾಗಿದ್ದಾಳೆ. ಸಿದ್ದಪ್ಪ ಮಾಡಿದ ಪ್ಲ್ಯಾನ್ ಆತನಿಗೆ ಉಲ್ಟಾ ಹೊಡೆದಿದೆ. ಇದೀಗ ಇಳಕಲ್ ನಗರ ಪೊಲೀಸರ ತನಿಖೆ, ಸಿಡಿಆರ್ ಮೂಲಕ‌ ಮಾಹಿತಿ ಸಂಗ್ರಹಿಸಿ ಪೊಲೀಸರು ಎಲ್ಲ ಬಯಲಿಗೆ ಎಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆ ಡಿಟಿಡಿಸಿ ಕೊರಿಯರ್ ಸಿಬ್ಬಂದಿ ಇಳಕಲ್ ಸಿಬ್ಬಂದಿ‌ ಮೇಲೂ ಕ್ರಮ ಕೈಗೊಳ್ಳೋದಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ಪ್ರೀತಿಗೆ ಅಡ್ಡಿಯಾದವಳಿಗೆ ಹಾಕಿದ ಸ್ಕೆಚ್ ಪ್ರಿಯತಮೆಗೆ ಮುಳುವಾಗಿದೆ. ಪ್ರಿಯತಮೆ ಕೈ ಕಳೆದುಕೊಂಡರೆ ಪ್ರಿಯಕರ ಅಂದರ್ ಆಗಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:44 pm, Fri, 22 November 24

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ