ಬಾಗಲಕೋಟೆ: ಹೇರ್​ ಡ್ರೈಯರ್ ​​ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರ

ಇಳಕಲ್‌ನಲ್ಲಿ ಹೇರ್ ಡ್ರೈಯರ್ ಸ್ಫೋಟಗೊಂಡು ಮಹಿಳೆಯ ಎರಡೂ ಹಸ್ತಗಳು ಛಿದ್ರಗೊಂಡಿವೆ. ಶಶಿಕಲಾ ಎಂಬುವವರ ಹೆಸರಿನಲ್ಲಿ ಬಂದ ಪಾರ್ಸಲ್ ಅನ್ನು ಬಸಮ್ಮ ಎಂಬ ಮಹಿಳೆ ತೆಗೆದುಕೊಂಡಿದ್ದರು. ಪಾರ್ಸಲ್ ತೆರೆದು ಹೇರ್​ ಡ್ರೈಯರ್ ಆನ್​ ಮಾಡಿದಾಗ ಸ್ಫೋಟಗೊಂಡಿದೆ. ಈ ಘಟನೆಯು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬಾಗಲಕೋಟೆ: ಹೇರ್​ ಡ್ರೈಯರ್ ​​ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರ
ಗಾಯಗೊಂಡ ಬಸಮ್ಮ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ

Updated on:Nov 20, 2024 | 1:27 PM

ಬಾಗಲಕೋಟೆ, ನವೆಂಬರ್​ 20: ಹೇರ್​ ಡ್ರೈಯರ್ (Hair dryer)​​ ಸ್ಫೋಟಗೊಂಡು ಮೃತ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರಗೊಂಡಿವೆ. ಇಳಕಲ್ (Ilkal) ನಗರದಲ್ಲಿ ಘಟನೆ ನಡೆದಿದೆ. ಮೃತ ಯೋಧ ಪಾಪಣ್ಣ ಅವರ ಪತ್ನಿ ಬಸಮ್ಮ ಯರನಾಳ ಗಾಯಗೊಂಡವರು. ಶಶಿಕಲಾ ಎಂಬುವರ ಮನೆಗೆ ಹೇರ್​ ಡ್ರೈಯರ್ ಕೊರಿಯರ್ ಮೂಲಕ ​ಬಂದಿತ್ತು. ಪಾರ್ಸಲ್​​ ಮೇಲೆ ಶಶಿಕಲಾ ಅವರ ಮೊಬೈಲ್​ ನಂಬರ್​ ಇದ್ದ ಹಿನ್ನೆಲೆಯಲ್ಲಿ ಡಿಟಿಡಿಸಿ ಕೊರಿಯರ್​ ಸಿಬ್ಬಂದಿ ಶಶಿಕಲಾ ಅವರಿಗೆ ಕರೆ ಮಾಡಿ, “ನಿಮ್ಮ ಹೆಸರಿಗೆ ​ಪಾರ್ಸಲ್​ ಬಂದಿದೆ. ಕಲೆಕ್ಟ್​ ಮಾಡಿ” ಎಂದಿದ್ದಾನೆ. ಈ ವೇಳೆ ಶಶಿಕಲಾ “ನಾನು ಬೇರೆ ಊರಿನಲ್ಲಿದ್ದೇನೆ” ಎಂದು ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಕೋರಿಯರ್​ ಸಿಬ್ಬಂದಿ, ಪದೇ ಪದೇ ಕರೆ ಮಾಡಿದ್ದಾನೆ. ಕೋರಿಯರ್​ ಸಿಬ್ಬಂದಿ ಕಾಟಕ್ಕೆ ಬೇಸತ್ತ  ಶಶಿಕಲಾ ಅವರು ತಮ್ಮ ಸ್ನೇಹಿತೆ ಬಸಮ್ಮಾ ಅವರಿಗೆ ಕರೆ ಮಾಡಿ “ಯಾವುದೋ ಪಾರ್ಸಲ್ ಬಂದಿದೆ ತೆಗೆದುಕೊ” ಎಂದು ಹೇಳಿದ್ದಾರೆ.​ ಆಗ, ಬಸಮ್ಮಾ ಅವರು ಕೊರಿಯರ್ ಸಿಬ್ಬಂದಿ ಬಳಿ ಪಾರ್ಸಲ್​ ಪಡೆದಿದ್ದಾರೆ. ಪಾರ್ಸಲ್​ ತೆರದು ನೋಡಿದಾಗ ಒಳಗಡೆ ಹೇರ್ ಡ್ರೈಯರ್ ಇತ್ತು. ಇದೇ ವೇಳೆ ಅಲ್ಲೇ ಇದ್ದ ಪಕ್ಕದ ಮನೆಯವರು ಆನ್​ ಮಾಡಿ ತೋರಿಸಿ ಎಂದಿದ್ದಾರೆ. ಬಸಮ್ಮಾ ಅವರು ಹೇರ್​ ಡ್ರೈಯರ್ ಸ್ವಿಚ್​​ ಹಾಕಿ ಆನ್​ ಮಾಡಿದಾಗ ಸ್ಫೋಟಗೊಂಡಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟ: ಐಸಿಸ್ ತರಬೇತಿಯ ವಿವರ ಬಹಿರಂಗ

ಹೇರ್​ ಡ್ರೈಯರ್ ಸ್ಫೋಟದಿಂದ ಬಸಮ್ಮ ಅವರ ಹಸ್ತಗಳು ಛಿದ್ರಗೊಂಡಿದೆ. ಬೆರಳುಗಳು ತುಂಡಾಗಿ ಬಿದ್ದಿವೆ. ಮನೆಯಲ್ಲ ರಕ್ತಮಯವಾಗಿದೆ. ಕೂಡಲೇ ಬಸಮ್ಮ ಅವರನ್ನು ಇಳಕಲ್​ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲವು ಅನುಮಾನಗಳಿಗೆ ಕಾರಣವಾದ ಸ್ಫೋಟ

ಶಶಿಕಲಾ ಅವರು ಹೇಳುವ ಪ್ರಕಾರ, ಹೇರ್ ಡ್ರೈಯರ್ ಆರ್ಡರ್ ಮಾಡಿಲ್ಲವಂತೆ. ಆದರೆ, ಅವರ ಹೆಸರಲ್ಲಿ ಹೇರ್ ಡ್ರೈಯರ್ ಪಾರ್ಸಲ್ ಹೇಗೆ ಬಂತು? ಹಣ ನೀಡಿದ್ದು ಯಾರು ಎಂಬ ಪ್ರಶ್ನೆ ಉದ್ಭವಾಗಿದೆ. ಇನ್ನು, ಹೇರ್ ಡ್ರೈಯರ್ ಆಂಧ್ರದ ವಿಶಾಖಪಟ್ಟಣದಲ್ಲಿ ತಯಾರಾಗಿದೆ ಎಂಬ ಅಂಶ ತಿಳುದುಬಂದಿದೆ. ಹೀಗಾಗಿ, ಈ ಸ್ಫೋಟ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಬಸಮ್ಮ ದಾಖಲಾಗಿರುವ ಇಳಕಲ್ ಖಾಸಗಿ ಆಸ್ಪತ್ರೆಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ಆರೋಗ್ಯ ವಿಚಾರಿಸಿದರು. ಬಸಮ್ಮ ಪತಿ ಪಾಪಣ್ಣ 2017ರಲ್ಲಿ ಜಮ್ಮು ಕಾಶ್ಮೀರದಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಮೃತಪಟ್ಟಿದ್ದರು.

ಈ ಬಗ್ಗೆ ಗಾಯಾಳು ಬಸಮ್ಮ ಟಿವಿ9 ಜೊತೆ ಮಾತನಾಡಿ, “ಗೆಳತಿ ಶಶಿಕಲಾ ಹೆಸರಿನಲ್ಲಿ ಹೇರ್​ ಡ್ರೈಯರ್ ಕೋರಿಯರ್​ ಬಂದಿತ್ತು. ನನಗೆ ಊರಿಂದ ಬರಲು ಆಗಲ್ಲ, ನೀನೇ ತೆಗೆದುಕೊಂಡು ಇಟ್ಟುಕೊಳ್ಳಲು ಹೇಳಿದ್ದಳು. ಹೀಗಾಗಿ ತೆಗೆದುಕೊಂಡಿದ್ದೆ. ಆನ್​ ಮಾಡಲು ಹೇರ್​ ಡ್ರೈಯರ್​ ಸ್ವಿಚ್​ ಹಾಕಿ ಬಟನ್​ ಆನ್​ ಮಾಡಿದಾಗ ಸ್ಫೋಟಗೊಂಡಿದೆ. ಇದರಿಂದ ನನ್ನ ಎರಡೂ ಕೈಗಳು ಹೋಗಿವೆ. ಹೇರ್​ ಡ್ರೈಯರ್​ ಮೇಲೆ ಆಂಧ್ರದ ವಿಶಾಖಪಟ್ಟಣ ಹೆಸರಿದೆ. ಯಾವ ಕೋರಿಯರ್​ನಿಂದ ಹೇರ್​ ಡ್ರೈಯರ್ ಬಂದಿದೆ ಗೊತ್ತಿಲ್ಲ. ನನ್ನ ಗೆಳತಿ ಶಶಿಕಲಾ ಕೂಡ ಆರ್ಡರ್​ ಮಾಡಿರಲಿಲ್ಲ” ಎಂದು ಹೇಳಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:23 pm, Wed, 20 November 24

ಮಹಿಳಾ ಪ್ರಯಾಣಿಕರಿಂದ ತುಂಬಿದ ಬಸ್: ಮೂಡಿಗೆರೆಯಲ್ಲಿ ವಿದ್ಯಾರ್ಥಿಗಳ ಪರದಾಟ
ಮಹಿಳಾ ಪ್ರಯಾಣಿಕರಿಂದ ತುಂಬಿದ ಬಸ್: ಮೂಡಿಗೆರೆಯಲ್ಲಿ ವಿದ್ಯಾರ್ಥಿಗಳ ಪರದಾಟ
ಚಿಕ್ಕಂದಿನಲ್ಲಿ ಅಪ್ಪನ ಕಳೆದುಕೊಂಡಿದ್ದ ವಿಕ್ರಂಗೌಡ ತಂಗಿಯ ಮದುವೆ ಮಾಡಿಸಿದ್ದ
ಚಿಕ್ಕಂದಿನಲ್ಲಿ ಅಪ್ಪನ ಕಳೆದುಕೊಂಡಿದ್ದ ವಿಕ್ರಂಗೌಡ ತಂಗಿಯ ಮದುವೆ ಮಾಡಿಸಿದ್ದ
ಶೋರೂಮಲ್ಲಿದ್ದ ಬ್ಯಾಟರಿಗಳು ಸ್ಪೋಟಗೊಂಡ ಕಾರಣ ಹೆಚ್ಚಿದ ಬೆಂಕಿ ಪ್ರಮಾಣ
ಶೋರೂಮಲ್ಲಿದ್ದ ಬ್ಯಾಟರಿಗಳು ಸ್ಪೋಟಗೊಂಡ ಕಾರಣ ಹೆಚ್ಚಿದ ಬೆಂಕಿ ಪ್ರಮಾಣ
ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿ ಘರ್ಜನೆ: ಶಿವ, ಗಣೇಶನ ಗುಡಿ ತೆರವು
ರಾಯಚೂರಿನಲ್ಲಿ ಮಧ್ಯರಾತ್ರಿ ಜೆಸಿಬಿ ಘರ್ಜನೆ: ಶಿವ, ಗಣೇಶನ ಗುಡಿ ತೆರವು
ಪ್ರಧಾನಿ ಮೋದಿಯನ್ನು ಅಪ್ಪುಗೆಯಿಂದ ಬರಮಾಡಿಕೊಂಡ ಇರ್ಫಾನ್ ಅಲಿ
ಪ್ರಧಾನಿ ಮೋದಿಯನ್ನು ಅಪ್ಪುಗೆಯಿಂದ ಬರಮಾಡಿಕೊಂಡ ಇರ್ಫಾನ್ ಅಲಿ
ವೈಲ್ಡ್ ಕಾರ್ಡ್ ಸ್ಪರ್ಧಿಯಿಂದ ಸುರೇಶ್​ಗೆ ಅವಮಾನ; ಮನೆ ಬಿಟ್ಟು ಹೋಗ್ತಾರಾ?
ವೈಲ್ಡ್ ಕಾರ್ಡ್ ಸ್ಪರ್ಧಿಯಿಂದ ಸುರೇಶ್​ಗೆ ಅವಮಾನ; ಮನೆ ಬಿಟ್ಟು ಹೋಗ್ತಾರಾ?
ಸರ್ಫರಾಝ್ ಹಿಡಿದ ಕ್ಯಾಚ್ ನೋಡಿ ಬಿದ್ದು ಬಿದ್ದು ನಕ್ಕಿದ ವಿರಾಟ್ ಕೊಹ್ಲಿ
ಸರ್ಫರಾಝ್ ಹಿಡಿದ ಕ್ಯಾಚ್ ನೋಡಿ ಬಿದ್ದು ಬಿದ್ದು ನಕ್ಕಿದ ವಿರಾಟ್ ಕೊಹ್ಲಿ
ಅರಳಿ ಮರದ ಎಲೆ ದೀಪದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯ ತಿಳಿಯಿರಿ
ಅರಳಿ ಮರದ ಎಲೆ ದೀಪದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಐದು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಐದು ಗ್ರಹಗಳ ಶುಭ ಫಲವಿದೆ
ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು
ನಿಲ್ಲಿಸಿದ್ದ ಸ್ಕೂಟಿಯಿಂದ ಬುಸ್​ಗುಟ್ಟುತ್ತಾ ಹೊರಬಂದ ವಿಷಕಾರಿ ಹಾವು