ನ್ಯೂಸ್9 ಗ್ಲೋಬಲ್ ಸಮಿಟ್ನಲ್ಲಿ ಕರ್ನಾಟಕ-ಜರ್ಮನಿ ನಂಟಿನ ಬಗ್ಗೆ ಸಿದ್ದರಾಮಯ್ಯ ಮಾತು
ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆಯುತ್ತಿರುವ ನ್ಯೂಸ್9 ಗ್ಲೋಬಲ್ ಸಮ್ಮಿಟ್ನ 2ನೇ ದಿನವಾದ ಇಂದು (ನವೆಂಬರ್ 22) ಸಿಎಂ ಸಿದ್ದರಾಮಯ್ಯ ಅವರು ವರ್ಚುವಲ್ ಮೂಲಕ ಭಾಗವಹಿಸಿದ್ದು, ಕರ್ನಾಟಕ ಮತ್ತು ಜರ್ಮನಿ ನಡುವೆ ಸಂಬಂಧವನ್ನು ಮೆಲುಕು ಹಾಕಿದರು.
ಬೆಂಗಳೂರು, (ನವೆಂಬರ್ 22): ಜರ್ಮನಿಯ ಸ್ಟುಟ್ಗಾರ್ಟ್ನಲ್ಲಿ ನಡೆಯುತ್ತಿರುವ ನ್ಯೂಸ್9 ಗ್ಲೋಬಲ್ ಸಮಿಟ್ನ 2ನೇ ದಿನದಂದು ಸಿಎಂ ಸಿದ್ದರಾಮಯ್ಯ ಭಾಗವಹಿಸಿದರು. ಈ ವೇಳೆ ಅವರು ಕರ್ನಾಟಕ ಮತ್ತು ಜಮರ್ನಿ ನಡುವಿನ ಸಂಬಂಧವನ್ನು ಮೆಲುಕು ಹಾಕಿದರು. ಕರ್ನಾಟಕ, ಜರ್ಮನಿ ಮಧ್ಯೆ ವ್ಯಾಪಾರ, ಹೂಡಿಕೆ ಸಂಬಂಧವಿದೆ. ಜರ್ಮನಿಯ 1600ಕ್ಕೂ ಹೆಚ್ಚು ಕಂಪನಿಗಳು ಭಾರತದಲ್ಲಿವೆ. 3 ಲಕ್ಷ ಜನರಿಗೆ ಜರ್ಮನಿ ಕಂಪನಿಗಳಿಂದ ಉದ್ಯೋಗ ಸಿಕ್ಕಿದೆ. ಭಾರತದಲ್ಲಿ 600ಕ್ಕೂ ಹೆಚ್ಚು ಜರ್ಮಿನಿ ಜಾಯಿಂಟ್ ವೆಂಚರ್ಗಳಿವೆ. ಭಾರತದ ಮಾರ್ಕೆಟ್ನಲ್ಲಿ ಜರ್ಮಿನಿ ಜಾಯಿಂಟ್ ವೆಂಚರ್ ಪ್ರತಿನಿಧಿಸುತ್ತಿವೆ. ಕರ್ನಾಟಕದಲ್ಲೂ 200 ಜರ್ಮನಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಬಾಷ್, ಸೀಮೆನ್ಸ್, ಕಾರ್ಲ್ ಜೀಸ್ ಹೀಗೆ ಹಲವು ಕಂಪನಿಗಳಿವೆ. ಜರ್ಮನಿಯ ರಾಜ್ಯ ಬವೇರಿಯಾ ಕರ್ನಾಟಕಕ್ಕೆ ಸಹೋದರಿ ರಾಜ್ಯ. ಇದನ್ನ ಹೇಳಲು ನನಗೆ ಸಂತಸವಾಗುತ್ತೆ ಎಂದರು. ಇದೇ ವೇಳೆ ನ್ಯೂಸ್ 9 ಗ್ಲೋಬಲ್ ಸಮಿಟ್ ’ ಶ್ಲಾಘಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾಗತಿಕ ನಾಯಕರ ಗ್ಲೋಬಲ್ ಭಾರತ, ಗ್ಲೋಬಲ್ ಸಮಿಟ್ ಆಯೋಜಿಸಿದ್ದಕ್ಕೆ ನ್ಯೂಸ್ 9 ಮತ್ತು ಟಿವಿ9 ನೆಟ್ ವರ್ಕ್ ಗೆ ಹೃದಯ ಪೂರ್ವಕವಾಗಿ ಶ್ಲಾಘಿಸುತ್ತೇನೆ. ನ್ಯೂಸ್ 9 ಗ್ಲೋಬಲ್ ಸಮಿಟ್ ಭಾರತದ ಜಾಗತಿಕ ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಸಹಯೋಗ, ಸಂಶೋಧನೆ, ಸ್ಫೂರ್ತಿದಾಯಕ ಪರಿಹಾರಗಳು ಸೇರಿದಂತೆ ಭಾರತದ ಅಭಿವೃದ್ಧಿಗೆ ನ್ಯೂಸ್ 9 ಗ್ಲೋಬಲ್ ಸಮಿಟ್ ನಂತಹ ವೇದಿಕೆಗಳು ಸಹಕಾರಿ. ಫಲಕಾರಿ ಚರ್ಚೆಗಳು ಈ ಮಹತ್ವದ ಭೇಟಿಯಲ್ಲಿ ಆಗುತ್ತೆ ಎಂಬ ಆಶಾಭಾವವಿದೆ ಎಂದು ನ್ಯೂಸ್ 9 ಗ್ಲೋಬಲ್ ಸಮಿಟ್ ಅನ್ನು ಶ್ಲಾಘಿಸಿದರು.