Sign In

By signing in or creating an account, you agree with Associated Broadcasting Company's Terms & Conditions and Privacy Policy.

16 ವರ್ಷದ ಅಪ್ರಾಪ್ತ ಸೊಸೆಯನ್ನೇ ಗರ್ಭಿಣಿ ಮಾಡಿದ ಸೋದರ ಮಾವ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಠಾಣೆ ವ್ಯಾಪ್ತಿಯಲ್ಲಿ ಸೋದರ ಮಾವನಿಂದಲೇ 16 ವರ್ಷದ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿರುವಂತಹ ಘಟನೆಯೊಂದು ನಡೆದಿದೆ. ಸದ್ಯ ಬಾಲಕಿ ತಾಯಿ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಸೋದರ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.

16 ವರ್ಷದ ಅಪ್ರಾಪ್ತ ಸೊಸೆಯನ್ನೇ ಗರ್ಭಿಣಿ ಮಾಡಿದ ಸೋದರ ಮಾವ
16 ವರ್ಷದ ಅಪ್ರಾಪ್ತ ಸೊಸೆಯನ್ನೇ ಗರ್ಭಿಣಿ ಮಾಡಿದ ಸೋದರ ಮಾವ
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 22, 2024 | 10:46 PM

ನೆಲಮಂಗಲ, ನವೆಂಬರ್​ 22: ಸೋದರ ಮಾವನಿಂದಲೇ 16 ವರ್ಷದ ಅಪ್ರಾಪ್ತ ಬಾಲಕಿ (girl) ಗರ್ಭಿಣಿಯಾಗಿರುವಂತಹ ಘಟನೆ ನೆಲಮಂಗಲ ಟೌನ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ನೆಲಮಂಗಲ ಪೊಲೀಸರಿಂದ 30 ವರ್ಷದ ಸೋದರ ಮಾವನನ್ನು ಬಂಧಿಸಲಾಗಿದೆ. ಬಾಲಕಿ ತಾಯಿ ದೂರಿನ ಆಧಾರದ ಮೇಲೆ ನೆಲಮಂಗಲ ಟೌನ್ ಠಾಣೆಯಲ್ಲಿ ಬಿಎನ್​ಎಸ್ ಜೊತೆಗೆ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ.

ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಯುವತಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಸಮಯಕ್ಕೆ ಸರಿಯಾಗಿ ಮುಟ್ಟು ಆಗುತ್ತಿರಲಿಲ್ಲ. ಹೀಗಾಗಿ ಮಗಳನ್ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ಬಾಲಕಿಯನ್ನ ತಪಾಸಣೆ ಮಾಡಿದ ವೈದ್ಯೆ ಡಾ.ಸೋನಿಯಾ ಅವರು ಮಗಳು ಗರ್ಭಿಣಿಯಾಗಿರುವುದು ಹೇಳಿದ್ದಾರೆ. ವಿಷಯ ತಿಳಿದ ಬಾಲಕಿಯ ತಾಯಿಗೆ ಅಘಾತವಾಗಿದೆ.

ಇದನ್ನೂ ಓದಿ: ಅಕ್ಕನ ಮೇಲೆ ತಮ್ಮನಿಂದ ದರ್ಪ: ಹೊರದಬ್ಬಿ ಮನೆಗೆ ಬೀಗ ಹಾಕಿದ ಒಡ ಹುಟ್ಟಿದಾತ

ಸೆಪ್ಟೆಂಬರ್​ನಲ್ಲಿ ಆರೋಪಿ ಸೋದರ ಮಾವ ಮನೆಗೆ ಬಂದಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಬಲವಂತವಾಗಿ ಅತ್ಯಾಚಾರವೆಸಗಿದ್ದ ಎನ್ನಲಾಗಿದೆ. ಹಾಗಾಗಿ ಬಾಲಕಿ ತಾಯಿ ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

3 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದ ವೃದ್ಧನ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ 3 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದ ವೃದ್ಧನನ್ನು ಪೊಲೀಸರು ಬಂಧಿಸಿರುವಂತಹ ಘಟನೆ ನಡೆದಿದೆ. ಅಬ್ದುಲ್ಲಾ(70) ಬಂಧಿತ ವೃದ್ಧ. ಕೊಣಾಜೆ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಹಿಳೆಯನ್ನು ಬಲಿ ಪಡೆದ ಚಿರತೆ ಹಿಡಿಯುವವರೆಗೂ ಇಲ್ಲಿಂದ ಕದಲುವುದಿಲ್ಲ:ಎಸಿಎಫ್‌ ಶಪಥ

ಅಡಕೆ ಅಂಗಡಿಯೊಂದರ ಬಳಿ‌ 3 ವರ್ಷದ ಮಗು ಆಟವಾಡುತ್ತಿತ್ತು. ಈ ವೇಳೆ ವೃದ್ಧ ಅಬ್ದುಲ್ಲಾ ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಸದ್ಯ ಮಗುವಿನ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ತಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ತಾಯಿಯಿಂದ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.