ಪ್ರಧಾನಿ ಮೋದಿಯಿಂದ ಸಂಬಂಧ, ಗೌರವ, ಜವಾಬ್ದಾರಿ ಬಗ್ಗೆ ಕಲಿತಿದ್ದೇನೆ; ನ್ಯೂಸ್9 ಶೃಂಗಸಭೆಯಲ್ಲಿ ಟಿವಿ9 ನೆಟ್‌ವರ್ಕ್ ಎಂಡಿ, ಸಿಇಒ ಬರುಣ್ ದಾಸ್
ನಾನು ಪ್ರಧಾನಿ ನರೇಂದ್ರ ಮೋದಿಯವರಿಂದ ಸಂಬಂಧ, ಗೌರವ ಮತ್ತು ಜವಾಬ್ದಾರಿಯ ಬಗ್ಗೆ ಕಲಿತಿದ್ದೇನೆ ಎಂದು ಹೇಳಿದ ನ್ಯೂಸ್ 9 ಗ್ಲೋಬಲ್ ಶೃಂಗಸಭೆಯಲ್ಲಿ ಟಿವಿ9 ನೆಟ್‌ವರ್ಕ್ ಎಂಡಿ-ಸಿಇಒ ಬರುಣ್ ದಾಸ್, ನ್ಯೂಸ್ 9 ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲು ಆಹ್ವಾನವನ್ನು ಸ್ವೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.
ನವದೆಹಲಿ: ಟಿವಿ9 ಸಿಇಒ ಮತ್ತು ಎಂಡಿ ಬರುಣ್ ದಾಸ್ ಜರ್ಮನಿಯಲ್ಲಿ ನಡೆಯುತ್ತಿರುವ ನ್ಯೂಸ್9 ಜಾಗತಿಕ ಶೃಂಗಸಭೆಯಲ್ಲಿ ಮಾತನಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಂದ ನಾನು ಮೂರು ಆರ್ಗಳನ್ನು ಕಲಿತಿದ್ದೇನೆ. ಅವುಗಳೆಂದರೆ, ಸಂಬಂಧ (ರಿಲೇಶನ್ಶಿಪ್), ಗೌರವ (ರೆಸ್ಪೆಕ್ಟ್), ಜವಾಬ್ದಾರಿ (ರೆಸ್ಪಾನ್ಸಿಬಿಲಿಟಿ) ಎಂದು ಹೇಳಿದ್ದಾರೆ. ಪ್ರಧಾನಿಯವರು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ತಮ್ಮ ಅಮೂಲ್ಯ ಸಮಯವನ್ನು ನಮಗಾಗಿ ವಿನಿಯೋಗಿಸಿರುವುದಕ್ಕೆ ಧನ್ಯವಾದಗಳು ಎಂದು ಹೇಳಿರುವ ಬರುಣ್ ದಾಸ್ ಇಂದು ಮತ್ತೊಮ್ಮೆ ಮೋದಿ ಅವರ ಭಾಷಣವು ಶಾಂತಿ ಮತ್ತು ಪ್ರಗತಿಯ ಜಾಗತಿಕ ದೃಷ್ಟಿಯನ್ನು ಉತ್ತೇಜಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜರ್ಮನಿಯ ಪ್ರಸಿದ್ಧ ಸ್ಟಟ್‌ಗಾರ್ಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಸ್ 9 ಜಾಗತಿಕ ಶೃಂಗಸಭೆಯ ಎರಡನೇ ದಿನವಾದ ಇಂದು ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ಪ್ರಧಾನಿ ಮೋದಿ ಅವರು ವಿಶ್ವದ ಶಾಂತಿ ಮತ್ತು ಅಭಿವೃದ್ಧಿಯ ಪರವಾಗಿರುವ ವ್ಯಕ್ತಿ ಎಂದು ಹೇಳಿದರು. ಪ್ರಧಾನಿ ಮೋದಿಯವರ ವ್ಯಕ್ತಿತ್ವವು ಸಂಬಂಧ, ಗೌರವ ಮತ್ತು ಜವಾಬ್ದಾರಿಗಾಗಿ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ದಿನ ನ್ಯೂಸ್ 9 ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ಇಂದು ಮಾತನಾಡಲಿದ್ದಾರೆ.
ಭಾರತ ಮತ್ತು ಜರ್ಮನಿ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಈ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸುವ ಅತಿಥಿಗಳು ವ್ಯಕ್ತಪಡಿಸಿದ ಆಲೋಚನೆಗಳು ಭವಿಷ್ಯವನ್ನು ಉತ್ತಮಗೊಳಿಸಲಿವೆ. ಇವುಗಳನ್ನು ಅಳವಡಿಸಿಕೊಂಡರೆ ನಾವು ಜಗತ್ತಿನಲ್ಲಿ ಹೊಸ ಎತ್ತರವನ್ನು ಸಾಧಿಸಬಹುದು ಎಂದು ಬರುಣ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಜರ್ಮನಿಯಲ್ಲಿ ನ್ಯೂಸ್9 ಜಾಗತಿಕ ಶೃಂಗಸಭೆಗೆ ವೇದಿಕೆ ಸಿದ್ಧ, ಪ್ರಧಾನಿ ಮೋದಿ ಸೇರಿ ಹಲವು ದಿಗ್ಗಜರು ಭಾಗಿ
ಪ್ರಧಾನಿ ಮೋದಿಯವರ ವ್ಯಕ್ತಿತ್ವದಿಂದ ನಾನು ಕಲಿತ ಪಾಠವೆಂದರೆ ಮೂರು RRR. RRR ಎಂಬುದು ಕಳೆದ ವರ್ಷ ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ಜನಪ್ರಿಯ ಸಿನಿಮಾದ ಹೆಸರಾಗಿದೆ. ಆದರೆ ನನಗೆ ಅದು ಅದಕ್ಕಿಂತ ಹೆಚ್ಚು. ಆರ್‌ಆರ್‌ಆರ್ ನನಗೆ ಒಂದು ಸೂತ್ರವಾಗಿದ್ದು ಅದು ಶಾಂತಿಯುತ ಮತ್ತು ಸಾಮರಸ್ಯದ ಭವಿಷ್ಯಕ್ಕಾಗಿ ಜಗತ್ತನ್ನು ಸಿದ್ಧಪಡಿಸುತ್ತದೆ ಎಂಬ ನಂಬಿಕೆಯಿದೆ ಎಂದಿದ್ದಾರೆ.
ಮೊದಲ ಆರ್ ಎಂದರೆ ಸಂಬಂಧ. ಜಗತ್ತಿನ ಯಾವುದೇ ದೇಶದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲು ಪ್ರಧಾನಿ ಮೋದಿ ಸಮರ್ಥರಾಗಿದ್ದಾರೆ. ಅವರ ಸೌಹಾರ್ದ ವರ್ತನೆಯನ್ನು ಜಗತ್ತೂ ಮನಗಂಡಿದೆ. ಪ್ರಧಾನಿ ಮೋದಿ ಅವರು ಮಾಸ್ಕೋದಿಂದ ಕೈವ್‌ವರೆಗೆ ಮತ್ತು ಇಸ್ರೇಲ್‌ನಿಂದ ಪ್ಯಾಲೆಸ್ತೀನ್‌ವರೆಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಜಗತ್ತು ಎದುರಿಸುತ್ತಿರುವ ಪ್ರಸ್ತುತ ಸವಾಲುಗಳ ನಡುವೆ ಮಾನವೀಯತೆ ಅತ್ಯಂತ ಮಹತ್ವದ್ದಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ ಮತ್ತು ಯಾವಾಗಲೂ ಶಾಂತಿಯ ಸಂದೇಶವನ್ನು ನೀಡಿದ್ದಾರೆ ಎಂದು ಬರುಣ್ ದಾಸ್ ಹೇಳಿದ್ದಾರೆ.
ಇದನ್ನೂ ಓದಿ: ಸೌರ ಶಕ್ತಿಯ ಜೊತೆ ಪವನ ಶಕ್ತಿಯೂ ಬೇಕು; ನ್ಯೂಸ್ 9 ಶೃಂಗಸಭೆಯಲ್ಲಿ ಅಜಯ್ ಮಾಥುರ್ ಮಾತು
ಎರಡನೇ ಆರ್ ಎಂದರೆ ಗೌರವ ಎಂದು ಬರುಣ್ ದಾಸ್ ಹೇಳಿದ್ದಾರೆ. ಪ್ರಧಾನಿ ಮೋದಿಯವರು ಯಾರೊಂದಿಗಾದರೂ ಸಂಬಂಧವನ್ನು ಬೆಸೆಯುವಾಗ ಅವರು ಗೌರವಕ್ಕೆ ವಿಶೇಷ ಪ್ರಾಮುಖ್ಯತೆ ನೀಡುತ್ತಾರೆ. ಮಾನವೀಯತೆಯ ಬಹುದೊಡ್ಡ ಶಕ್ತಿ ಸಾಂಘಿಕ ಪ್ರಯತ್ನದಲ್ಲಿಯೇ ಹೊರತು ವಿವಾದದಲ್ಲಲ್ಲ ಎಂದು ಹೇಳಿದ್ದಾರೆ. ಇದು ಯುದ್ಧದ ಸಮಯವಲ್ಲ, ಶಾಂತಿ, ಸೌಹಾರ್ದತೆ ಮತ್ತು ಪ್ರಗತಿಯ ಸಮಯ ಎಂದು ಪ್ರಧಾನಿ ಮೋದಿ ಯಾವಾಗಲೂ ಒತ್ತಿ ಹೇಳುತ್ತಿರುತ್ತಾರೆ ಎಂದು ಬರುಣ್ ದಾಸ್ ಹೇಳಿದ್ದಾರೆ.
ಮೂರನೇ ಆರ್ ಎಂದರೆ ಜವಾಬ್ದಾರಿ. ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯಲ್ಲಿ ಮಾನವೀಯತೆಯ ರಕ್ಷಣೆಯೇ ಪ್ರಧಾನ. ಅವರು ಸದಾ ಜವಾಬ್ದಾರಿಯುತವಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ, ಮಾನವೀಯ ಮೌಲ್ಯಗಳ ಘನತೆ ಕಾಪಾಡಲು ಸದಾ ಮುಂದಾಗಿರುತ್ತಾರೆ. ಅವರ ನಾಯಕತ್ವದಲ್ಲಿ ಭಾರತವು ವಿಶ್ವದಲ್ಲಿ ಶಾಂತಿಯ ದೃಷ್ಟಿಯನ್ನು ಹರಡುತ್ತದೆ ಎಂದು ಬರುಣ್ ದಾಸ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ