ಬಾಂಬ್ ದಾಳಿಯಿಂದ ಒಡೆದ ಗಾಜನ್ನು ಸ್ವಚ್ಛಗೊಳಿಸುವಾಗ ಕಣ್ಣೀರಿಡುತ್ತಾ ಉಕ್ರೇನ್​ ರಾಷ್ಟ್ರಗೀತೆ ಹಾಡಿದ ಮಹಿಳೆ : ವಿಡಿಯೋ ವೈರಲ್​

ಮಹಿಳೆಯೊಬ್ಬರು ಬಾಂಬ್​ ದಾಳಿಯಿಂದ ಒಡೆದ ಮನೆಯ ಕಿಟಕಿ ಗಾಜುಗಳನ್ನು ಸ್ವಚ್ಛಗೊಳಿಸುವಾಗ ಕಣ್ಣೀರಿಡುತ್ತಾ ಉಕ್ರೇನ್​ನ ರಾಷ್ಟ್ರಗೀತೆಯನ್ನು ಹೇಳಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಾಂಬ್ ದಾಳಿಯಿಂದ ಒಡೆದ ಗಾಜನ್ನು ಸ್ವಚ್ಛಗೊಳಿಸುವಾಗ ಕಣ್ಣೀರಿಡುತ್ತಾ ಉಕ್ರೇನ್​ ರಾಷ್ಟ್ರಗೀತೆ ಹಾಡಿದ ಮಹಿಳೆ : ವಿಡಿಯೋ ವೈರಲ್​
ಮಹಿಳೆ
Follow us
TV9 Web
| Updated By: Pavitra Bhat Jigalemane

Updated on:Feb 27, 2022 | 5:02 PM

ಉಕ್ರೇನ್(Ukraine)​ ಮೇಲೆ ರಷ್ಯಾ(Russia) ಯುದ್ಧ ಮುಂದುವರೆದಿದೆ. ಈ ನಡುವೆ ಮಾತುಕತೆಗೆ ಪ್ರಯತ್ನ ನಡೆಯುತ್ತಿದೆ ಕಳೆದ ಮೂರು ದಿನಳಿಂದ ನಿರಂತರ ಬಾಂಬ್​ ಕ್ಷಿಪಣಿಗಳ ದಾಳಿಯಿಂದ ಉಕ್ರೇನ್​ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ನೂರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಸೈನಿಕರು ದೇಶಕ್ಕಾಗಿ ಪ್ರಾಣವನ್ನು ಮುಡಿಪಾಗಿಟ್ಟು ಹೋರಾಡುತ್ತಿದ್ದಾರೆ. ಈ ಮಧ್ಯೆ ಉಕ್ರೇನ್​ನ ಪರಿಸ್ಥಿತಿಯನ್ನು ವಿವರಿಸುವ ಅನೇಕ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಹಿಂದೆ ಯುದ್ದಕ್ಕೆ ಹೋಗುವ ಮುಂಚೆ ಮಗಳನ್ನು ಮುದ್ದಾಡಿದ ವಿಡಿಯೋ ವೈರಲ್​ ಆಗಿ ನೋಡಿಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿತ್ತು. ಇನ್ನೊಂದೆಡೆ ದೇಶ ಹಾಗೂ ತನ್ನ ಮೊಮ್ಮಕ್ಕಳನ್ನು ಉಳಿಸಕೊಳ್ಳಲು 80 ವರ್ಷದ ವೃದ್ಧ ಸೈನ್ಯ ಸೇರಲು ಬಂದು ನಿಂತ ಫೋಟೋ ಉಕ್ರೇನ್​ನ ಸ್ಥಿತಿಗೆ ಹಿಡಿದ ಕೈಗನ್ನಡಿಯಂತಿತ್ತು. ಇದೀಗ ಮಹಿಳೆಯೊಬ್ಬರು ಬಾಂಬ್​ ದಾಳಿಯಿಂದ ಒಡೆದ ಮನೆಯ ಕಿಟಕಿ ಗಾಜುಗಳನ್ನು ಸ್ವಚ್ಛಗೊಳಿಸುವಾಗ ಕಣ್ಣೀರಿಡುತ್ತಾ ಉಕ್ರೇನ್​ನ ರಾಷ್ಟ್ರಗೀತೆ (national anthem )ಯನ್ನು ಹೇಳಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿಒಕ್ಸಾನಾ ಗುಲೆಂಕೊ ಎಂಬ ಮಹಿಳೆ ಬಾಂಬ್ ದಾಳಿಯಿಂದ ಒಡೆದ ಮನೆಯ ಗಾಜಿನ ಚೂರುಗಳನ್ನು ಸ್ವಚ್ಛಗೊಳಿಸುವಾಗ ರಾಷ್ಟ್ರಗೀತೆಯನ್ನು ಹಾಡುವುದನ್ನು ಕಾಣಬಹುದು. ಕ್ಷಿಪಣಿ ದಾಳಿಯು ದೇಶದ ರಾಜಧಾನಿ ಕೈವ್‌ನಲ್ಲಿರುವ ಒಕ್ಸಾನಾ ಸೇರಿದಂತೆ ಹಲವು ನಾಗರಿಕರ ಮನೆಗಳನ್ನು ನಾಶಗೊಳಿಸಿದೆ. ವಸತಿ ಕಟ್ಟಡವನ್ನು ಹಾನಿಗೊಳಿಸಿದೆ. ಒಕ್ಸಾನಾ ಕಣ್ಣೀರು ಹಿಡಿದಿಟ್ಟುಕೊಳ್ಳುವುದನ್ನು ಮತ್ತು ಕೊನೆಯಲ್ಲಿ “ಉಕ್ರೇನ್ ಲಾಂಗ್ ಲಿವ್” ಎಂದು ಹೇಳುವುದನ್ನು ನೋಡಬಹುದು. ಈ ಮನಕಲಕುವ ವಿಡಿಯೋ ಸದ್ಯ ಎಲ್ಲರಲ್ಲೂ ದುಖಃ ಉಮ್ಮಳಿಸುವಂತೆ ಮಾಡಿದೆ.

ನ್ಯೂಸ್​ ಒನ್​ ಎನ್ನುವ ಟ್ವಟರ್​ ಖಾತೆ ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೋ ನೋಡಿ ನೆಟ್ಟಿಗರು ಮುಕವಿಸ್ಮಿತರಾಗಿದ್ದಾರೆ. ತನ್ನ ದೇಶ, ತನ್ನ ಜನರ ಒಳಿತಾಗಿ ಬದುಕುವ ನಾಗರಿಕರಿಗೆ ಇಂತಹ ಸ್ಥಿತಿ ಬಂದಿದೆ ಎಂದು ಹಲವರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಯುಎಸ್​ನ ಬೀದಿಯಲ್ಲಿ ಪಂಜಾಬಿ ಹಾಡಿನ ಸದ್ದು: ವಯಲಿನ್​ನಲ್ಲಿ​ ಬಿಜಲೀ ಹಾಡು ನುಡಿಸಿದ 13 ವರ್ಷದ ಬಾಲಕಿ

Published On - 5:01 pm, Sun, 27 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್