Russia Ukraine War : ನವೀನ್ ಮತ್ತು ಸರ್ಕಾರದ ನಡುವೆ ಟ್ವೀಟ್ ವಾರ್
Tweet War : ನಿನ್ನೆ ನಡೆದ ನವೀನ್ ಸಾವಿನ ಘಟನೆಯಿಂದ ಸರ್ಕಾರ ಸರಿಯಾದ ಕಾರ್ಯವನ್ನು ಮಾಡುತ್ತಿಲ್ಲ ಮತ್ತು ಪ್ರಧಾನಿ ಮೋದಿ ಇದರ ಬಗ್ಗೆ ಪ್ರಮುಖ ಕ್ರಮಗಳನ್ನು ವಹಿಸಿಲ್ಲ ಎಂದು ಟೀಕಿಸಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧವು ಇಡಿ ಜಗತ್ತನ್ನು ತಲ್ಲಣಗೊಳಿಸಿದೆ. ಈ ಬಗ್ಗೆ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಆಂತಕವನ್ನು ವ್ಯಕ್ತಪಡಿಸಿದೆ. ರಷ್ಯಾ ಉಕ್ರೇನ್ ನ ಮೇಲೆ ದಾಳಿ ಮಾಡಿದ ಕಾಲದಿಂದಲ್ಲೂ ಈವರೆಗೂ ಅನೇಕ ಸಾವು ನೋವುಗಳು ಅನುಭವಿಸಿದ್ದಾರೆ. ಉಕ್ರೇನ್ ನಲ್ಲಿ ಬೇರೆ ಬೇರೆ ದೇಶಗಳ ವಿದ್ಯಾರ್ಥಿಗಳು ನಾಗರಿಕರು ನೆಲೆಸಿದ್ದಾರೆ. ಇದರಲ್ಲಿ ಭಾರತೀಯ ವಿದ್ಯಾರ್ಥಿಗಳು ಕೂಡ ಇದ್ದರೆ, ಭಾರತ ಸರ್ಕಾರ ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ತುಂಬಾ ಸೂಕ್ಷ್ಮವಾಗಿ ಎಲ್ಲವನ್ನು ಗಮನಿಸುತ್ತಿದೆ. ಜೊತೆಗೆ ಭಾರತ ಸರ್ಕಾರ ಕೆಲವೊಂದು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ.
ಆದರೆ ನಿನ್ನೆ ಕರ್ನಾಟಕ ಮೂಲದ ವಿದ್ಯಾರ್ಥಿ ನವೀನ್ ಶೇಖರಪ್ಪ ರಷ್ಯಾ ದಾಳಿಗೆ ಉಕ್ರೇನ್ ನಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರವಿಂದ್ ಬಾಗ್ಚಿ ಟ್ವೀಟ್ ಮಾಡಿದ್ದರು. ಸರ್ಕಾರವು ಈ ಬಗ್ಗೆ ಸ್ಪಷ್ಟನೆಯನ್ನು ನೀಡಿತ್ತು. ಇದು ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಭಾರತ ಮೂಲದ ವ್ಯಕ್ತಿಯ ಮೊದಲ ಹತ್ಯೆಯಾಗಿ, ಕರ್ನಾಟಕ ಮೂಲದ ವ್ಯಕ್ತಿಯಾಗಿರುವ ನವೀನ್ ಶೇಖರಪ್ಪ ಸಾವಿನಿಂದ ಇನ್ನಷ್ಟು ಆಂತಕ ಸೃಷ್ಟಿಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಲರ್ಟ್ ಆಗಿದೆ ಎಂದು ಹೇಳಿಲಾಗಿದೆ. ಆದರೆ ಸರ್ಕಾರ ನೀತಿ ಸರಿಯಿಲ್ಲ, ಕಠಿಣ ಕ್ರಮಗಳನ್ನು ತೆಗೆದುಕೊಂಡಿ ಎಂಬ ಪರ-ವಿರೋಧಗಳು ವ್ಯಕ್ತವಾಗುತ್ತಿದೆ.
ಕೇಂದ್ರ ಸರ್ಕಾರದ ಕ್ರಮ
ಕೇಂದ್ರ ಸರ್ಕಾರ ಉಕ್ರೇನ್ ನಲ್ಲಿರುವ ತನ್ನ ದೇಶದ ವಿದ್ಯಾರ್ಥಿಗಳ ಮತ್ತು ಪ್ರಜೆಗಳನ್ನು ಕರೆತರುವ ಕಾರ್ಯವನ್ನು ಮಾಡುತ್ತಿದೆ. ಈಗಾಗಲೇ ಏರ್ ಇಂಡಿಯಾ ಕಳೆದ ಮೂರು ದಿನಗಳಿಂದ 1600 ಭಾರತೀಯರನ್ನು ಕರೆ ತಂದಿದೆ. ಸುರಕ್ಷಿತವಾಗಿ ಅವರನ್ನು ಭಾರತಕ್ಕೆ ಕರೆತರುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಆದರೆ ನಿನ್ನೆ ನಡೆದ ನವೀನ್ ಸಾವಿನ ಘಟನೆಯಿಂದ ಸರ್ಕಾರ ಸರಿಯಾದ ಕಾರ್ಯವನ್ನು ಮಾಡುತ್ತಿಲ್ಲ ಮತ್ತು ಪ್ರಧಾನಿ ಮೋದಿ ಇದರ ಬಗ್ಗೆ ಪ್ರಮುಖ ಕ್ರಮಗಳನ್ನು ವಹಿಸಿಲ್ಲ ಎಂದು ಟೀಕಿಸಿದ್ದಾರೆ.
ಆಪರೇಷನ್ ಗಂಗಾ :
- ಸೋಮವಾರದಂದು ರಷ್ಯಾ- ಉಕ್ರೇನ್ ಶಾಂತಿ ಮಾತುಕತೆ ನಡುವೆಯೇ ಭಾರತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರ ಮಾಡುವ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯನ್ನು ಮುಂದುವರೆಸಿದೆ. ರೋಮಾನಿಯಾದ ರಾಜಧಾನಿ ಬುಚಾರೆಸ್ಟ್‌ನಿಂದ 182 ಭಾರತೀಯರು ಇರುವ ವಿಮಾನ ಟೇಕಾಫ್ ಆಗಿದೆ. ಆಪರೇಷನ್ ಗಂಗಾದ 7ನೇ ವಿಮಾನ ಇದಾಗಿದ್ದು, ಬುಚಾರೆಸ್ಟ್‌ನಿಂದ ವಿಮಾನ ಮುಂಬೈಗೆ ಆಗಮಿಸಲಿದೆ. ಈಗಾಗಲೇ ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
- ಪ್ರಧಾನಿ ಮೋದಿ ನೇತೃತ್ವದಲ್ಲಿ ಸೋಮವಾರ ಸಂಜೆ ಉನ್ನತ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಇದರ ಜೊತೆಗೆ ಎಲ್ಲ ಅಧಿಕಾರಿಗಳನ್ನು ಸೂಚನೆಯನ್ನು ಮತ್ತು ಅಲ್ಲಿರುವ ಭಾರತೀಯರನ್ನು ಹೇಗೆ ಭಾರತಕ್ಕೆ ಕರೆದು ತರುವುದು ಎಂಬ ಬಗ್ಗೆ ಸಲಹೆಯನ್ನು ನೀಡಿದ್ದಾರೆ. ಈಗಾಗಲೇ ಆಪರೇಷನ್ ಗಂಗಾ ಸೂಕ್ಷ್ಮವಾಗಿ ಮತ್ತು ವೇಗವಾಗಿ ಸಾಗುತ್ತಿದೆ ಎಂದು ಮೋದಿ ಮತ್ತು ಹಲವು ಸಚಿವರು ಹೇಳಿದ್ದಾರೆ.
- ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಭಾರತೀಯರ ರಕ್ಷಣಾ ಕಾರ್ಯಾಚರಣೆಗಾಗಿ ನಾಲ್ವರು ಸಚಿವರ ತಂಡವನ್ನು ನಿಯೋಜನೆ ಮಾಡಿದ್ದು, ಅವರು ಅಲ್ಲಿಗೆ ತೆರಳಿ ಭಾರತೀಯರನ್ನು ಕರೆತರಲಿದ್ದಾರೆ.ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾ ಮತ್ತು ಮೊಲ್ಡಾವಾದಲ್ಲಿ, ಕಿರಣ್ ರಿಜು ಸ್ವೋವಾಕಿಯಾದಲ್ಲಿ, ವಿ. ಕೆ. ಸಿಂಗ್ ಪೊಲೆಂಡ್‌ನಲ್ಲಿ, ಹರ್ ದೀಪ್ ಸಿಂಗ್ ಪುರಿ ಹಂಗೇರಿಗೆ ತೆರಳಲಿದ್ದು, ರಕ್ಷಣಾ ಕಾರ್ಯಾಚರಣೆಗೆ ನೆರವಾಗಲಿದ್ದಾರೆ. ಸೋಮವಾರ ಭಾರತದ ವಿದೇಶಾಂಗ ಸಚಿವಾಲಯ ನೀಡಿದ ಮಾಹಿತಿಯಂತೆ ಆಪರೇಷನ್ ಗಂಗಾ ಅಡಿ ಇದುವರೆಗೂ 8000 ಜನರನ್ನು ರಕ್ಷಣೆ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ರಾಜ್ಯದ ಕ್ರಮ
ರಾಜ್ಯದಲ್ಲಿ ಈಗಾಗಲೇ ಅಧಿಕಾರಿಗಳ ತಂಡವನ್ನು ರಚನೆ ಮಾಡಿದ್ದು ಮತ್ತು ಇದಕ್ಕಾಗಿ ನೊಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ಕೇಂದ್ರ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು ಕರ್ನಾಟಕದ ವಿದ್ಯಾರ್ಥಿಗಳನ್ನು ಕೂಡ ಶೀಘ್ರ ರಾಜ್ಯಕ್ಕೆ ಕರೆ ತರುವಂತೆ ನೋಡಿಕೊಳ್ಳಲು ತಿಳಿಸಿದ್ದಾರೆ. ಈಗಾಗಲೇ 13 ವಿದ್ಯಾರ್ಥಿಗಳು ರಾಜ್ಯಕ್ಕೆ ಬಂದಿದ್ದು, ಮುಂದೆ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಈ ಅಧಿಕಾರಿಗಳನ್ನು ಚರ್ಚಿಸಿದ್ದಾರೆ. ವಿಶೇಷ ಸಮಿತಿಗಳನ್ನು ಕೂಡ ರಚನೆ ಮಾಡಲಾಗಿದೆ.
ಉಕ್ರೇನ್‌ನಿಂದ ಜನ ಪಲಾಯನ
- ಉಕ್ರೇನ್‌ನಿಂದ 5,00,000ಕ್ಕೂ ಹೆಚ್ಚು ನಿರಾಶ್ರಿತರು ಅಕ್ಕಪಕ್ಕದ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಟ್ವೀಟ್ ಮಾಡಿದ್ದಾರೆ.
- ಉಕ್ರೇನ್‌ನಿಂದ 2,80,000ಕ್ಕಿಂತ ಹೆಚ್ಚು ಜನರು ಪೋಲೆಂಡ್ ದೇಶವೊಂದಕ್ಕೆ ಪಲಾಯನ ಮಾಡಿದ್ದಾರೆ. 85 ಸಾವಿರ ಜನರು ಹಂಗೇರಿಗೆ, 36,000 ಜನರು ಮಾಲ್ಡೊವಾಗೆ, 32,500 ಜನರು ರೊಮೇನಿಯಾಗೆ, 30,000 ಜನರು ಸ್ಲೋವಾಕಿಯಾಗೆ ಪಲಾಯನ ಮಾಡಿದ್ದಾರೆ ಎಂದು ಯುಎನ್‌ಹೆಚ್‌ಸಿಆರ್ ತಿಳಿಸಿದೆ.
- ಉಕ್ರೇನ್ ದೇಶದ ನಾಗರಿಕರು ಮುಕ್ತವಾಗಿ ರಾಜಧಾನಿ ಕೀವ್‌ನಿಂದ ಹೊರಹೋಗಬಹುದು ಎಂದು ರಷ್ಯಾ ಸೇನೆ ಸೋಮವಾರ ಹೇಳಿದೆ. ಜನರು ಕೀವ್-ವಾಸಿಲ್ಕಿವ್ ಹೆದ್ದಾರಿ ಮೂಲಕ ಹೊರಹೋಗಬಹುದು. ಈ ದಾರಿ ಸುರಕ್ಷಿತವಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಇಗೋರ್ ಕೊನಾಶೆಂಕೋವ್ ಹೇಳಿದ್ದಾರೆ.
- ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭ ಮಾಡಿದ ಬಳಿಕ ಎರಡು ದೇಶಗಳ ಜೊತೆ ಮೊದಲ ಮಾತುಕತೆ ಸೋಮವಾರ ನಡೆದಿದೆ. ಬೆಲರೂಸ್ ಮತ್ತು ಉಕ್ರೇನ್ ಗಡಿಯಲ್ಲಿರುವ ಪ್ರದೇಶದಲ್ಲಿ ಸಭೆ ನಡೆಯಿತು. ತಕ್ಷಣ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಉಕ್ರೇನ್ ರಷ್ಯಾದ ಮೇಲೆ ಒತ್ತಡ ಹಾಕಿದೆ.
ರಾಜಕೀಯವಾಗುತ್ತಿದೆ ನವೀನ್ ಸಾವು ?
ಸೋಮವಾರ ನವೀನ್ ರಷ್ಯಾ ದಾಳಿಗೆ ಉಕ್ರೇನ್ ನಲ್ಲಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದ, ಇದೀಗ ಈ ಘಟನೆಯ ನಂತರ ಅಲ್ಲಿರುವ ತಮ್ಮ ಮಕ್ಕಳ ಬಗ್ಗೆ ಪೋಷಕರಿಗೆ ಆಂತಕ ಶುರುವಾಗಿದೆ. ಇದರ ನಡೆವೇ ಜನಪ್ರತಿನಿಧಿಗಳು ಹೇಳಿಕೆಯು ರಾಜಕೀಯ ತಿರುವು ಪಡೆಯುವಂತಿದೆ. ಈ ಬಗ್ಗೆ ಸರ್ಕಾರಕ್ಕೂ ತಲೆನೋವು ಶುರುವಾಗಿದೆ. ನೆನ್ನೆಯಿಂದ ಕಾಂಗ್ರೆಸ್ – ಬಿಜೆಪಿ ಈ ಬಗ್ಗೆ ಟ್ವಿಟ್ ಸಮರಗಳು ನಡೆಯುತ್ತಿದೆ.
ನಾಯಕರುಗಳ ಟ್ವೀಟ್
- ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ : ಸಚಿವ ಪ್ರಲ್ಹಾದ್ ಜೋಶಿ ಅವರಿಂದ ಬಹಳ ಅಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ವೈದ್ಯಕೀಯ ಸೀಟುಗಳಲ್ಲಿನ ಕೃತಕ ಕೊರತೆಯಿಂದಾಗಿ ನಮ್ಮ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸಿದ್ದಾರೆ, ಅವರು ಸ್ವಯಂ ಪ್ರೇರಿತವಾಗಿ ವಿದೇಶಕ್ಕೆ ಹೋಗಿದ್ದಾರೆ ಎಂದು ಶಶಿ ತರೂರ್ ಹೇಳಿದ್ದಾರೆ .
- ರಾಹುಲ್ ಗಾಂಧಿ ಟ್ವೀಟ್ : ಸರ್ಕಾರ ಈ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸರ್ಕಾರ ಭಾರತೀಯರ ರಕ್ಷಣೆಗೆ ಮುಂದಾಗಬೇಕು ಮತ್ತು ಮೋದಿ ಭಾರತೀಯರನ್ನು ಭಾರತಕ್ಕೆ ಕರೆ ತುರವಲ್ಲಿ ವಿಫಲಗೊಂಡಿದೆ. ಸರ್ಕಾರ ಜನರ ಜೀವನದಲ್ಲಿ ಆಟವಾಡುತ್ತಿದೆ ಎಂದು ಟ್ವಿಟ್ ಮಾಡಿದ್ದಾರೆ. ಈ ಪ್ರತಿ ನಿಮಿಷವೂ ಅಮೂಲ್ಯ.
- ಸಿದ್ದರಾಮಯ್ಯ ಟ್ವೀಟ್ : ಹೊಸ ಕನಸುಗಳನ್ನು ಹೊಂದಿರುವ ಯುವ ವೈದ್ಯಕೀಯ ವಿದ್ಯಾರ್ಥಿಯು ಜೀವಗಳನ್ನು ಉಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ರಷ್ಯಾದಿಂದ ಸಾಕಷ್ಟು ಎಚ್ಚರಿಕೆಗಳನ್ನು ನೀಡಲಾಗಿದೆ ಮತ್ತು ಸ್ಥಳಾಂತರಿಸುವಿಕೆಗೆ ತಯಾರಿ ನಡೆಸಲು ಸರ್ಕಾರಕ್ಕೆ ಸಾಕಷ್ಟು ಸಮಯವಿತ್ತು. ದುರದೃಷ್ಟವಶಾತ್, ಸರ್ಕಾರದ ಅಜ್ಞಾನಕ್ಕೆ ನವೀನ್ ಬೆಲೆ ತೆರಬೇಕಾಯಿತು ಎಂದು ಟ್ವೀಟ್ ಮಾಡಿದ್ದಾರೆ.
- ಡಿಕೆ ಶಿವಕುಮಾರ್ ಟ್ವೀಟ್ : ಉಕ್ರೇನ್‌ನಲ್ಲಿ ಇನ್ನೂ ನೂರಾರು ಕನ್ನಡಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಸುದ್ದಿಮೂಲಗಳು ಹೇಳುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈಗಾಗಲೇ ಒಂದು ಬಲಿಯಾಗಿದೆ. ನವೀನ್ ವಯಸ್ಸಿನ ಇನ್ನೂ ಅನೇಕರು ಅಲ್ಲಿ ಸಿಲುಕಿರುವುದನ್ನು ನೋಡಿದರೆ ಆತಂಕವಾಗುತ್ತಿದೆ.
- ನಳಿನ್ ಕುಮಾರ್ ಕಟೀಲ್ ಟ್ವೀಟ್ : ಮೋದಿ ನೇತೃತ್ವದ ಸರಕಾರ ಯಶಸ್ವಿಯಾಗಿದೆ. ಅಲ್ಲಿರುವ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವರು, ರಾಜತಾಂತ್ರಿಕ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಿಮ್ಮೊಂದಿಗೆ ಇಡೀ ದೇಶವಿದೆ.
- ಬಸವರಾಜ್ ಬೊಮ್ಮಾಯಿ ಟ್ವೀಟ್ : ಉಕ್ರೇನ್ ನಲ್ಲಿ ಶೆಲ್ ಗಳ ದಾಳಿಗೆ ಕರ್ನಾಟಕದ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಮೃತಪಟ್ಟಿದ್ದು ಒಂದು ದುರಂತದ ಸಂಗತಿ, ಈ ಕುರಿತು ನವೀನ್ ಅವರ ತಂದೆ ಶೇಖರಗೌಡ ಅವರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದೇನೆ. ನವೀನ ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆಸಲಾಗುವುದು.
- ಕುಮಾರಸ್ವಾಮಿ ಟ್ವೀಟ್ : ಕೇಂದ್ರ ಸರಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರವೂ ಮತ್ತಷ್ಟು ಕ್ಷಿಪ್ರವಾಗಿ ಕೆಲಸ ಮಾಡಬೇಕು. ಇನ್ನೊಂದು ಜೀವ ಹೋಗಲೂ ಬಿಡಬಾರದು. ಉಕ್ರೇನ್ ಭಾರತೀಯ ರಾಯಭಾರ ಕಚೇರಿ ಸೂಕ್ತವಾಗಿ ಸ್ಪಂದಿಸುತ್ತಿವಲ್ಲವೆಂಬ ಆರೋಪವೂ ಕೇಳಿಬರುತ್ತಿದೆ.
ಸರ್ಕಾರದ ವಿರುದ್ಧ ಯಾಕೆ ಆಕ್ರೋಶ ?
ಟ್ವಿಟರ್ ನಲ್ಲಿ ಸರ್ಕಾರದ ವಿರುದ್ಧ ಅಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಪರ -ವಿರೋಧಗಳು ವ್ಯಕ್ತವಾಗುತ್ತಿದೆ. ಸರ್ಕಾರದ ನವೀನ್ ನ್ನು ಬಲಿ ಪಡೆದುಕೊಂಡಿದೆ. ಇದರ ಜೊತೆಗೆ ಜಾತಿ ವಾದಗಳು ಸೃಷ್ಟಿಯಾಗಿದ್ದು ಭಾರತದಲ್ಲಿ ಮೀಸಲಾತಿ ಭೂತದಿಂದ ಒಂದು ಬಳಿಯನ್ನು ಪಡೆದುಕೊಂಡಿದೆ. ನವೀನ್ ಗೆ ದೇಶದಲ್ಲಿ ಯಾವುದೇ ಮೆಡಿಕಲ್ ಕಾಲೇಜಿನಲ್ಲಿ ಸಿಟ್ ಸಿಕ್ಕಿಲ್ಲ ಆ ಕಾರಣಕ್ಕೆ ಅವರು ದೇಶಕ್ಕೆ ಹೋಗಿದ್ದಾರೆ ಎಂದು ನವೀನ್ ತಂದೆ ಹೇಳಿರುವ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ.
ಅಭ್ಯರ್ಥಿಯು GMAT ಅಥವಾ GRE ನಲ್ಲಿ 97% ಸ್ಕೋರ್ ಮಾಡಬೇಕಾದರೆ, ಅವನು ಬೇರೆ ಯಾವುದಾದರೂ ದೇಶದಲ್ಲಿದ್ದರೆ ಅವನು ಹಾರ್ವರ್ಡ್ ಅಥವಾ ಸ್ಟ್ಯಾನ್‌ಫೋರ್ಡ್‌ನಲ್ಲಿ ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನದಲ್ಲಿ ಓದುಬಹುದು. ಆದರೆ ದುಃಖದ ಸಂಗತಿಯೆಂದರೆ, ನವೀನ್ ಶೇಖರಪ್ಪ ಮೆರಿಟ್‌ನಲ್ಲಿ ಭಾರತದಲ್ಲಿ ವೈದ್ಯಕೀಯ ಸೀಟು ಪಡೆಯಲು ಸಾಧ್ಯವಾಗಲಿಲ್ಲ ಎಂದು ಐಪಿಎಸ್ ಅಧಿಕಾರಿ ಕಾರ್ತೀಕೇಯ ಜಿ ಟ್ವಿಟ್ ಮಾಡಿದ್ದಾರೆ.
ಉಕ್ರೇನ್‌ನಲ್ಲಿ ಶಿಕ್ಷಣ ಪಡೆಯುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳ ಜೀವನ ಅಪಾಯದಲ್ಲಿದೆ. ಇದು ಅವರ ಸುರಕ್ಷತೆಯ ಬಗ್ಗೆ ಯೋಚಿಸುವ ಸಮಯ, ಆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಸಂಪೂರ್ಣ ಜವಾಬ್ದಾರಿ ಸರ್ಕಾರದ ಮೇಲಿದೆ, ಬದಲಿಗೆ ನಮ್ಮ ಸಂಸದ ಶಾಸಕರು ದ್ವೇಷದ ಪ್ರಚಾರಗಳಲ್ಲಿ ನಿರತರಾಗಿದ್ದಾರೆ ಎಂದು ನಾಸಿರ್ ಪಾಷಾ ಟ್ವಿಟ್ ಮೂಲಕ ಸಂಸದರು ಶಾಸಕರ ವಿರುದ್ಧು ಅಸಮಾಧನ ವ್ಯಕ್ತಪಡಿಸಿದ್ದಾರೆ.
ಸಾಕು ನರೇಂದ್ರ ಮೋದಿ ನಿಮ್ಮ ನಾಟಕ ನಿಮ್ಮ ಅಸಮತೋಲನದ ವಿದೇಶಾಂಗ ನೀತಿಗಳಿಂದ ಖಾರ್ಕಿವ್‌ನಲ್ಲಿ ನಮ್ಮ ಸಹೋದರ ನವೀನ್‌ಶೇಖರಪ್ಪ ‘ಕೊಲೆಯಾಗಿದ್ದಾರೆ’ ಮತ್ತು ನಿಮ್ಮ ಬೇಜವಾಬ್ದಾರಿ ಸ್ವಭಾವಕ್ಕೆ ಬಲಿಯಾಗಿದ್ದಾರೆ ಎಂದು ನೀವು ಒಪ್ಪಿಕೊಳ್ಳಬೇಕು! ಅಗತ್ಯದ ಗಂಟೆಗಳಲ್ಲಿ ಭಾರತೀಯರ ಪರವಾಗಿ ನಿಲ್ಲಲು ಬಂದಾಗಲೆಲ್ಲಾ ಯು’ವ್ ವಾಡಿಕೆಯಂತೆ ವಿಫಲವಾಗಿದೆ, ನಿಮಗೆ ನಾಚಿಕೆಯಾಗಬೇಕು ಎಂದು ಟ್ವಿಟ್ ಮಾಡಿದ್ದಾರೆ.
ಸರ್ಕಾರ ನಿರ್ಧಾರಕ್ಕೆ ಬೆಂಬಲ
ರಷ್ಯಾ – ಉಕ್ರೇನ್ ಸಂಘರ್ಷದ ತೆರವು ಕಾರ್ಯಾಚರಣೆ ಉಕ್ರೇನ್ ನಲ್ಲಿರುವ ತನ್ನ 6000 ನಾಗರೀಕರ ಸುರಕ್ಷಿತ ವಾಪಸಾತಿಗಾಗಿ ಚೀನಾ ತನ್ನ ವಿಮಾನ ಕಳುಹಿಸುವುದಾಗಿ ಹೇಳಿ ಈಗ ಕಾರ್ಯಾಚರಣೆ ಮುಂದೂಡಿದೆ. ಕಾರಣ ಹಳಲಾಗಿಲ್ಲ. ಬ್ರಿಟನ್ ತನ್ನ ನಾಗರಿಕರಿಗೆ ಯಾವುದೇ ರಾಯಭಾರ ಕಛೇರಿ ನೆರವು ಮತ್ತು ಕಾರ್ಯಾಚರಣೆ ಸಾಧ್ಯವಿಲ್ಲ ಎಂದು ಘೋಷಿಸಿದೆ.
ಈಜಿಪ್ಟ್ ಮೊದಲು ತನ್ನ ನಾಗರಿಕರ ರಕ್ಷಣೆಗೆ ಉಕ್ರೇನ್ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದರೂ ಯಾವುದೇ ಕ್ರಮ ಇಲ್ಲಿಯವರೆಗೂ ಕೈಗೊಂಡಿಲ್ಲ. ಜರ್ಮನಿ ತನ್ನ ನಾಗರಿಕರಿಗೆ ಗಡಿ ರಾಷ್ಟ್ರಗಳಲ್ಲಿ ಆಶಯ ಪಡೆಯಿರಿ ಎಂದು ಸೂಚಿಸಿದೆ ಹಿಗೂ ಪ್ರಸಕ್ತ ಸನ್ನಿವೇಶದಲ್ಲಿ ತೆರವು ಕಾರ್ಯಾಚರಣೆ ಸಾಧ್ಯವಿಲ್ಲ ಎಂದಿದೆ.
ಅಮೇರಿಕಾದಂಥ ಬಲಾಢ್ಯ ದೇಶವೇ ತನ್ನ ಕಾರ್ಮಿಕರು ನಾಗರಿಕರಿಗೆ ಖಾಸಗಿ ವ್ಯವಸ್ಥೆ ಮೂಲಕ ವಾಪಸು ಬನ್ನಿ ಇಲ್ಲವೇ ಪಕ್ಕದ ಗಡಿ ರಾಷ್ಟ್ರಗಳಲ್ಲಿ ಆಶ್ರಯ ಪಡೆಯಲು ಸಲಹೆ ನೀಡಿದೆ. ಆದರೆ ಭಾರತವು ವಿದ್ಯಾರ್ಥಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಉಕ್ರೇನ್ ನಿಂದತೆರವು ಗೊಳಿಸಿದೆ. ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಬೇರೆ ದೇಶಗಳಿಗಿಂತ ಮುಂದಿದೆ.
ಈಗಾಗಲೇ ಏರ್ ಇಂಡಿಯಾ ಕಳೆದ ಮೂರು ದಿನಗಳಿಂದ 1600 ಭಾರತೀಯರನ್ನು ಕರೆ ತಂದಿದೆ. ಉಕ್ರೇನ್ ವಿಮಾನ ನಿಲ್ದಾಣಗಳು ಸ್ಥಗಿತಗೊಂಡಿದೆ ಆದ್ದರಿಂದ ಸಂತ್ರಸ್ತರು ನೆರೆಯ ಹಂಗೇರಿ ರೊಮೇನಿಯಾ ಮತ್ತು ಸ್ಲೋವಾಕಿಯಾಕ್ಕೆ ರೈಲಿನ ಮೂಲಕ ಬಂದು ತಲುಪಬೇಕಾದ ದುಸ್ಥಿತಿ ಇದೆ.
ಆಪರೇಟಿಂಗ್ ಗಂಗಾ ಕಾರ್ಯಕ್ರಮದಲ್ಲಿದ್ದ ಏರ್ ಇಂಡಿಯಾ ವಿಮಾನಗಳ ಜೊತೆ ಸ್ಪೈಸ್ ಜೆಟ್ ಕೂಡ ಕೈಜೋಡಿಸಿದೆ. ಭಾರತೀಯ ವಾಯುಸೇನೆ ಕೂಡ ಕಾರ್ಯಾಚರಣೆಗೆ ವೇಗ ನೀಡಲು ಇಂದಿನಿಂದ ಫೀಲ್ಡಿಗಿಳಿದಿದೆ. ತೆರವು ಕಾರ್ಯಾಚರಣೆ ಉಸ್ತುವಾರಿಗೆ ನಿಯೋಜಿತರಾಗಿರುವ ನಾಲ್ವರು ಕೇಂದ್ರದ ಸಚಿವರು ತಮಗೆ ಹೊಣೆಗಾರಿಕೆ ವಹಿಸಿರುವ ಗಡಿ ದೇಶಗಳಲ್ಲಿ ಆಗಲೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೂ ಭಾರತದಲ್ಲಿ ಸರ್ಕಾರವನ್ನು ವಿರೋಧಿಸಲೆಂದೇ ಹುಟ್ಟಿದವರು ಇದ್ದಾರೆ ಎಂಬುದು ವಿಪರ್ಯಾಸವೇ ಸರಿ. ಸರ್ಕಾರವನ್ನು ವಿರೋಧಿಸಿದವರಿಗೆ ಹೇಳಿದ್ದಾರೆ.
ಮೃತ ನವೀನ್ ತಂದೆಯ ಒಂದು ಹೇಳಿಕೆಯಿಂದ ಟ್ವಿಟರ್ ನಲ್ಲಿ ಗದ್ದಲ
ಹೌದು ಮೃತ ನವೀನ್ ಅವರ ತಂದೆ ಹೇಳಿದ ಆ ಒಂದು ಹೇಳಿಕೆಯಿಂದ ದೇಶದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಮಗ ನವೀನ್ ಗೆ ಮೀಸಲಾಯಿತಿಯಿಂದ ಇಲ್ಲಿ ಸಿಟ್ ಸಿಗಲಿಲ್ಲ ಇದು ಬೇಸರ ವಿಷಯ, ಪ್ರತಿಭೆ ಇರುವ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲ. ನನ್ನ ಮಗನಿಗೆ ಮಾರ್ಕ್ಸ್ ಇದ್ದರು ಸಿಟ್ ಸಿಕ್ಕಿಲ್ಲ, ಆ ಕಾರಣದಿಂದ ನಾನು ಅವನನ್ನು ವಿದೇಶಕ್ಕೆ ಕಳುಹಿಸಿದೆ. ಆದರೆ ಈಗ ಮಗನನ್ನು ಕಳೆದುಕೊಂಡೆ, ನಮ್ಮ ದೇಶದ ಸರ್ಕಾರ ಮತ್ತು ವ್ಯವಸ್ಥೆ ಮೊದಲು ಬದಲಾಗಬೇಕು ಎಂದು ಹೇಳಿದ ಒಂದು ಹೇಳಿಕೆ ಬಾರಿ ಸದ್ದು ಮಾಡುತ್ತಿದೆ.