ಸೋಷಿಯಲ್​ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಒಂದು ಫೋಟೋ ಮತ್ತು ಕಮೆಂಟ್​; ಸಹಪಾಠಿ ಯುವತಿಯನ್ನು ಗುಂಡಿಕ್ಕಿ ಕೊಂದ ಯುವಕ

ಘಟನೆ ನಡೆದ ಸ್ಥಳದಲ್ಲಿ ಇದ್ದವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ಆರೋಪಿ ಪತ್ತೆ ಕಾರ್ಯ ಶುರು ಮಾಡಲಾಗಿತ್ತು. ಕೆಲವೇ ಹೊತ್ತಲ್ಲಿ ಆರೋಪಿ ಆದಿತ್ಯನನ್ನು ಬಂಧಿಸಲಾಗಿದೆ.

ಸೋಷಿಯಲ್​ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಒಂದು ಫೋಟೋ ಮತ್ತು ಕಮೆಂಟ್​; ಸಹಪಾಠಿ ಯುವತಿಯನ್ನು ಗುಂಡಿಕ್ಕಿ ಕೊಂದ ಯುವಕ
ಮೃತ ಯುವತಿ ಮತ್ತು ಆರೋಪಿ
Follow us
| Updated By: Lakshmi Hegde

Updated on: Mar 05, 2022 | 10:40 AM

ಕಾಲೇಜಿನಲ್ಲಿ ತನ್ನ ಸಹಪಾಠಿ ಯುವತಿಯನ್ನು ಕೊಂದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಾದ ಯುವತಿಯನ್ನು ವಂಶಿಕಾ ಬನ್ಸಾಲ್​ ಎಂದು ಗುರುತಿಸಲಾಗಿದ್ದು. ಡೆಹ್ರಾಡೂನ್​​ನ ಸಿದ್ಧಾರ್ಥ ಕಾಲೇಜಿನಲ್ಲಿ ಡಿ ಫಾರ್ಮಾ ಓದುತ್ತಿದ್ದಳು. ಹಾಗೇ ಆರೋಪಿಯ ಹೆಸರು ಆದಿತ್ಯ ತೋಮರ್​ ಎಂದಾಗಿದ್ದು, ವಂಶಿಕಾ ತನ್ನ ಸ್ನೇಹಿತೆಯರೊಂದಿಗೆ ಹೊರಗೆ ಹೋಗಿದ್ದ ಸಂದರ್ಭ ನೋಡಿಕೊಂಡು ಆಕೆಯನ್ನು ಕೊಂದಿದ್ದಾನೆ. ಇವಳು ರಾಯ್​ಪುರ ಠಾಣೆ ವ್ಯಾಪ್ತಿಯ ದಾದಾ ನಗರದಲ್ಲಿ ಹಾಸ್ಟೆಲ್​​ವೊಂದರಲ್ಲಿ ವಾಸವಾಗಿದ್ದಳು.

ಈ ಬಗ್ಗೆ ಡೆಹ್ರಾಡೂನ್​ ಎಸ್​ಎಸ್​ಪಿ ಜನ್​ಮೇಜಯ್​ ಖಾದುರಿ ಮಾಹಿತಿ ನೀಡಿದ್ದು, ವಿದ್ಯಾರ್ಥಿನಿ ವಂಶಿಕಾ ಬನ್ಸಾಲ್ ಡೂನ್​​ನಲ್ಲಿರುವ ಕಾಲೇಜು ಹಾಸ್ಟೇಲ್​​ನಲ್ಲಿ ವಾಸವಾಗಿದ್ದಳು. ಗುರುವಾರ ಸಂಜೆ ಆಕೆ ತನ್ನ ಸ್ನೇಹಿತೆ ಮಮತಾ ಎಂಬಾಕೆಯೊಂದಿಗೆ ಕಾಲೇಜು ಹಾಸ್ಟೆಲ್​​​ನ ಬಳಿಯೇ ಇರುವ ಒಂದು ಅಂಗಡಿಯಲ್ಲಿ ನಿಂತಿದ್ದಳು. ಆಗ ಅಲ್ಲಿಗೆ ಈ ಆದಿತ್ಯ ತೋಮರ್​ ಬೈಕ್​​ನಲ್ಲಿ ಬಂದಿದ್ದಾನೆ. ಈತ ಉತ್ತರಾಖಂಡ್​​ನ ಸುಂದರ್​ವಾಲಾ ರಾಯ್​​ಪುರದ ನಿವಾಸಿ. ಬೈಕ್​​ನಲ್ಲಿ ಬಂದವನೇ ವಂಶಿಕಾಳನ್ನು ಎಳೆದಾಡಿದ್ದಾನೆ. ಅಷ್ಟೇ ಅಲ್ಲ, ಬೈಕ್​​ ಮೇಲೆ ಕುಳಿತುಕೊಳ್ಳುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ವಂಶಿಕಾ ಒಪ್ಪದೆ ಇದ್ದಾಗ ಆಕೆಯ ಎದೆಗೆ ಗುಂಡು ಹೊಡೆದು ಅಲ್ಲಿಂದ ಪರಾರಿಯಾಗಿದ್ದ. ಬೈಕ್​, ಗನ್​ಗಳನ್ನೂ ಅಲ್ಲೇ ಬಿಟ್ಟು ಹೋಗಿದ್ದ. ವಂಶಿಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ನಡೆದ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಸ್ಥಳದಲ್ಲಿ ಇದ್ದವರನ್ನು ವಿಚಾರಣೆ ನಡೆಸಿದಾಗ ಸಿಕ್ಕ ಮಾಹಿತಿ ಆಧಾರದ ಮೇಲೆ ಪೊಲೀಸ್ ತಂಡ ಆರೋಪಿ ಪತ್ತೆ ಕಾರ್ಯ ಶುರು ಮಾಡಲಾಗಿತ್ತು. ಕೆಲವೇ ಹೊತ್ತಲ್ಲಿ ಆರೋಪಿ ಆದಿತ್ಯನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆದಿತ್ಯ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ತಾನ್ಯಾಕೆ ಆಕೆಯ ಮೇಲೆ ಶೂಟ್ ಮಾಡಿದೆ? ಆಕೆಯ ಮೇಲಿದ್ದ ಕೋಪವೇನು ಎಂಬ ವಿವರವನ್ನು ಬಿಚ್ಚಿಟ್ಟಿದ್ದಾನೆ.

ಈಗೊಂದು ತಿಂಗಳ ಹಿಂದೆ ವಂಶಿಕಾ ಸೋಷಿಯಲ್​ ಮೀಡಿಯಾದಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದಳು. ಆ ಫೋಟೊಕ್ಕೆ ಆದಿತ್ಯ ಒಂದು ಕಮೆಂಟ್​ ಮಾಡಿದ್ದ. ಇದೇ ಕಮೆಂಟ್​ ವಿಚಾರಕ್ಕೆ ವಂಶಿಕಾ ಮತ್ತು ಆದಿತ್ಯ ನಡುವೆ ಗಲಾಟೆಯಾಗಿತ್ತು. ಅಷ್ಟೇ ಅಲ್ಲ, ವಂಶಿಕಾ ತನ್ನ ಸ್ನೇಹಿತರ ಬಳಿಯೂ ಈ ಬಗ್ಗೆ ದೂರು ಹೇಳಿಕೊಂಡಿದ್ದರು. ಆದಿತ್ಯ ಮತ್ತು ವಂಶಿಕಾ ಸಹಪಾಠಿಗಳಾಗಿದ್ದರಿಂದ ಸಹಜವಾಗಿ ಈಕೆಗೆ ಸ್ನೇಹಿತರಾಗಿದ್ದವರೇ ಅವನಿಗೂ ಗೊತ್ತಿರುವವರೇ ಆಗಿದ್ದರು. ವಂಶಿಕಾ ಸ್ನೇಹಿತರೆಲ್ಲ ಸೇರಿ, ಆದಿತ್ಯನ ಬಳಿ ಕ್ಷಮೆ ಕೇಳಿಸಿದ್ದರೂ. ಅದೂ ಕೂಡ ಆತ ವಂಶಿಕಾಳ ಕಾಲುಮುಟ್ಟಿ ಕ್ಷಮೆ ಕೇಳುವಂತೆ ಮಾಡಿದ್ದರು. ಇದು ತನಗೆ ಅವಮಾನ ಎಂದು ಆದಿತ್ಯ ತೋಮರ್​ ಸಿಕ್ಕಾಪಟೆ ಸಿಟ್ಟು ಮಾಡಿಕೊಂಡಿದ್ದ. ವಂಶಿಕಾ ಬಳಿ ಮತ್ತೆ ಜಗಳವಾಡಿದ್ದ. ಆ ಕೋಪದಿಂದಲೇ ಆತ ವಂಶಿಕಾ ಮೇಲೆ ಹಾಡಹಗಲೇ ಗುಂಡು ಹಾರಿಸಿದ್ದಾನೆ.

ಇದನ್ನೂ ಓದಿ:  ‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೇ ಇಲ್ಲ’: ನೇರವಾಗಿ ಹೇಳಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್