ಕೊವಿಡ್ 19 ಕಾರಣಕ್ಕೆ ಬಂದ್ ಆಗಿದ್ದ ರಾಷ್ಟ್ರಪತಿ ಭವನ ಮ್ಯೂಸಿಯಂ ವೀಕ್ಷಣೆ ಮತ್ತೆ ಪ್ರಾರಂಭ; ಇಲ್ಲಿದೆ ಸಮಯ, ಸ್ಲಾಟ್ ಬಗ್ಗೆ ಮಾಹಿತಿ
ರಾಷ್ಟ್ರಪತಿ ಭವನಕ್ಕೆ ಮಾರ್ಚ್ 12ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಇಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ವೀಕ್ಷಣೆಗೆ ಅವಕಾಶ ಇದೆ. ಇದೆರಡು ದಿನದಲ್ಲೇ ಯಾವುದಾದರೂ ಗೆಜೆಟೆಡ್ ರಜಾದಿನ ಬಂದರೆ ಅಂದು ಕ್ಲೋಸ್ ಇರಲಿದೆ.
ಕೊವಿಡ್ 19 ಮೂರನೇ ಅಲೆ (Covid 19 3rd Wave) ಹಿನ್ನೆಲೆಯಲ್ಲಿ ಜನವರಿ 1ರಿಂದಲೇ ಬಂದ್ ಆಗಿದ್ದ ರಾಷ್ಟ್ರಪತಿ ಭವನ, ರಾಷ್ಟ್ರಪತಿ ಭವನ ಮ್ಯೂಸಿಯಂ ಪ್ರವಾಸ ಮಾರ್ಚ್ 8ರಿಂದ ಮತ್ತೆ ಪ್ರಾರಂಭವಾಗಲಿದೆ. ಅಂದರೆ ಸಾರ್ವಜನಿಕರ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಹಾಗೇ, ಕೊವಿಡ್ 19 ಕಾರಣಕ್ಕೆ ಚೇಂಜ್ ಆಫ್ ಗಾರ್ಡ್ ಸಮಾರಂಭ (ಇದು ಮಿಲಿಟರಿ ಸಂಪ್ರದಾಯ. ಪ್ರಸಿದ್ಧ ಸ್ಥಳಗಳು, ಕೋಟೆಗಳು, ರಕ್ಷಣಾ ಸಂಸ್ಥೆಗಳಲ್ಲಿ ನಿಯೋಜಿಸಲಾಗುವ ರಕ್ಷಣಾ ಸಿಬ್ಬಂದಿಯನ್ನು ನಿಯಮಿತವಾಗಿ ಬದಲಾವಣೆ ಮಾಡುವ ಒಂದು ಕಾರ್ಯಕ್ರಮ)ವೂ ಸ್ಥಗಿತಗೊಂಡಿತ್ತು. ಇದೂ ಕೂಡ ಮುಂದಿನ ವಾರ ನಡೆಯಲಿದೆ.
ರಾಷ್ಟ್ರಪತಿ ಭವನ ಸಂಕೀರ್ಣ ಸಾರ್ವಜನಿಕರ ವೀಕ್ಷಣೆಗೆ ಮಾರ್ಚ್ 8ರಿಂದ ತೆರೆಯಲಿದ್ದು, ವಾರದಲ್ಲಿ ಆರು ದಿನ ಅಂದರೆ ಮಂಗಳವಾರದಿಂದ ಭಾನುವಾರದವರೆಗೆ ಸಾರ್ವಜನಿಕರು ವೀಕ್ಷಣೆಗೆ ಇಲ್ಲಿಗೆ ಬರಬಹುದಾಗಿದೆ. ಗೆಜೆಟೆಡ್ ರಜಾದಿನಗಳಲ್ಲಿ ವೀಕ್ಷಣೆ ಇರುವುದಿಲ್ಲ ಎಂದು ರಾಷ್ಟ್ರಪತಿ ಭವನ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಿನಕ್ಕೆ ನಾಲ್ಕು ಸ್ಲಾಟ್ಗಳಿದ್ದು, ಇಲ್ಲಿಗೆ ಆಗಮಿಸುವವರು ಮೊದಲೇ ಬುಕ್ ಮಾಡಿಟ್ಟುಕೊಳ್ಳಬೇಕು. ಒಂದು ಸ್ಲಾಟ್ನಲ್ಲಿ 50 ಪ್ರವಾಸಿಗರಿಗೆ ಮಾತ್ರ ಅವಕಾಶ. ಮೊದಲ ಸ್ಲಾಟ್ ಅವಧಿ ಬೆಳಗ್ಗೆ 9.30-11 ಗಂಟೆ, ಎರಡನೇ ಸ್ಲಾಟ್ 11.30ರಿಂದ ಮಧ್ಯಾಹ್ನ 1, ಮೂರನೇ ಸ್ಲಾಟ್ 13.30-3 ಮತ್ತು ನಾಲ್ಕನೇ ಸ್ಲಾಟ್ 15.30ರಿಂದ ಸಂಜೆ 5ಗಂಟೆವರೆಗೆ ಇರಲಿದೆ.
ರಾಷ್ಟ್ರಪತಿ ಭವನಕ್ಕೆ ಮಾರ್ಚ್ 12ರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿದೆ. ಇಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ವೀಕ್ಷಣೆಗೆ ಅವಕಾಶ ಇದೆ. ಇದೆರಡು ದಿನದಲ್ಲೇ ಯಾವುದಾದರೂ ಗೆಜೆಟೆಡ್ ರಜಾದಿನ ಬಂದರೆ ಅಂದು ಕ್ಲೋಸ್ ಇರಲಿದೆ. ರಾಷ್ಟ್ರಪತಿ ಭವನ ವೀಕ್ಷಣೆಗೆ ಸಾರ್ವಜನಿಕರಿಗೆ ಮೂರು ಸ್ಲಾಟ್ನಲ್ಲಿ ಸಮಯ ನಿಗದಿ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯಿಂದ 11.30 ಮೊದಲೇ ಸ್ಲಾಟ್, 12.30-13-30ರವರೆಗೆ ಎರಡನೇ ಮತ್ತು 14.30ರಿಂದ 15.30ರವರೆಗೆ ಮೂರನೇ ಸ್ಲಾಟ್ ಇರಲಿದೆ. ಒಂದು ಸ್ಲಾಟ್ನಲ್ಲಿ ಗರಿಷ್ಠ 25 ಜನರಿಗಷ್ಟೇ ಅವಕಾಶ. ಈ ಬಾರಿ ರಾಷ್ಟ್ರಪತಿ ಭವನ ಪ್ರವಾಸದಲ್ಲಿ ಹೊಸದಾಗಿ ಅಭಿವೃದ್ಧಿಯಾಗಿ ಆರೋಗ್ಯ ವನಂ ವೀಕ್ಷಣೆಯೂ ಇರಲಿದೆ. ಇನ್ನು ಚೇಂಜ್ ಆಫ್ ಗಾರ್ಡ್ ಸಮಾರಂಭ ಮಾರ್ಚ್ 12ರಿಂದ ಪ್ರತಿ ಶನಿವಾರ (ಗೆಜೆಟೆಡ್ ರಜಾದಿನ ಹೊರತು ಪಡಿಸಿ) ಬೆಳಗ್ಗೆ 8ಗಂಟೆಯಿಂದ 9ಗಂಟೆವರೆಗೆ ಇರುತ್ತದೆ.
ಇದನ್ನೂ ಓದಿ: Breaking: ಮಾನವೀಯ ಕಾರಿಡಾರ್ಗಳನ್ನು ತೆರೆಯಲು ಕದನ ವಿರಾಮ ಘೋಷಿಸಿದ ರಷ್ಯಾ
Published On - 1:18 pm, Sat, 5 March 22