ಪಂಚ ರಾಜ್ಯಗಳ ಚುನಾವಣೆ ಮುಕ್ತಾಯ ಹಂತಕ್ಕೆ, ಇನ್ನು ಎಕ್ಸಿಟ್ ಪೋಲಿನದೇ ರಾಜ್ಯಭಾರ! ಯಾವಾಗ ಎಕ್ಸಿಟ್ ಪೋಲ್ ಫಲಿತಾಂಶ?
Exit Poll Result 2022: ಪಂಜಾಬ್, ಉತ್ತರಾಖಂಡ್, ಉತ್ತರಪ್ರದೇಶ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಗಳ ಫಲಿತಾಂಶವು ಮಾರ್ಚ್ 10ಕ್ಕೆ ಅಧಿಕೃತವಾಗಿ ಪ್ರಕಟವಾಗಲಿದೆ. ಅಲ್ಲಿಯವರೆಗೂ ಎಕ್ಸಿಟ್ ಪೋಲ್ ಫಲಿತಾಂಶಗಳದ್ದೇ ಹಾರಾಟ/ ಆರ್ಭಟ. TV9 Bharatvarsh ಸಹ ಮಾರ್ಚ್ 7ರಂದು ಸಂಜೆ 6 ಗಂಟೆಯಿಂದ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಸಾರ ಮಾಡಲು ಉತ್ಸುಕತೆಯಿಂದ ಕಾದಿದೆ.
ನವದೆಹಲಿ: ಉತ್ತರ ಪ್ರದೇಶ ರಾಜ್ಯದಲ್ಲಿ ಅಂತಿಮ ಹಂತದ ಅಸೆಂಬ್ಲಿ ಚುನಾವಣೆ ಮುಂದಿನ ಸೋಮವಾರ ಮಾರ್ಚ್ 7ಕ್ಕೆ ಕೊನೆಗಾಣಲಿದೆ. ಅದರ ಜೊತೆಗೆ ಮಣಿಪುರದಲ್ಲಿ ಎರಡನೆಯ ಹಂತದ ಮತದಾನವೂ ನಡೆಯಬೇಕಿದೆ. ಇದರೊಂದಿಗೆ ಉತ್ತರದ ಪಂಚ ರಾಜ್ಯಗಳ ಚುನಾವಣೆ ಸಂಪನ್ನವಾಗಲಿದೆ. ಆದರೆ ಇನ್ನು ಎಕ್ಸಿಟ್ ಪೋಲ್ (Exit Poll Result 2022) ರಾಜ್ಯಭಾರ ಶುರುವಾಗಲಿದೆ! ಯಾವಾಗ ಎಕ್ಸಿಟ್ ಪೋಲ್ ಫಲಿತಾಂಶ? ಏನದರ ವಿವರ? ಇಲ್ಲಿದೆ ಮಾಹಿತಿ. ಒಟ್ಟಾಗಿ ಐದೂ ರಾಜ್ಯಗಳ ಚುನಾವಣೆಗಳು ಮುಗಿದ ಬಳಿಕವಷ್ಟೇ ಎಕ್ಸಿಟ್ ಪೋಲ್ ವ್ಯವಹಾರ ಎಂದು ಚುನಾವಣೆ ಆಯೋಗ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ್ದರಿಂದ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಮುಗಿದು ಯಾವುದೋ ಕಾಲವಾಗಿದ್ದರೂ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿರಲಿಲ್ಲ.
ಎಕ್ಸಿಟ್ ಪೋಲ್ ಅಂದರೆ ಮತಗಟ್ಟೆಗಳಿಂದಲೇ ಮತದಾರರನ್ನು ಮಾತನಾಡಿಸಿ ಫಲಿತಾಂಶ ಏನಾಗಲಿದೆ ಎಂದು ಊಹಾತ್ಮಕವಾಗಿ ಪ್ರಕಟಿಸುವುದು ಮಾಧ್ಯಮಗಳು ಮಾಡಿಕೊಂಡು ಬಂದಿರುವ ಕೆಲಸ. ಹಾಗಾಗಿ ಪಂಚ ರಾಜ್ಯಗಳ ಪೈಕಿ ಕೊನೆಯ ಮತದಾನ ಸೋಮವಾರ ಮುಕ್ತಾಯವಾಗುತ್ತಿದ್ದಂತೆ ಮಾಧ್ಯಮಗಳು ಪಂದಿಂದೇ ರಾಜ್ಯದ ಎಕ್ಸಿಟ್ ಪೋಲ್ ಫಲಿತಾಂಶ ಬಿತ್ತರಿಸತೊಡಗುತ್ತವೆ. ಏನೇ ಆದರೂ ಮತದಾರ ಪ್ರಭುವಿನ ಅಧಿಕೃತ ಆದೇಶ ಏನೆಂಬುದು ಚುನಾವಣೆ ಆಯೋಗ ಪ್ರಕಟಿಸುವ ಫಲಿತಾಂಶದ ಬಳಿಕವಷ್ಟೇ ಸತ್ಯ ಗೊತ್ತಾಗಲಿದೆ. ಪಂಜಾಬ್, ಉತ್ತರಾಖಂಡ್, ಉತ್ತರಪ್ರದೇಶ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಗಳ ಫಲಿತಾಂಶವು ಮಾರ್ಚ್ 10ಕ್ಕೆ ಅಧಿಕೃತವಾಗಿ ಪ್ರಕಟವಾಗಲಿದೆ. ಅಲ್ಲಿಯವರೆಗೂ ಎಕ್ಸಿಟ್ ಪೋಲ್ ಫಲಿತಾಂಶಗಳದ್ದೇ ಹಾರಾಟ/ ಆರ್ಭಟ. TV9 Bharatvarsh ಸಹ ಮಾರ್ಚ್ 7ರಂದು ಸಂಜೆ 6 ಗಂಟೆಯಿಂದ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು (Exit Poll Result 2022) ಪ್ರಸಾರ ಮಾಡಲು ಉತ್ಸುಕತೆಯಿಂದ ಕಾದಿದೆ.
ಎಕ್ಸಿಟ್ ಪೋಲ್ ಮತ್ತು ಅದರ ಫಲಿತಾಂಶ ಪ್ರಕ್ರಿಯೆ ಹೇಗೆ? ಎಕ್ಸಿಟ್ ಪೋಲ್ ಅಂದರೆ ಆಗಲೇ ಹೇಳಿದಂತೆ ಮತದಾರರು ಅಂತಿಮವಾಗಿ ತಮ್ಮ ಮತ ಚಲಾಯಿಸುವ ಪ್ರಕ್ರಿಯೆ ನಡೆಸಿದ ನಂತರ ಮಾಧ್ಯಮ ಸಂಸ್ಥೆಗಳು ನಡೆಸುವ ವೋಟ್ ಕೌಂಟಿಂಗ್! ಇನ್ನು, ಚುನಾವಣೆಯಲ್ಲಿ ಮತದಾನಕ್ಕೂ ಮುನ್ನ ಎಲ್ಲ ಸ್ತರದ ಜನರ ಅಭಿಪ್ರಾಯ ಸಂಗ್ರಹಿಸುವ ಪೋಲ್ ಗೆ ಒಪೀನಿಯನ್ ಪೋಲ್ ಅಥವಾ ಎಂಟ್ರೆನ್ಸ್ ಪೋಲ್ ಎನ್ನುತ್ತಾರೆ. ಎಕ್ಸಿಟ್ ಪೋಲ್ ಉದ್ದೇಶವೇನೆಂದರೆ ಅಧಿಕೃತವಾಗಿ ಚುನಾವಣೆ ಆಯೋಗ ನಿಗದಿಪಡಿಸಿರುವ ಫಲಿತಾಂಶದ ದಿನಕ್ಕೂ ಮುನ್ನವೇ ಹಸಿಬಿಸಿಯಾಗಿ ಮತದಾನ ಮುಗಿಯುತ್ತಿದ್ದಂತೆ ಫಲಿತಾಂಶ ತಿಳಿದುಕೊಳ್ಳುವ ಮಾಧ್ಯಮಗಳ ಜರೂರತ್ತು ಆಗಿದೆ. ಕೆಲವು ಮಾಧ್ಯಮ ಸಂಸ್ಥೆಗಳು ಅಲ್ಲಲ್ಲಿ ತನ್ನಿಷ್ಟಾನುಸಾರ ಈ ಎಕ್ಸಿಟ್ ಪೋಲ್ ಪ್ರಕ್ರಿಯೆ ಮುಗಿಸಿಕೊಳ್ಳುತ್ತವೆ. ಆದರೆ ಕೆಲವು ಮಾಧ್ಯಮ ಸಂಸ್ಥೆಗಳು ವ್ಯವಸ್ಥಿತವಾಗಿ ಮತ್ತು ನಿಖರವಾಗಿ ಪ್ರಕ್ರಿಯೆ ಕೈಗೆತ್ತಿಕೊಂಡು ವಾಸ್ತವಕ್ಕೆ ಹತ್ತಿರವಾದಂತಹ ಫಲಿತಾಂಶಗಳನ್ನು ಬಹಿರಂಗಪಡಿಸುತ್ತವೆ.
ಮಾಧ್ಯಮ ಸಂಸ್ಥೆಗಳು ನಾನಾ ವಯಸ್ಸಿನವರು, ಹೆಣ್ಣು ಮತ್ತು ಗಂಡು ಮತದಾರರು, ನಾನಾ ಜಾತಿಯವರು, ನಾನಾ ಪ್ರದೇಶಗಳ ಆಧಾರದಲ್ಲಿ ಎಕ್ಸಿಟ್ ಪೋಲ್ ಪ್ರಕ್ರಿಯೆ ನಡೆಸುತ್ತವೆ. ಅದರ ಆಧಾರದಲ್ಲಿ ನಿಖರ ಫಲಿತಾಂಶಗಳನ್ನು ಪ್ರಸಾರ ಮಾಡುತ್ತವೆ.
Also Read: ಪಾಂಡವರ ರಾಜಧಾನಿ ಹಸ್ತಿನಾಪುರದಲ್ಲಿ ಜಯ ಸಾಧಿಸುವವರೇ ಉತ್ತರ ಪ್ರದೇಶದಲ್ಲಿ ಸದಾ ಅಧಿಕಾರಕ್ಕೆ ಬರುವುದು, ಇದು ನಿಜ!! Also Read: TV9 ಸಾಕ್ಷಾತ್ ವರದಿ: ಮೊದಲ ಬಾರಿ ಯೋಗಿ ಆದಿತ್ಯನಾಥ್ ಅಸೆಂಬ್ಲಿ ಅಖಾಡಕ್ಕೆ! ಪ್ರತಿಷ್ಠೆಯ ಕಣವಾದ ಸಿಎಂ ತವರು ಗೋರಖಪುರ