ದೆಹಲಿ: ದೇಶದಲ್ಲೀಗ ಒಮಿಕ್ರಾನ್ ಚಾಲಿತ ಕೊರೊನಾ ಸೋಂಕಿನ ಮೂರನೇ ಅಲೆ (Corona Virus 3rd Wave) ಎದ್ದಿದೆ. ಒಂದು ದಿನದಲ್ಲಿ ಮೂರು ಲಕ್ಷದವರೆಗಿನ ಪ್ರಕರಣಗಳು ಪತ್ತೆಯಾಗಿ ಇದೀಗ ಮತ್ತೆ ಇಳಿಮುಖಗೊಂಡಿದೆ. ದಿನಕ್ಕೆ ಒಂದು ಲಕ್ಷದಷ್ಟು ಸೋಂಕಿತರು ದಾಖಲಾಗುತ್ತಿದ್ದಾರೆ. ಆದರೆ ಈ ಮೂರನೇ ಅಲೆ ಇದೊಂದು ತಿಂಗಳು ಕಾಡಲಿದೆ. ಭಾರತದಲ್ಲಿ ಮಾರ್ಚ್ ತಿಂಗಳ ಹೊತ್ತಿಗೆ ಕೊವಿಡ್ 19 ಮೂರನೇ ಅಲೆ ಪ್ರಮಾಣ ತುಸು ತಗ್ಗಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕೂಡ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆ ಆಗಿವೆ.
ಐಸಿಎಂಆರ್ನ ಡಾ. ಸಮೀರನ್ ಪಾಂಡಾ ಪ್ರತಿಕ್ರಿಯೆ ನೀಡಿ, ದೇಶಾದ್ಯಂತ ಕೊರೊನಾ ವೈರಸ್ ಮೂರನೇ ಅಲೆ ತಗ್ಗಲಿದೆ. ಅದರಲ್ಲೂ ದೆಹಲಿ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಫೆಬ್ರವರಿ ಅಂತ್ಯದ ಹೊತ್ತಿಗೆ ಸೋಂಕು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಈಗಾಗಲೇ ದಿನದಲ್ಲಿ ದಾಖಲಾಗುವ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇಂದು 1,27,952 ಪ್ರಕರಣಗಳು ದಾಖಲಾಗಿದ್ದು, ಪಾಸಿಟಿವಿಟಿ ರೇಟ್ ಶೇ. 9.27ರಿಂದ ಶೇ.7.98ಕ್ಕೆ ಇಳಿಕೆಯಾಗಿದೆ. ಹಾಗೇ, ದೇಶದಲ್ಲೀಗ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 13,31,648ಕ್ಕೆ ಇಳಿದಿದೆ.
ದೇಶದಲ್ಲಿ ದಿನದಲ್ಲಿ ಪತ್ತೆಯಾಗುವ ಕೊರೊನಾ ಪ್ರಕರಣದಲ್ಲಿ ಇಳಿಮುಖವಾಗಿದ್ದರೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಚೇತರಿಕೆ ರೇಟ್ 95.64ರಷ್ಟಿದ್ದು, 24 ಗಂಟೆಯಲ್ಲಿ 2,30,814 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಈ ಮಧ್ಯೆ ವಯಸ್ಕರಿಗೆ 168.98 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, 5.34 ಕೋಟಿ ಮಕ್ಕಳಿಗೆ ಕೊವಿಡ್ 19 ಮೊದಲ ಡೋಸ್ ಲಸಿಕೆ ನೀಡಿಕೆಯಾಗಿದೆ.
#Unite2FightCorona#LargestVaccineDrive#OmicronVariant
𝗖𝗢𝗩𝗜𝗗 𝗙𝗟𝗔𝗦𝗛https://t.co/4fxGT5RgrO pic.twitter.com/yT4nqRWx1m
— Ministry of Health (@MoHFW_INDIA) February 5, 2022
ಇದನ್ನೂ ಓದಿ: ಶಿಕ್ಷಣದಲ್ಲಿ ಹಿಜಾಬ್ ಅಷ್ಟೊಂದು ಮುಖ್ಯವಾಗಿದ್ದರೆ, ರಾಹುಲ್ ಗಾಂಧಿಯೇ ಅದನ್ನು ಕಡ್ಡಾಯಗೊಳಿಸಬಹುದಿತ್ತಲ್ಲ?!-ಬಿಜೆಪಿ ತಿರುಗೇಟು