27 ಸೆಕೆಂಡ್​ನಲ್ಲಿ 100 ಮೀಟರ್ ಓಟ ಪೂರ್ಣಗೊಳಿಸಿದ 102 ವರ್ಷದ ವೃದ್ಧ: ವಿಡಿಯೋ ವೈರಲ್

27 ಸೆಕೆಂಡ್​ನಲ್ಲಿ 100 ಮೀಟರ್ ಓಟ ಪೂರ್ಣಗೊಳಿಸಿದ 102 ವರ್ಷದ ವೃದ್ಧ: ವಿಡಿಯೋ ವೈರಲ್
102 ವರ್ಷದ ವೃದ್ಧ

ಥೈಲ್ಯಾಂಡ್​ನ 102 ವರ್ಷದ ವೃದ್ಧ ಓಟಗಾರ 27 ಸೆಕೆಂಡ್​​ನಲ್ಲಿ 100 ಮೀಟರ್​ ಓಟ ಪೂರ್ಣಗೊಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸವಾಂಗ್ ಜನಪ್ರಮ್ ಎನ್ನುವ ವೃದ್ಧ ಈ ಸಾಧನೆ  ಮಾಡಿದ್ದಾರೆ. 

TV9kannada Web Team

| Edited By: Pavitra Bhat Jigalemane

Mar 05, 2022 | 12:44 PM

ಥೈಲ್ಯಾಂಡ್​ (Thailand) ನ 102 ವರ್ಷದ ವೃದ್ಧ ಓಟಗಾರ 27 ಸೆಕೆಂಡ್​​ನಲ್ಲಿ 100 ಮೀಟರ್​ ಓಟ ಪೂರ್ಣಗೊಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಸವಾಂಗ್ ಜನಪ್ರಮ್ (Sawang Janpram) ಎನ್ನುವ ವೃದ್ಧ ಈ ಸಾಧನೆ  ಮಾಡಿದ್ದಾರೆ.  ಇವರನ್ನು  ಆಗ್ನೇಯ ಏಷ್ಯಾದ  ಅತ್ಯಂತ ಹಳೆಯ ಓಟಗಾರ ಎಂತಲೇ ಹೇಳುತ್ತಾರೆ.  ಕಳೆದ ವಾರಾಂತ್ಯದಲ್ಲಿ ಥೈಲ್ಯಾಂಡ್‌ನ ನೈಋತ್ಯ ಸಮುತ್ ಸಾಂಗ್‌ಖ್ರಾಮ್ ಪ್ರಾಂತ್ಯದಲ್ಲಿ ನಡೆದ ಚಾಂಪಿಯನ್‌ಶಿಪ್‌ನ 26 ನೇ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ್ದಾರೆ.  ಸವಾಂಗ್ ತಮ್ಮ 100-105 ವರ್ಷಗಳ  ಅವಧಿಯಲ್ಲಿ, ಓಟದ ಎಲ್ಲಾ ವಿಭಾಗಗಳಲ್ಲೂ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ ಎಂದು ವರದಿ ತಿಳಿಸಿದೆ.

102ನೇ ವರ್ಷದಲ್ಲಿಯೂ ಕುಗ್ಗದ ಆತ್ಮವಿಶ್ವಾಸ, ಧೈರ್ಯವನ್ನು ಕಂಡು ಜಗತ್ತಿನಾದ್ಯಂತ ನೆಟ್ಟಿಗರು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಈ ಹಿಂದೆ ಉಸೇನ್​ ಬೋಲ್ಟ್​ 100 ಮೀ ಓಟವನ್ನು 9.58 ಸೆಕೆಂಡ್​ಗಳಲ್ಲಿ ಪೂರ್ಣಗೊಳಿಸಿ ಸಾರ್ವಕಾಲಿಕ ದಾಖಲೆ  ನಿರ್ಮಿಸಿದ್ದರು. ಅವರ ಬಳಿಕ ಈಗ 102 ನೇ ವಯಸ್ಸಿನಲ್ಲಿ ಇದೇ ಮೊದಲ ಬಾರಿಗೆ ಸವಾಂಗ್​ 27. 08 ಸೆಕೆಂಡ್​ನಲ್ಲಿ 100 ಮೀಟರ್​ ಓಟ ಪೂರ್ಣಗೊಳಿಸಿ  ದಾಖಲೆ ನಿರ್ಮಿಸಿದ್ದಾರೆ.

ಸಾವಾಂಗ್​ ಪ್ರತಿದಿನ ತಮ್ಮ 70 ವರ್ಷದ ಮಗಳೊಂದಿಗೆ ರನ್ನಿಂಗ್ ಅಭ್ಯಾಸ ಮಾಡುತ್ತಾರಂತೆ. ಇದೇ ಇವರ ಸಾಧನೆಯ ಗುಟ್ಟು ಎನ್ನುತ್ತಾರೆ ಅವರ ಮಗಳು. ಸದ್ಯ ಇವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತಿನಾದ್ಯಂತ ವೈರಲ್ ಆಗಿದೆ. ಈ ಕುರಿತು ರಾಯಿಟರ್ಸ್​ ವಿಡಿಯೋ ಹಂಚಿಕೊಂಡಿದೆ.

ಇದನ್ನೂ ಓದಿ:

ಉಕ್ರೇನ್​ ಮೇಲಿನ ಯುದ್ಧ ಖಂಡಿಸಿ ನೇರ ಪ್ರಸಾರದಲ್ಲಿ ರಾಜೀನಾಮೆ ನೀಡಿದ ರಷ್ಯಾದ ಟಿವಿ ಚಾನೆಲ್​ ಸಿಬ್ಬಂದಿ ವರ್ಗ: ಪ್ರಸಾರ ಸ್ಥಗಿತ

Follow us on

Related Stories

Most Read Stories

Click on your DTH Provider to Add TV9 Kannada