Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ರೊಚ್ಚಿಗೆದ್ದ ಹೋರಿಯಿಂದ ಮಗನನ್ನು ರಕ್ಷಿಸಿದ ತಂದೆ; ಹೃದಯಸ್ಪರ್ಶಿ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?

ವೈರಲ್​ ಆದ ವೀಡಿಯೊ ಎರಡು ಲಕ್ಷಕ್ಕೂ ಹೆಚ್ಚು ವ್ಯೂವ್ಸ್​ ಪಡೆದಿದೆ. ಅನೇಕರು ಈ ವಿಡಿಯೋವನ್ನು ಲೈಕ್​ ಮಾಡಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಈ ವಿಡಿಯೋವನ್ನು ರೀ ಪೋಸ್ಟ್​ ಮಾಡಿದ್ದಾರೆ . ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಕಮೆಂಟ್​ ಮೂಲಕ ತಿಳಿಸಿದ್ದಾರೆ.

Viral Video: ರೊಚ್ಚಿಗೆದ್ದ ಹೋರಿಯಿಂದ ಮಗನನ್ನು ರಕ್ಷಿಸಿದ ತಂದೆ; ಹೃದಯಸ್ಪರ್ಶಿ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?
ರೊಚ್ಚಿಗೆದ್ದ ಹೋರಿಯಿಂದ ಮಗನನ್ನು ರಕ್ಷಿಸಿದ ತಂದೆ
Follow us
TV9 Web
| Updated By: preethi shettigar

Updated on: Mar 04, 2022 | 9:53 PM

ತಂದೆ ತನ್ನ ಮಕ್ಕಳನ್ನು ರಕ್ಷಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ(Social media) ವಿಡಿಯೋವೊಂದು ವೈರಲ್(Viral)​ ಆಗಿದೆ. ನೆಟ್ಟಿಗರು ಕೂಡ ಈ ವಿಡಿಯೋದಲ್ಲಿ ತಂದೆ ತನ್ನ ಮಗನ(Son) ಮೇಲೆ ವಹಿಸಿದ ಕಾಳಜಿಯನ್ನು ಕಂಡು ಮೆಚ್ಚಿಕೊಂಡಿದ್ದಾರೆ. ವೈರಲ್​ ಆದ ವಿಡಿಯೋದಲ್ಲಿ ಟೆಕ್ಸಸ್‌ನ ರೋಡಿಯೊದಲ್ಲಿ ತನ್ನ ಮಗನನ್ನು ರೊಚ್ಚಿಗೆದ್ದ ಹೋರಿಯಿಂದ ರಕ್ಷಿಸಲು ತಂದೆ (Father) ಅನುಸರಿಸಿದ ಮಾರ್ಗವನ್ನು ಕಾಣಬಹುದು.

ಕೋಡಿ ಹುಕ್ಸ್ ಎಂಬ ವ್ಯಕ್ತಿಯು, ತನ್ನ ತಂದೆ ರೊಚ್ಚಿಗೆದ್ದ ಹೋರಿಯಿಂದ ತನ್ನನ್ನು ರಕ್ಷಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿರುವ ಹುಕ್ಸ್​ ತನ್ನ ತಂದೆಯ ಕಾಳಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಕೋಡಿ ಹುಕ್ಸ್ ಕೌಬಾಯ್ ಆಗಿದ್ದು, ರೊಚ್ಚಿಗೆದ್ದ ಹೋರಿಯ ವಿಚಿತ್ರ ವರ್ತನೆಯಿಂದ ನೆಲದ ಮೇಲೆ ಪ್ರಜ್ಞಾಹೀನನಾಗಿ ಬಿಳುತ್ತಾನೆ. ಆಗ ಅವನ 40 ವರ್ಷದ ತಂದೆ ಲ್ಯಾಂಡಿಸ್ ಹುಕ್ಸ್ ದೌಡಾಯಿಸಿದ್ದು, ತನ್ನ 18 ವರ್ಷದ ಬುಲ್ ರೈಡರ್ ಮಗನನ್ನು ಉಳಿಸಲು ಆತನ ಮೇಲೆಯೇ ಮಲಗಿ ಹೋರಿ ದಾಳಿ ನಡೆಸದಂತೆ ರಕ್ಷಿಸುತ್ತಾರೆ.

ಇದು ಕೇವಲ ಬೀಳುವ ವಿಡಿಯೋವಲ್ಲ. ನನ್ನ ತಂದೆ ಲ್ಯಾಂಡಿಸ್ ಹುಕ್ಸ್ ಮತ್ತು ಇನ್ನಿತರರು ನನ್ನನ್ನು ರಕ್ಷಿಸಿದ ರೀತಿ ಅವರಿಗೆ ದೊಡ್ಡ ಧನ್ಯವಾದ ಎಂಬ ಶೀರ್ಷಿಕೆಯೊಂದಿಗೆ ಕೋಡಿ ಹುಕ್ಸ್ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ಏನೇ ಇರಲಿ, ನಾನು ಅವನಿಗೆ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಇದನ್ನು ಹೊರತು ಪಡಿಸಿ ಈ ಘಟನೆ ಕೌಬಾಯ್ ಜೀವನದ ಒಂದು ಭಾಗವಾಗಿದೆ. ಯಾರಾದರೂ ಕೆಳಗೆ ಬೀಳುತ್ತಾರೆ. ನೀವು ಅವರಿಗೆ ಸಹಾಯ ಮಾಡಬೇಕು. ಆದರೆ ನಾನು ಅಲ್ಲಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಲ್ಯಾಂಡಿಸ್ ಗುಡ್ ತನ್ನ ಮಗನ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ವೈರಲ್​ ಆದ ವೀಡಿಯೊ ಎರಡು ಲಕ್ಷಕ್ಕೂ ಹೆಚ್ಚು ವ್ಯೂವ್ಸ್​ ಪಡೆದಿದೆ. ಅನೇಕರು ಈ ವಿಡಿಯೋವನ್ನು ಲೈಕ್​ ಮಾಡಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಈ ವಿಡಿಯೋವನ್ನು ರೀ ಪೋಸ್ಟ್​ ಮಾಡಿದ್ದಾರೆ . ಮತ್ತೆ ಕೆಲವರು ತಮ್ಮ ಪ್ರತಿಕ್ರಿಯೆಯನ್ನು ಕಮೆಂಟ್​ ಮೂಲಕ ತಿಳಿಸಿದ್ದಾರೆ.

View this post on Instagram

A post shared by Cody Hooks (@cody__hooks)

ಅಪ್ಪ ಒಂದು ವಿಲಕ್ಷಣ ದಂತಕಥೆ. ನೀವು ಅದೃಷ್ಟವಂತ ಒಬ್ಬೊರು ಕಮೆಂಟ್​ ಮಾಡಿದರೆ, ಮತ್ತೊಬ್ಬರು ಒಳ್ಳೆಯ ಅಪ್ಪಂದಿರು ಮತ್ತು ಒಳ್ಳೆಯ ಪುರುಷರು ಇನ್ನೂ ಇದ್ದಾರೆ ಎಂಬುದನ್ನು ನಿಮ್ಮ ತಂದೆ ನೆನಪಿಸುತ್ತಾರೆ ಎಂದು ಕಮೆಂಟ್​ ಮಾಡಿದ್ದಾರೆ. ಅದು ಪ್ರೀತಿ, ಅದು ಶಕ್ತಿ, ಅದು ನಿಜವಾದ ಮನುಷ್ಯತ್ವ ದೇವರು ನಿಮ್ಮಿಬ್ಬರನ್ನೂ ಆಶೀರ್ವದಿಸಲಿ ಎಂದು ಇನ್ನೋಬ್ಬರು ಕಮೆಂಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಕಚ್ಚಾ ಬಾದಾಮ್​ ಬಳಿಕ ವೈರಲ್​ ಆಗುತ್ತಿದೆ ಪೇರಳೆ ಹಣ್ಣಿನ ವ್ಯಾಪಾರಿಯ ಹಾಡು: ಇಲ್ಲಿದೆ ವಿಡಿಯೋ

ಹೂವುಗಳಿಂದ ತುಂಬಿದ ಗಾಡಿಯಲ್ಲಿ ಗ್ರ್ಯಾಂಡ್​ ಎಂಟ್ರಿ ಪಡೆದ ವಧು: ವಿಡಿಯೋ ವೈರಲ್​

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್