ಹೂವುಗಳಿಂದ ತುಂಬಿದ ಗಾಡಿಯಲ್ಲಿ ಗ್ರ್ಯಾಂಡ್​ ಎಂಟ್ರಿ ಪಡೆದ ವಧು: ವಿಡಿಯೋ ವೈರಲ್​

ಹೂವುಗಳಿಂದ ತುಂಬಿದ ಗಾಡಿಯಲ್ಲಿ ಗ್ರ್ಯಾಂಡ್​ ಎಂಟ್ರಿ ಪಡೆದ ವಧು: ವಿಡಿಯೋ ವೈರಲ್​
ವಧು

ಕೆಂಪು ಲೆಹಂಗಾ ಧರಿಸಿರುವ ವಧು ಸಂಪೂರ್ಣ ಹೂವಿನಿಂದ ಅಲಂಕೃತವಾದ ಬಿಳಿಯ ಗಾಡಿಯಲ್ಲಿ ಅದ್ದೂರಿಯಾಗಿ ಬರುತ್ತಿರುವುದನ್ನು ಕಾಣಬಹುದು. ಈ ವೇಳೆ ವಧು ಕುಳಿತಲ್ಲೇ ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ಧಾರೆ.

TV9kannada Web Team

| Edited By: Pavitra Bhat Jigalemane

Mar 03, 2022 | 1:26 PM

ಮದುವೆ (Wedding) ಪ್ರತೀ ಹುಡುಗಿಯ ಕನಸು ನನಸಾಗುವ ದಿನ. ಮೆಚ್ಚಿದ ಹುಡಗನನ್ನು ವರಿಸಿ ಹೊಸ ಜೀವನಕ್ಕೆ ತೆರೆದುಕೊಳ್ಳುವ ಸಂದರ್ಭ. ಭಾರತಿಯ ಮದುವೆಗಳು ಸದಾ ಹೊಸತನದಿಂದ ಕೂಡಿರುತ್ತದೆ. ವಿಭಿನ್ನ ಕಲ್ಪನೆಗಳ ಮೂಲಕ ವಧು ವರರನ್ನು ಮದುವೆಯ ಮಂಟಪಕ್ಕೆ ಕರೆತರುವುದು ಈಗಿನ ಟ್ರೆಂಡ್​ ಆಗಿದೆ, ಈ ಹಿಂದೆ ಅದ್ದೂರಿ ಪಲ್ಲಕ್ಕಿಯ ಮೇಲೆ ವಧುವನ್ನು ಕರೆದುಕೊಂಡು ಬಂದಿರುವ ವಿಡಿಯೋ ವೈರಲ್​ ಆಗಿತ್ತು. ಇದೀಗ ಹೂವಿನಿಂದ ತುಂಬಿದ ಗಾಡಿಯಲ್ಲಿ ವಧುವನ್ನು ಕೂರಿಸಿಕೊಂಡು ಬರುತ್ತಿದ್ದು, ಖುಷಿಯಿಂದ ವಧು ಕುಳಿತಲ್ಲೇ ಡ್ಯಾನ್ಸ್​ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಧುವಿನ ಡ್ಯಾನ್ಸ್​ ವಿಡಿಯೋ ವೈರಲ್​ ಆಗಿದೆ. weddingsfever ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ.

ವಿಡಿಯೋದಲ್ಲಿ ಕೆಂಪು ಲೆಹೆಂಗಾ ಧರಿಸಿರುವ ವಧು ಸಂಪೂರ್ಣ ಹೂವಿನಿಂದ ಅಲಂಕೃತವಾದ ಬಿಳಿಯ ಗಾಡಿಯಲ್ಲಿ ಅದ್ದೂರಿಯಾಗಿ ಬರುತ್ತಿರುವುದನ್ನು ಕಾಣಬಹುದು. ಈ ವೇಳೆ ವಧು ಕುಳಿತಲ್ಲೇ ಸಖತ್​ ಆಗಿ ಡ್ಯಾನ್ಸ್​​ ಮಾಡಿದ್ಧಾರೆ. ಇದು ನೋಡುಗರನ್ನು ಸೆಳೆದಿದ್ದು ವಿಡಿಯೋ ಸಖತ್​ ವೈರಲ್​ ಆಗಿದೆ. ಬಾಲಿವುಡ್​ನ​ ಆಜ್​ಕಲ್​ ಚಿತ್ರದ ಥೋಡಾ ಥೋಡಾ ಪ್ಯಾರ್​ ಹಾಡಿಗೆ ಸ್ಟೆಪ್​ ಹಾಕಿದ್ದಾಳೆ.  ಆಜ್​ಕಲ್​ ಚಿತ್ರದಲ್ಲಿ ಸಲ್ಮಾನ್​ ಖಾನ್​ ಮತ್ತು ಜಿಸೆಲ್ಲಿ ಮೊಂಟೆರೊ ಕಾಣಿಸಕೊಂಡಿದ್ದಾರೆ. ಹಾಡನ್ನು  ಸುನಿಧಿ ಚೌವಾಣ್​ ಹಾಡಿದ್ದಾರೆ.

ಸದ್ಯ ವಧುವಿನ ಬಿಂದಾಸ್​ ಡ್ಯಾನ್ಸ್​​ ನೆಟ್ಟಿಗರ ಮನ ಸೆಳೆದಿದೆ.  ವಧುವಿನ ಗ್ರ್ಯಾಂಡ್​ ಎಂಟ್ರಿ ನೋಡಿ ಎಲ್ಲರೂ ದಂಗಾಗಿದ್ದಾರೆ. ವಿಡಿಯೋದಲ್ಲಿ ವಧುವಿನ ಜತೆಗೆ ಆಕೆಯ ಸ್ನೇಹಿತರು, ಸಂಬಂಧಿಗಳೂ ಕೂಡ ಡ್ಯಾನ್ಸ್​ ಮಾಡುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ:

90ನೇ ವರ್ಷದ ಬರ್ತಡೇ ದಿನ ಬೆಸ್ಟ್​ ಫ್ರೆಂಡ್​ ನೋಡಿ ಅಚ್ಚರಿಗೊಂಡ ವೃದ್ಧೆ: ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada