90ನೇ ವರ್ಷದ ಬರ್ತಡೇ ದಿನ ಬೆಸ್ಟ್​ ಫ್ರೆಂಡ್​ ನೋಡಿ ಅಚ್ಚರಿಗೊಂಡ ವೃದ್ಧೆ: ವಿಡಿಯೋ ವೈರಲ್​

90ನೇ ವರ್ಷದ ಬರ್ತಡೇ ದಿನ ಬೆಸ್ಟ್​ ಫ್ರೆಂಡ್​ ನೋಡಿ ಅಚ್ಚರಿಗೊಂಡ ವೃದ್ಧೆ: ವಿಡಿಯೋ ವೈರಲ್​
90 ವರ್ಷದ ವೃದ್ಧೆ

90 ವರ್ಷದ ವೃದ್ಧೆಯೊಬ್ಬರ ಬರ್ತ್​ ಡೇ  ದಿನ ಅವರ ಬೆಸ್ಟ್​ ಫ್ರೆಂಡ್​​ ಬಂದು ಸರ್ಪೈಸ್​ ನೀಡಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್​ ನಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ.

TV9kannada Web Team

| Edited By: Pavitra Bhat Jigalemane

Mar 03, 2022 | 9:39 AM

ಬರ್ತ್​ ಡೇ (Birthday) ಎಲ್ಲರಿಗೂ ವಿಶೇಷ ದಿನ. ಅದರಲ್ಲೂ ಬೆಸ್ಟ್​ ಫ್ರೆಂಡ್ (Best Friend)​ ಜತೆ ಬರ್ತ ಡೇ ಆಚರಿಸುವುದು ಎಂದರೆ ಬೇರೆಯದೇ  ರೀತಿಯ ಖುಷಿ.  ಹೀಗಿದ್ದಾಗಿಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 90 ವರ್ಷದ ವೃದ್ಧೆಯೊಬ್ಬರ ಬರ್ತ್​ ಡೇ  ದಿನ ಅವರ ಬೆಸ್ಟ್​ ಫ್ರೆಂಡ್​​ ಬಂದು ಸರ್ಪೈಸ್​ (Surprise) ನೀಡಿದ್ದಾರೆ. ಈ ವಿಡಿಯೋ ಇನ್ಸ್ಟಾಗ್ರಾಮ್​ ನಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ಗುಡ್​ ನ್ಯೂಸ್​ ಮೂವ್​ಮೆಂಟ್​ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋವನ್ನು ಹಂಚಿಕೊಂಡಿದ್ದು ವಿಡಿಯೋ 8 ಮಿಲಿಯನ್​ಗೂ ಹೆಚ್ಚು ವೀಕ್ಷಣೆ ಪಡೆದಿದೆ.

37 ಸೆಕೆಂಡುಗಳ ವಿಡಿಯೋದಲ್ಲಿ ವೃದ್ಧೆ ರೆಸ್ಟೋರೆಂಟ್​ನಲ್ಲಿ ತಮ್ಮ ಕುಟುಂಬದೊಂದಿಗೆ ಕುಳಿತಿರುತ್ತಾರೆ. ಆಗ ಅವರ ಬೆಸ್ಟ್​ ಫ್ರೆಂಡ್​ ಹಿಂದಿನಿಂದ ಬಂದು ಮಾತನಾಡಿಸುತ್ತಾರೆ. ಇದರಿಂದ ಖುಷಿಗೊಂಡ ವೃದ್ಧೆಯ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದವು. ಈ ಹೃದಯಸ್ಪರ್ಶಿ ವಿಡಿಯೋ ನೋಡಿ ಬಳಕೆದಾರರು ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಭೌತಿಕವಾಗಿ ಸ್ನೇಹಿತರನ್ನು ಭೇಟಿಯಾಗುವ ಖುಷಿಯೇ ಅದ್ಭುತ ಎಂದು ಕಾಮೆಂಟ್​ ಮಾಡಿದ್ದಾರೆ.

ಸದ್ಯ ವೈರಲ್​ ಆದ ವಿಡಿಯೋ ಎಲ್ಲರ ಮನಗೆದ್ದಿದೆ, ಗುಡ್​ ನ್ಯೂಸ್​ ಮೂವ್​ಮೆಂಟ್​​ ಹಂಚಿಕೊಂಡ ವಿಡಿಯೋಕ್ಕೆ ವೃದ್ಧೆಯ 90 ನೇ ವರ್ಷದ ಹುಟ್ಟುಹಬ್ಬಕೆ ಅವರ ಬೆಸ್ಟ್​ ಫ್ರೆಂಡ್​ ಬಂದು ಸರ್ಪೈಸ್​ ನೀಡಿದ್ದಾರೆ ಎಂದು ಕ್ಯಾಪ್ಷನ್​ ನೀಡಲಾಗಿದ್ದು, 10 ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Photo: ಮಿಜೋರಾಂನಲ್ಲಿ ಜನ ಹೇಗೆ ಟ್ರಾಫಿಕ್ ರೂಲ್ಸ್​ ಅನುಸರಿಸುತ್ತಾರೆ ಗೊತ್ತಾ?; ಆನಂದ್ ಮಹೀಂದ್ರಾ ಹಂಚಿಕೊಂಡ ಫೋಟೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada