ಸಕಲೇಶಪುರದ ಮತ್ತೊಂದು ಗ್ರಾಮದಲಿ ಕಾಣಿಸಿಕೊಂಡಿತು ಒಂಟಿ ಸಲಗ! ಬುಧವಾರ ಕಾಣಿಸಿದ್ದು ಇದೇ ಸಲಗವೇ?
ಪಾಪ, ದೈತ್ಯದೇಹಿ ಆನೆ ಹಸಿದಂತೆ ಕಾಣುತ್ತೆ ಮಾರಾಯ್ರೇ. ಆದರೆ ಬಾಳೆಗೊನೆಗಳನ್ನೇ ಅನಾಮತ್ತಾಗಿ ನುಂಗಿ ಜೀರ್ಣಿಸಿಕೊಳ್ಳುವ ಆನೆಯ ಬೃಹತ್ ಹೊಟ್ಟೆಗೆ ಒಂದೆರಡು ಬಾಳೆಹಣ್ಣು ಯಾತಕ್ಕಾದೀತು?
ಸಕಲೇಶಪುರ ತಾಲ್ಲೂಕಿನಲ್ಲಿರುವ ಹಳ್ಳಿಗಳಿಗೆ ಕಾಡಾನೆಗಳು (wild elephants) ಲಗ್ಗೆಯಿಡುವುದು ಮುಂದುವರಿದಿದೆ. ಈ ವಾರದಲ್ಲಿ ಇದು ಮೂರನೇ ಬಾರಿ ನಾವು ಕಾಡಾನೆ ಈ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ವರದಿ ಮಾಡುತ್ತಿರುವುದು. ಈ ಸಲ ಸಲಗವೊಂದು ಪ್ರತ್ಯಕ್ಷ ಅಗಿರೋದು ಸಕಲೇಶಪುರ ತಾಲ್ಲೂಕಿನಲ್ಲಿ ಮಠಸಾಗರ (Mathasagara) ಹೆಸರಿನ ಒಂದು ಪುಟ್ಟ ಗ್ರಾಮದಲ್ಲಿ. ನಮ್ಮ ಅನುಮಾನವೇನೆಂದರೆ, ಮೊದಲ ಬಾರಿಗೆ ಶಿರಾಡಿ ಘಾಟ್ (Shiradi Ghat) ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಂತೆ ಇರುವ ಅರಣ್ಯದ ಅಂಚಿಗೆ ಬಂದು ರಸ್ತೆ ಮೇಲೆ ಸಂಚರಿಸುತ್ತಿದ್ದ ವಾಹನಗಳನ್ನು ಗುರಾಯಿಸುತ್ತಿದ್ದ ಸಲಗವೇ ನಂತರ ಎರಡೆರಡು ಕಡೆ ಕಾಣಿಸಿಕೊಂಡಿದೆ ಅನ್ನೋದು. ಎರಡನೇ ಸಲ ಅದು ಇದೇ ತಾಲ್ಲೂಕಿನ ಮತ್ತೊಂದು ಗ್ರಾಮದಲ್ಲಿ (ಹಲಸುಲಿಗೆ) ಕಾಣಿಸಿಕೊಂಡ ವಿಡಿಯೋವನ್ನು ನಾವು ನಿಮಗೆ ತೋರಿಸಿದ್ದೇವೆ. ಅದೇ ಸಲಗ ಈಗ ಮಠಸಾಗರ ಕಾಣಿಸಿಕೊಂಡಿರಬಹುದು ಮಾರಾಯ್ರೇ.
ಬುಧವಾರದಂದು ಸಲಗ ಹಲಸುಲಿಗೆ ಪ್ರವೇಶಿಸಿದಾಗ ಅಲ್ಲಿನ ಜನರು ಹೆದರಿ ತಮ್ಮ ತಮ್ಮ ಮನೆಗಳ ಮಾಳಿಗೆ ಹತ್ತಿ ಕುಳಿತಿದ್ದರು. ಅದು ಅಲ್ಲಿಂದ ನಿರ್ಗಮಿಸಿದ ನಂತರವೇ ಕೆಳಗಿಳಿದು ಬಂದಿದ್ದರು. ಮಠಸಾಗರ ಗ್ರಾಮದಲ್ಲೂ ಅದೇ ಆಗಿದೆ, ಜನ ಮಾಳಿಗೆಗಳನ್ನು ಹತ್ತಿದ್ದಾರೆ. ಆದರೆ, ಒಂದಷ್ಟು ಜನ ಧೈರ್ಯ ಮಾಡಿ ಮೇಲಿಂದಲೇ ಬಾಳೆಹಣ್ಣುಗಳನ್ನು ಅದರತ್ತ ಎಸೆಯುತ್ತಿದ್ದಾರೆ.
ಪಾಪ, ದೈತ್ಯದೇಹಿ ಆನೆ ಹಸಿದಂತೆ ಕಾಣುತ್ತೆ ಮಾರಾಯ್ರೇ. ಆದರೆ ಬಾಳೆಗೊನೆಗಳನ್ನೇ ಅನಾಮತ್ತಾಗಿ ನುಂಗಿ ಜೀರ್ಣಿಸಿಕೊಳ್ಳುವ ಆನೆಯ ಬೃಹತ್ ಹೊಟ್ಟೆಗೆ ಒಂದೆರಡು ಬಾಳೆಹಣ್ಣು ಯಾತಕ್ಕಾದೀತು? ಅದಕ್ಕಿಂತ ಜಾಸ್ತಿ ಸಿಗಲಾರವು ಅಂತ ಖಾತ್ರಿಯಾದ ಬಳಿಕ ಸಲಗ ಕಾಡಿನ ದಾರಿ ಹಿಡಿಯುತ್ತದೆ. ಊರಿಂದ ಮರೆಯಾಗುವ ಮೊದಲು ಒಂದು ಗಿಡವನ್ನು ಕಿತ್ತುವ ಪ್ರಯತ್ನ ಮಾಡುತ್ತದೆ. ವಿಡಿಯೋನಲ್ಲಿ ನಿಮಗೆ ಅದು ಕಾಣುತ್ತದೆ.
ಇದನ್ನೂ ಓದಿ: ಮಂಗಳವಾರ ಸಕಲೇಶಪುರ ಕಾಡಂಚಿನಲ್ಲಿ ಕಂಡ ಒಂಟಿ ಸಲಗವೇ ಬುಧವಾರ ಊರು ಪ್ರವೇಶಿಸಿತೇ?
ಇದನ್ನೂ ಓದಿ: ಸಕಲೇಶಪುರ ಕಾಡಂಚಿನಲ್ಲಿ ನಿಂತು ರಸ್ತೆ ಮೇಲೆ ಸಂಚರಿಸುವ ವಾಹನ ಮತ್ತು ಜನರನ್ನು ಗುರಾಯಿಸುತ್ತಿದೆ ಒಂಟಿ ಸಲಗ!