ಮಾಧ್ಯಮದವರ ಪ್ರಶ್ನೆಗಳಿಗೆ ಸಿಡಿಮಿಡಿಗೊಳ್ಳುತ್ತಿದ್ದಾರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ!
ಅಲ್ಪಸಂಖ್ಯಾತರು ನಡೆಸುವ ಶಾಲೆಗಳಲ್ಲಿ ಓದುವ ಮಕ್ಕಳು ಅಲ್ಲಿ ಹಿಜಾಬ್ ನಿರ್ಬಂಧ ಇಲ್ಲದಿರುವುದರಿಂದ ಅದನ್ನು ಧರಿಸಿಯೇ ಹೋಗಿರುತ್ತಾರೆ ಆದರೆ ಪರೀಕ್ಷಾ ಕೇಂದ್ರ ಬೇರೆಡೆ ಇರುತ್ತದೆ, ಅಲ್ಲಿ ಮಕ್ಕಳಿಗೆ ಹಿಜಾಬ್ ಧರಿಸಿ ಹೋಗುವ ಅವಕಾಶ ಇರೋದಿಲ್ಲ,
ಸಿದ್ದರಾಮನ ಹುಂಡಿಯ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಶುಕ್ರವಾರ ಮನದಣಿಯ ಕುಣಿದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಶನಿವಾರ ಮೈಸೂರಲ್ಲಿ ಪತ್ರಕರ್ತರ (journalists) ಮೇಲೆ ಸುಖಾಸುಮ್ಮನೆ ರೇಗತೊಡಗಿದರು. ಸ್ವಾಮೀಜಿಗಳು (Swamiji) ತಲೆ ಮೇಲೆ ವಸ್ತ್ರ ಹೊದೆಯುವ ಬಗ್ಗೆ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಸಿದ್ದರಾಮಯ್ಯನವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಸಿಡಿಮಿಡಿಗೊಂಡರು. ಹಿಜಾಬ್ ಬಗ್ಗೆ ಕೋರ್ಟ್ ತೀರ್ಪು ನೀಡಿಯಾಗಿದೆ, ಅದಕ್ಕೆ ಎಲ್ಲರೂ ಗೌರವ ನೀಡಬೇಕು ಎಂದ ಸಿದ್ದರಾಮಯ್ಯನವರು ತಾವು ಸದನದಲ್ಲಿ ಪರೀಕ್ಷೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂಬ ಸಲಹೆ ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳಿದರು.
ಅಲ್ಪಸಂಖ್ಯಾತರು ನಡೆಸುವ ಶಾಲೆಗಳಲ್ಲಿ ಓದುವ ಮಕ್ಕಳು ಅಲ್ಲಿ ಹಿಜಾಬ್ ನಿರ್ಬಂಧ ಇಲ್ಲದಿರುವುದರಿಂದ ಅದನ್ನು ಧರಿಸಿಯೇ ಹೋಗಿರುತ್ತಾರೆ ಆದರೆ ಪರೀಕ್ಷಾ ಕೇಂದ್ರ ಬೇರೆಡೆ ಇರುತ್ತದೆ, ಅಲ್ಲಿ ಮಕ್ಕಳಿಗೆ ಹಿಜಾಬ್ ಧರಿಸಿ ಹೋಗುವ ಅವಕಾಶ ಇರೋದಿಲ್ಲ, ಹಾಗಾಗಿ ಪರೀಕ್ಷೆ ಸಮಯದಲ್ಲಿ ಅವರಿಗೆ ಯೂನಿಫಾರ್ಮ್ ಬಣ್ಣದ ಹಿಜಾಬ್ ಧರಿಸಲು ಅವಕಾಶ ಕೊಡಿ ಅಂತ ಹೇಳಿರುವುದಾಗಿ ಸಿದ್ದರಾಮಯ್ಯ ಹೇಳಿದರು.
ಆಗ ಪತ್ರಕರ್ತರೊಬ್ಬರು ಸಮವಸ್ತ್ರದ ಬಗ್ಗೆ ಏನೋ ಕೇಳಲು ಮುಂದಾದಾಗ ಸಿದ್ದರಾಮಯ್ಯ ತಾಳ್ಮೆ ಕಳೆದುಕೊಂಡು ಏಯ್ ನೀವೇನು ಆರ್ ಎಸ್ ಎಸ್ ನವರೇನ್ರೀ ಎಂದು ಕೇಳಿ ನಾವು ಯಾವತ್ತೂ ಸಮವಸ್ತ್ರವನ್ನು ವಿರೋಧಿಸಿಲ್ಲ. ನಾನು ಅಶ್ವಥ ನಾರಾಯಣ ಮತ್ತು ಬಿಸಿ ನಾಗೇಶ ಅವರಿಗೆ ಯೂನಿಫಾರ್ಮ ಕಲರ್ ನ ದುಪ್ಪಟ್ಟಾ ಧರಿಸುವುದಕ್ಕೆ ಅವಕಾಶ ಕೊಡಿ ಅಂತ ಹೇಳಿದ್ದು. ಅದನ್ನು ಹೇಳಿರುವುದೇ ನಾನು, ನನಗೇನೇ ಪ್ರತಿಕ್ರಿಯೆ ನೀಡಿ ಅಂತೀರಲ್ರೀ, ಹೋಗಿ ಸರ್ಕಾರವನ್ನು ಕೇಳಿ ಎಂದು ಕೋಪದಲ್ಲಿ ಹೇಳುತ್ತಾರೆ.
ಇದನ್ನೂ ಓದಿ: ಮಠಾಧೀಶರ ಅಸ್ಮಿತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಒಬ್ಬ ಮಾನಸಿಕ ರೋಗಿ: ಪ್ರಣವಾನಂದ ಸ್ವಾಮಿಜಿ ಆಕ್ರೋಶ