ಫುಟ್​ಪಾತ್​ ಗುಂಡಿಗೆ ಬಿದ್ದು ಖ್ಯಾತ ಗಾಯಕ ಅಜಯ್​ ವಾರಿಯರ್​ಗೆ ಗಾಯ; ಬಿಬಿಎಂಪಿ ವಿರುದ್ಧ ಅಸಮಾಧಾನ

Singer Ajay Warrier: ಗಾಯಕ ಅಜಯ್​ ವಾರಿಯರ್ ಅವರು ಬೆಂಗಳೂರಿನ ಫುಟ್​ಪಾತ್​ ಗುಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷದಿಂದ ಈ ಅವಘಡ ಆಗಿದೆ.

ಫುಟ್​ಪಾತ್​ ಗುಂಡಿಗೆ ಬಿದ್ದು ಖ್ಯಾತ ಗಾಯಕ ಅಜಯ್​ ವಾರಿಯರ್​ಗೆ ಗಾಯ; ಬಿಬಿಎಂಪಿ ವಿರುದ್ಧ ಅಸಮಾಧಾನ
ಅಜಯ್ ವಾರಿಯರ್
Follow us
TV9 Web
| Updated By: ಮದನ್​ ಕುಮಾರ್​

Updated on:May 11, 2022 | 10:18 AM

ಜೋರಾಗಿ ಮಳೆ ಬಂದರೆ ಬೆಂಗಳೂರಿನ ಸ್ವರೂಪವೇ ಬದಲಾಗಿಬಿಡುತ್ತದೆ. ಅನೇಕ ರಸ್ತೆಗಳು ಜನರ ಜೀವ ಬಲಿ ಪಡೆಯುವ ಅಪಾಯಕಾರಿ ಸ್ಥಳಗಳಾಗುತ್ತವೆ. ಕಂಡಕಂಡಲ್ಲಿ ಎದುರಾಗುವ ಗುಂಡಿಗಳಿಂದ ತೊಂದರೆಗೆ ಒಳಗಾದವರ ಸಂಖ್ಯೆ ದೊಡ್ಡದಿದೆ. ಕನ್ನಡದ ಖ್ಯಾತ ಗಾಯಕ ಅಜಯ್ ವಾರಿಯರ್​ ಅವರು ಕೂಡ ಇದೇ ರೀತಿ ಈಗ ತೊಂದರೆಗೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ಡ್ರೈನ್​ ಹೋಲ್​ಗೆ ಬಿದ್ದಿರುವ ಅವರು ಪೆಟ್ಟು ಮಾಡಿಕೊಂಡಿದ್ದಾರೆ. ಬಿಬಿಎಂಪಿ (BBMP) ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನೇಕ ಕಡೆಗಳಲ್ಲಿ ಫುಟ್​ಪಾತ್​ಗಳು ಓಪನ್​ ಆಗಿವೆ. ಮಳೆ ಬಂದಾಗ ನೀರು ತುಂಬಿಕೊಂಡರೆ ಈ ಫುಟ್​ಪಾತ್​ ಗುಂಡಿಗಳು ಕಾಣಿಸುವುದೇ ಇಲ್ಲ. ಫುಟ್​ಪಾತ್​ ಮೇಲೆ ನಡೆದುಹೋಗುವವರಿಗೆ ಇದರಿಂದ ಅಪಾಯ ಗ್ಯಾರಂಟಿ. ಗಾಯಕ ಅಜಯ್​ ವಾರಿಯರ್ (Singer Ajay Warrier) ಅವರು ಈ ಬಗ್ಗೆ ಫೇಸ್​ಬುಕ್​ ಮೂಲಕ ಘಟನೆಯ ವಿವರ ನೀಡಿದ್ದಾರೆ. ಭಾನುವಾರ (ಮೇ 8) ಸುರಿದ ಭಾರಿ ಮಳೆಯಿಂದ (Bengaluru Rain) ಆದ ಅನಾಹುತವನ್ನು ಅವರು ಜನರಿಗೆ ತಿಳಿಸಿದ್ದಾರೆ. ಬೆಂಗಳೂರಿನ ಫುಟ್​ಪಾತ್​ಗಳ ದುಸ್ಥಿತಿಯನ್ನು ಅವರು ಫೋಟೋಗಳ ಸಮೇತ ವಿವರಿಸಿದ್ದಾರೆ. ಡ್ರೇನ್​ ಹೋಲ್​ಗೆ ಬಿದ್ದ ಅವರ ಕಾಲಿಗೆ ಗಾಯ ಆಗಿದೆ. ಅಪಾಯಕಾರಿ ಘಟನೆಯಿಂದ ಅವರು ಪಾರಾಗಿದ್ದಾರೆ ಎಂಬುದಷ್ಟೇ ಸಮಾಧಾನ.

‘ಬೆಂಗಳೂರಿನಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿತ್ತು. ಕೇರಳಕ್ಕೆ ತೆರಳಬೇಕಿದ್ದ ನಾನು ರೈಲ್ವೇ ನಿಲ್ದಾಣದ ಕಡೆಗೆ ಹೊರಟಿದ್ದೆ. ಮಗಳಿಗೆ ಹುಟ್ಟುಹಬ್ಬದ ದಿನ ಸರ್ಪ್ರೈಸ್​ ನೀಡಲು ಪ್ಲ್ಯಾನ್​ ಮಾಡಿದ್ದೆ. ಓಲಾ/ಉಬರ್​ ಇಲ್ಲದ ಕಾರಣ ಮುಖ್ಯ ರಸ್ತೆಯ ಕಡೆಗೆ ನಡೆದುಹೋಗಲು ನಿರ್ಧರಿಸಿದೆ. ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದರಿಂದ ನಾನು ಫುಟ್​ಪಾತ್​ ಮೇಲೆ ಹೋದೆ. ಕೆಲವೇ ಹೆಜ್ಜೆ ನಡೆದು ಸಾಗಿದ ಬಳಿಕ ನಿಯಂತ್ರಣ ತಪ್ಪಿ, ಗುಂಡಿ ಒಳಗೆ ಬಿದ್ದೆ. ಏನೆಂದು ತಿಳಿಯುವುದರೊಳಗೆ ಚರಂಡಿ ಹೋಲ್​ ಒಳಗೆ ಹೋದೆ. ನನ್ನ ಎದೆಮಟ್ಟದ ವರೆಗೂ ನೀರು ಇತ್ತು. ನಾನು ಹೇಗೋ ಬಚಾವ್​ ಆದೆ. ಆದರೆ ಕಾಲಿಗೆ ಪೆಟ್ಟಾಗಿದೆ’ ಎಂದು ಅಜಯ್​ ವಾರಿಯರ್ ಬರೆದುಕೊಂಡಿದ್ದಾರೆ.

‘ಫುಟ್​ಪಾತ್​ ಗುಂಡಿ ಮುಚ್ಚದೇ ಇರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾನು ಕಾಲಿಗೆ ಹೊಲಿಗೆ ಹಾಕಿಸಿಕೊಳ್ಳಬೇಕಾಯಿತು. ಅನೇಕ ಮ್ಯೂಸಿಕ್​ ಕಾರ್ಯಕ್ರಮಗಳನ್ನು ಬಿಡಬೇಕಾಯಿತು. ಇದಕ್ಕೆಲ್ಲ ಯಾರನ್ನು ದೂಷಿಸುವುದು? ನನ್ನನ್ನೇ! ಯಾಕೆಂದರೆ ನಾನು ಫುಟ್​ಪಾತ್​ನಲ್ಲಿ ನಡೆಯುವ ಬದಲು ರಸ್ತೆಯಲ್ಲಿ ನಿಂತಿದ್ದ ನೀರಿನಲ್ಲಿ ಈಜಿಕೊಂಡ ಹೋಗಬೇಕಿತ್ತು. ಅಧಿಕಾರಿಗಳಿಗೆ ಧನ್ಯವಾದಗಳು. ಜನರ ಹಿತದೃಷ್ಟಿಯಿಂದ ಈ ಸಂದೇಶವನ್ನು ನಾನು ನೀಡುತ್ತಿದ್ದೇನೆ. ಫುಟ್​ಪಾತ್​ ಗುಂಡಿಗಳನ್ನು ಮುಚ್ಚದಿರುವ ಕಾರಣ ಈ ರೀತಿ ಯಾರಿಗೆ ಬೇಕಾದರೂ ಅಪಾಯ ಆಗಬಹುದು. ಚಿಕ್ಕ ಮಕ್ಕಳು ಈ ರೀತಿ ಬಿದ್ದರೆ ಏನು ಗತಿ? ನಾನು ಕಾನೂನು ಪಾಲಿಸುವ ಮತ್ತು ತೆರಿಗೆ ಕಟ್ಟುವ ಬೆಂಗಳೂರಿನ ಪ್ರಜೆ. ಈ ನಗರದ ಜನರಿಗೆ ಸುರಕ್ಷಿತವಾದ ರಸ್ತೆ ಮತ್ತು ಫುಟ್​ಪಾತ್​ಗಳನ್ನು ನೀಡಿ ಎಂದು ಒತ್ತಾಯಿಸಿ ಬಿಬಿಎಂಬಿ ಅಧಿಕಾರಿಗಳಿಗೆ ಇದು ನನ್ನ ಬಹಿರಂಗ ಪತ್ರ. ಕಾಳಜಿ ವಹಿಸಿಕೊಳ್ಳಿ ಬೆಂಗಳೂರಿಗರೇ.. ನಮ್ಮ ಪ್ರಾಣ ಕೂಡ ಮುಖ್ಯ’ ಎಂದು ಅಜಯ್​ ವಾರಿಯರ್​​ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್​​ ಮಾಡಿದ್ದಾರೆ.

ಇದನ್ನೂ ಓದಿ
Image
ಕಿರುತೆರೆ ನಟಿ ಸುನೇತ್ರಾ ಅಪಘಾತಕ್ಕೆ ಒಳಗಾದ ಘಟನೆಯ ಸಿಸಿಟಿವಿ ದೃಶ್ಯ ಇಲ್ಲಿದೆ
Image
ರಸ್ತೆ ಅಪಘಾತದ ಬಳಿಕ ಸುನೇತ್ರಾ ಪಂಡಿತ್​ ಆರೋಗ್ಯ ಸ್ಥಿತಿ ಹೇಗಿದೆ? ಮಾಹಿತಿ ಹಂಚಿಕೊಂಡ ಪುತ್ರಿ ಶ್ರೇಯಾ
Image
ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಮತ್ತೊಂದು ಜೀವ ಬಲಿ; ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ
Image
ಬೆಂಗಳೂರು: ರಸ್ತೆ ಗುಂಡಿಯಲ್ಲಿ ಬಿಬಿಎಂಪಿ ಪ್ರತಿಕೃತಿ ಮುಚ್ಚಿ ಅಂತ್ಯಕ್ರಿಯೆ ಮಾಡಿದ ಪ್ರತಿಭಟನಾಕಾರರು; ಪಾಲಿಕೆ ವಿರುದ್ಧ ಆಕ್ರೋಶ

ಮೇ 7ರಂದು ರಾತ್ರಿ ಕಿರುತೆರೆ ನಟಿ ಸುನೇತ್ರಾ ಪಂಡಿತ್​ ಅವರು ಕೂಡ ಬೆಂಗಳೂರಿನ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೆ ಒಳಗಾದರು. ಎನ್​.ಆರ್​. ಕಾಲೋನಿಯಲ್ಲಿ ಅವರಿಗೆ ಆಕ್ಸಿಡೆಂಟ್​ ಆಗಿತ್ತು. ಈ ರೀತಿಯ ಘಟನೆಗಳು ಪದೇಪದೇ ಮರುಕಳಿಸುತ್ತಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:18 am, Wed, 11 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ