ವಾರಕ್ಕೆ ಒಮ್ಮೆ ಮಾತ್ರ ಮಾಧ್ಯಮದವರು ಬಿಬಿಎಂಪಿಗೆ ಬರಬೇಕು: ಮಾಧ್ಯಮ ಪ್ರತಿನಿಧಿಗಳಿಗೆ ಬಿಬಿಎಂಪಿಯಿಂದ ಹೊಸ ರೂಲ್ಸ್​​

ವಾರಕ್ಕೆ ಒಮ್ಮೆ ಮಾತ್ರ ಮಾಧ್ಯಮದವರು ಬಿಬಿಎಂಪಿಗೆ ಬರಬೇಕು: ಮಾಧ್ಯಮ ಪ್ರತಿನಿಧಿಗಳಿಗೆ ಬಿಬಿಎಂಪಿಯಿಂದ ಹೊಸ ರೂಲ್ಸ್​​
ಬಿಬಿಎಂಪಿ

ನಿತ್ಯ ವಿಶೇಷ ಆಯುಕ್ತರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ನಿತ್ಯ ಬೆಳಗ್ಗೆ 11 ಗಂಟೆಗೆ ವಿಶೇಷ ಆಯುಕ್ತರು ಮಾಹಿತಿ ನೀಡುತ್ತಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ರಿಂದ ಕಾನೂನು ಮಾಡಲಾಗಿದೆ. 

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 09, 2022 | 1:00 PM

ಬೆಂಗಳೂರು: ವಾರಕ್ಕೆ ಒಮ್ಮೆ ಮಾತ್ರ ಮಾಧ್ಯಮದವರು ಬಿಬಿಎಂಪಿಗೆ (BBMP) ಬರಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೊಸ ರೂಲ್ಸ್ ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೆ ಬಿಬಿಎಂಪಿಯಿಂದ ಹೊಸ ರೂಲ್ಸ್ ಜಾರಿ ಮಾಡಲಾಗಿದ್ದು,​​ ನಿತ್ಯ ಮುಖ್ಯ ಆಯುಕ್ತರ ಬಳಿ ಮಾಧ್ಯಮದವರು ಬರಬೇಕಿಲ್ಲ. ನಿತ್ಯ ವಿಶೇಷ ಆಯುಕ್ತರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾರೆ. ನಿತ್ಯ ಬೆಳಗ್ಗೆ 11 ಗಂಟೆಗೆ ವಿಶೇಷ ಆಯುಕ್ತರು ಮಾಹಿತಿ ನೀಡುತ್ತಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ರಿಂದ ಕಾನೂನು ಮಾಡಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಗಾವಣೆ; ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ನೇಮಕ

ಬಿಬಿಎಂಪಿ (BBMP) ಮುಖ್ಯ ಆಯುಕ್ತ ಗೌರವ್ ಗುಪ್ತಾ (Gaurav Gupta) ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್​ರನ್ನು (Tushar Girinath) ನೇಮಕ ಮಾಡಿದೆ. ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಎಸಿಎಸ್ ಆಗಿ ಗೌರವ್ ಗುಪ್ತಾ ವರ್ಗಾವಣೆ ಹೊಂದಿದ್ದಾರೆ. ಜೊತೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಟಿಕೆ ಅನಿಲ್ ಕುಮಾರ್​ಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಕಾರ್ಮಿಕ ಇಲಾಖೆಯ ಕಾರ್ಯದರ್ಶಿಯಾಗಿ ಮನೋಜ್ ಜೈನ್ ನೇಮಕಗೊಂಡಿದ್ದಾರೆ.

ಇನ್ನು ಮುಖ್ಯಮಂತ್ರಿ ಕಾರ್ಯದರ್ಶಿ ಪೊನ್ನುರಾಜ್ ವರ್ಗಾವಣೆಯಾಗಿದ್ದು, ಪೊನ್ನುರಾಜ್​ಗೆ ಕೆಪಿಸಿಎಲ್ ಎಂಡಿ ಹುದ್ದೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಹಾಗೇ, 16 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಓರ್ವ ಐಎಎಸ್ ಅಧಿಕಾರಿಗೆ ಹೆಚ್ಚುವರಿ ಹೊಣೆಗಾರಿಕೆಗೆ ನೀಡಿದೆ. ದೆಹಲಿ ಕರ್ನಾಟಕ ಭವನದ ಉಪಸ್ಥಾನೀಯ ಆಯುಕ್ತರಾಗಿ ಖುಷ್ಬೂ ಚೌಧರಿ ನೇಮಕಗೊಂಡಿದ್ದಾರೆ. ಕೆಪಿಎಸ್​ಸಿ ಕಾರ್ಯದರ್ಶಿಯಾಗಿ ಕ್ಯಾ.‌ಡಾ.ರಾಜೇಂದ್ರ, ಕೆಆರ್​ಐಡಿಎಲ್ ಎಂಡಿ ಆಗಿ ಎಂ.ಜಿ.ಹಿರೇಮಠ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆಗಿ ನಿತೇಶ್ ಪಾಟೀಲ್​, ಧಾರವಾಡ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗ್ಡೆ ವರ್ಗಾವಣೆಯಾಗಿದ್ದಾರೆ.

ಕೆಎಸ್​ಆರ್​ಟಿಸಿ ನಿರ್ದೇಶಕರಾಗಿ ಡಾ. ನವೀನ್ ಭಟ್, ಬಾಗಲಕೋಟೆ ಜಿಲ್ಲಾಧಿಕಾರಿ ಭೂ ಬಾಲನ್ ಟಿ, ಇಡಿಸಿಎಸ್ ನಿರ್ದೇಶಕರಾಗಿ ಡಾ.ದಿನೇಶ್ ಸಸಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಭರತ್ ಎಸ್, ಕೆಯುಐಡಿಎಫ್​ಸಿ ಎಂಡಿಯಾಗಿ ಶಿಲ್ಪಾ ಎಂ, ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಪ್ರಸನ್ನ ಹೆಚ್, ಕಲಬುರಗಿ ಜಿ.ಪಂ. ಸಿಇಒ ಆಗಿದೆ ಡಾ.ಗಿರೀಶ್ ದಿಲೀಪ್ ಬಾಡೋಲೆ ಅವರನ್ನು ವರ್ಗಾವಣೆ ಮಾಡಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada