AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mike Tyson: ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​ ಜನ್ಮದಿನಕ್ಕೆ ವಿಶೇಷ ವಿಡಿಯೋ ಮೂಲಕ ವಿಶ್​ ಮಾಡಿದ ‘ಲೈಗರ್​’ ತಂಡ

Mike Tyson Birthday: ಮೈಕ್​ ಟೈಸನ್​ ಹುಟ್ಟುಹಬ್ಬದ ಸಲುವಾಗಿ ‘ಲೈಗರ್​’ ಮೇಕಿಂಗ್​ ವಿಡಿಯೋ ರಿಲೀಸ್​ ಮಾಡಲಾಗಿದೆ. ಈ ಮೂಲಕ ಕರಣ್​ ಜೋಹರ್​, ವಿಜಯ್​ ದೇವರಕೊಂಡ, ಅನನ್ಯಾ ಪಾಂಡೆ, ಚಾರ್ಮಿ ಕೌರ್​ ಅವರು ಶುಭಾಶಯ ತಿಳಿಸಿದ್ದಾರೆ.

Mike Tyson: ಬಾಕ್ಸಿಂಗ್​ ದಿಗ್ಗಜ ಮೈಕ್​ ಟೈಸನ್​ ಜನ್ಮದಿನಕ್ಕೆ ವಿಶೇಷ ವಿಡಿಯೋ ಮೂಲಕ ವಿಶ್​ ಮಾಡಿದ ‘ಲೈಗರ್​’ ತಂಡ
Mike Tyson
TV9 Web
| Edited By: |

Updated on:Jun 30, 2022 | 8:58 PM

Share

ಬಾಕ್ಸಿಂಗ್​ ಲೋಕದ ದಿಗ್ಗಜ ಮೈಕ್​ ಟೈಸನ್​ (Mike Tyson) ಅವರು ಇಂದು (ಜೂನ್​ 30) 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿಶ್ವಾದ್ಯಂತ ಜನಪ್ರಿಯತೆ ಹೊಂದಿರುವ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಇದೇ ಮೊದಲ ಬಾರಿಗೆ ಅವರು ಭಾರತೀಯ ಸಿನಿಮಾದಲ್ಲಿ ನಟಿಸಿದ್ದಾರೆ. ಹೌದು, ವಿಜಯ್​ ದೇವರಕೊಂಡ (Vijay Deverakonda) ನಟನೆಯ ‘ಲೈಗರ್​’ ಚಿತ್ರದಲ್ಲಿ ಅವರೊಂದು ಪಾತ್ರ ಮಾಡಿದ್ದಾರೆ. ಹಾಗಾಗಿ ಅವರ ಜೊತೆ ಈ ಚಿತ್ರಕ್ಕೆ ಆತ್ಮೀಯತೆ ಬೆಳೆದಿದೆ. ಮೈಕ್​ ಟೈಸನ್​ ಅವರ ಜನ್ಮದಿನದ (Mike Tyson Birthday) ಪ್ರಯುಕ್ತ ಅವರಿಗೆ ‘ಲೈಗರ್​’ ತಂಡದವರು ಶುಭಾಶಯ ತಿಳಿಸಿದ್ದಾರೆ. ಈ ಸಲುವಾಗಿ ವಿಶೇಷ ವಿಡಿಯೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಸಿನಿಮಾ ಮೇಕಿಂಗ್ ದೃಶ್ಯಗಳು ಇವೆ. ಇದನ್ನು ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ.

ವಿಜಯ್​ ದೇವರಕೊಂಡ ಅವರ ವೃತ್ತಿಜೀವನದಲ್ಲಿ ಈ ಸಿನಿಮಾ ಡಿಫರೆಂಟ್​ ಆಗಿರಲಿದೆ. ಅವರು ಬಾಕ್ಸರ್​ ಆಗಿ ಕಾಣಿಸಿಕೊಳ್ಳುತ್ತಿದ್ದು ಅವರಿಗೆ ಎದುರಾಳಿಯಾಗಿ ಮೈಕ್​ ಟೈಸನ್​ ಕಾದಾಡಲಿರುವುದು ವಿಶೇಷ. ಇಬ್ಬರ ನಡುವಿನ ಹಣಾಹಣಿ ಹೇಗಿರಲಿದೆ ಎಂದು ನೋಡಲು ಸಿನಿಪ್ರಿಯರು ಕಾದಿದ್ದಾರೆ. ಈ ಸಿನಿಮಾಗೆ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೈಕ್​ ಟೈಸನ್​ ಅವರಿಗೆ ವಿಶೇಷ ಗೆಟಪ್​ ಇರಲಿದೆ ಎಂಬುದು ಈ ಮೇಕಿಂಗ್​ ವಿಡಿಯೋ ನೋಡಿದರೆ ತಿಳಿಯುತ್ತದೆ.

ಇದನ್ನೂ ಓದಿ
Image
ಧೂಳೆಬ್ಬಿಸಿದ ‘ಲೈಗರ್​’ ಗ್ಲಿಂಪ್ಸ್​ ವಿಡಿಯೋ; ವಿಜಯ್​ ದೇವರಕೊಂಡಗೆ ಭಾರೀ ಮೆಚ್ಚುಗೆ
Image
20 ಮಿಲಿಯನ್​ ವೀವ್ಸ್​, 5 ಲಕ್ಷ ಲೈಕ್ಸ್​ ಪಡೆದ ‘ಲೈಗರ್​’ ಗ್ಲಿಂಪ್ಸ್​; ವಿಜಯ್​ ದೇವರಕೊಂಡಗೆ ಫ್ಯಾನ್ಸ್​ ಉಘೇ ಉಘೇ
Image
ನಿರ್ದೇಶಕರ​ ಹಠದಿಂದ ಹಳಿತಪ್ಪಿದ ‘ಲೈಗರ್’ ಸಿನಿಮಾ ಬಜೆಟ್​; ಸ್ಟಾರ್​ ಕಲಾವಿದನನ್ನು ಹೊರಗಿಟ್ಟ ಕರಣ್​ ಜೋಹರ್​
Image
ಕೈಯಲ್ಲಿ ಬೆಂಕಿ ಹಿಡಿದು ಬಂದ ಮೈಕ್​ ಟೈಸನ್​; ‘ಲೈಗರ್​’ನಲ್ಲಿ ಬಾಕ್ಸಿಂಗ್​ ಲೆಜೆಂಡ್ ಫಸ್ಟ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ  

ಕರಣ್​ ಜೋಹರ್​, ಪುರಿ ಜಗನ್ನಾಥ್​, ಚಾರ್ಮಿ ಕೌರ್​ ಹಾಗೂ ಅಪೂರ್ವ ಮೆಹ್ತಾ ಅವರು ‘ಲೈಗರ್​’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಳ್ಳಲಿದ್ದಾರೆ. ಇವರೆಲ್ಲರೂ ಮೈಕ್​ ಟೈಸನ್​ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಮೈಕ್​ ಟೈಸನ್ ಅವರ ಪಾಲಿನ ದೃಶ್ಯಗಳನ್ನು ಅಮೆರಿಕದಲ್ಲಿ ಚಿತ್ರೀಕರಿಸಲಾಗಿದೆ. ಶೂಟಿಂಗ್​ ವೇಳೆ ಅವರು ಚಿತ್ರತಂಡದವರ ಜೊತೆ ಎಷ್ಟು ಆಪ್ತವಾಗಿದ್ದರು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಒದಗಿಸುತ್ತಿದೆ.

ಈ ವರ್ಷ ಆಗಸ್ಟ್​ 25ರಂದು ‘ಲೈಗರ್​’ ಸಿನಿಮಾ ಬಿಡುಗಡೆ ಆಗಲಿದೆ. ಜುಲೈ 10ರಂದು ಈ ಚಿತ್ರದ ಟ್ರೇಲರ್​ ರಿಲೀಸ್​ ಆಗಲಿದೆ. ಶೀಘ್ರದಲ್ಲೇ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಗುವುದು. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಈ ಸಿನಿಮಾ ರಿಲೀಸ್​ ಆಗಲಿದೆ. ಪ್ಯಾನ್​ ಇಂಡಿಯಾ ಹೀರೋ ಆಗಿ ಸದ್ದು ಮಾಡಲು ವಿಜಯ್​ ದೇವರಕೊಂಡ ಸಜ್ಜಾಗಿದ್ದಾರೆ. ಸದ್ಯ ಈ ಚಿತ್ರಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗುತ್ತಿವೆ.

ಇದನ್ನೂ ಓದಿ: Mike Tyson: ವಿಮಾನದಲ್ಲಿ ಕಿರಿಕಿರಿ ಮಾಡಿದ ಯುವಕ; ಸಿಟ್ಟಿಗೆದ್ದ ಮೈಕ್​ ಟೈಸನ್ ಮಾಡಿದ್ದೇನು? ವಿಡಿಯೋ ವೈರಲ್

Liger: ಮೈಕ್ ಟೈಸನ್​ ಜತೆ ವಿಜಯ್​ ದೇವರಕೊಂಡ ಫೈಟ್​; ‘ಲೈಗರ್​’ ಮೂಲಕ ಭಾರತೀಯ ಚಿತ್ರರಂಗಕ್ಕೆ ಬಾಕ್ಸಿಂಗ್​ ಲೆಜೆಂಡ್​ ಎಂಟ್ರಿ

Published On - 12:14 pm, Thu, 30 June 22

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ