ನಿರ್ದೇಶಕರ​ ಹಠದಿಂದ ಹಳಿತಪ್ಪಿದ ‘ಲೈಗರ್’ ಸಿನಿಮಾ ಬಜೆಟ್​; ಸ್ಟಾರ್​ ಕಲಾವಿದನನ್ನು ಹೊರಗಿಟ್ಟ ಕರಣ್​ ಜೋಹರ್​

ಬಾಕ್ಸಿಂಗ್​ ಜಗತ್ತಿನಲ್ಲಿ ಅಮೆರಿಕದ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ‘ಲೈಗರ್​’ ಸಿನಿಮಾಗೆ ಮೈಕ್​ ಟೈಸನ್​ ಬೇಕು ಎಂದು ಪುರಿ ಜಗನ್ನಾಥ್​​ ಹಠ ಹಿಡಿದು ಕೂತಿದ್ದರು ಎಂದು ವರದಿ ಆಗಿತ್ತು.

ನಿರ್ದೇಶಕರ​ ಹಠದಿಂದ ಹಳಿತಪ್ಪಿದ ‘ಲೈಗರ್’ ಸಿನಿಮಾ ಬಜೆಟ್​; ಸ್ಟಾರ್​ ಕಲಾವಿದನನ್ನು ಹೊರಗಿಟ್ಟ ಕರಣ್​ ಜೋಹರ್​
ಲೈಗರ್​ ಸಿನಿಮಾ ಪೋಸ್ಟರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 10, 2021 | 7:00 PM

ಪುರಿ ಜಗನ್ನಾಥ್ (Puri Jagannadh) ನಿರ್ದೇಶನದ ‘ಲೈಗರ್​’ ಸಿನಿಮಾ (Liger Movie) ಹಲವು ಕಾರಣದಿಂದ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ (Vijay Devarakonda) ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಬಾಕ್ಸರ್​ ಮೈಕ್​ ಟೈಸನ್​ (Mike Tyson) ಕೂಡ ಚಿತ್ರತಂಡ ಸೇರಿಕೊಂಡಿದ್ದಾರೆ. ಬಾಲಿವುಡ್​ ನಟಿ ಅನನ್ಯಾ ಪಾಂಡೆ (Ananya Panday) ಚಿತ್ರದ ನಾಯಕಿ. ಈ ಸಿನಿಮಾ ಮೂಲಕ ವಿಜಯ್​ ದೇವರಕೊಂಡ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ಆದರೆ, ನಿರ್ದೇಶಕರ ಹಠದಿಂದ ಚಿತ್ರದ ಬಜೆಟ್​ ಮಿತಿ ಮೀರಿದೆ. ಈ ಬಗ್ಗೆ ನಿರ್ಮಾಪಕರ ಕರಣ್​ ಜೋಹರ್ (Karan Johar)​ ಅಪ್ಸೆಟ್​ ಆಗಿದ್ದಾರೆ. ಅಲ್ಲದೆ, ಸಿನಿಮಾ ಕೆಲಸಗಳನ್ನು ಬೇಗನೇ ಪೂರ್ಣಗೊಳಿಸೋಕೆ ನಿರ್ದೇಶಿಸಿದ್ದಾರೆ ಎನ್ನಲಾಗಿದೆ.

ಬಾಕ್ಸಿಂಗ್​ ಜಗತ್ತಿನಲ್ಲಿ ಅಮೆರಿಕದ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ‘ಲೈಗರ್​’ ಸಿನಿಮಾಗೆ ಮೈಕ್​ ಟೈಸನ್​ ಬೇಕು ಎಂದು ಪುರಿ ಜಗನ್ನಾಥ್​​ ಹಠ ಹಿಡಿದು ಕೂತಿದ್ದರು ಎಂದು ವರದಿ ಆಗಿತ್ತು. ಈ ಕಾರಣಕ್ಕೆ ವಿಜಯ್​ ದೇವರಕೊಂಡ ಅವರಿಗಿಂತಲೂ ಅಧಿಕ ಮೊತ್ತದ ಸಂಭಾವನೆ ಕೊಟ್ಟು ಮೈಕ್​ ಟೈಸನ್​ ಒಪ್ಪಿಸಲಾಗಿತ್ತು. ಅಷ್ಟೇ ಅಲ್ಲ, ಇಡೀ ಚಿತ್ರತಂಡ ಅಮೆರಿಕಕ್ಕೆ ತೆರಳಿ ಶೂಟಿಂಗ್​ ಮಾಡಿಕೊಂಡು ಬಂದಿತ್ತು. ಇದರಿಂದ ಚಿತ್ರದ ಬಜೆಟ್​ ಮಿತಿಮೀರಿದೆ. ಇನ್ನು, ಕೊವಿಡ್​ ಕಾರಣದಿಂದ ಸಿನಿಮಾ ಕೆಲಸಗಳು ವಿಳಂಬವಾಗಿದೆ. ಇದರಿಂದ ಅಂದುಕೊಂಡಿದ್ದಕ್ಕಿಂತಲೂ ಸಿನಿಮಾ ಬಜೆಟ್​ ಹೆಚ್ಚಿದೆ.

‘ಲೈಗರ್​’ ಚಿತ್ರಕ್ಕೆ ಮತ್ತೋರ್ವ ಸ್ಟಾರ್​ ಕಲಾವಿದನ ಸೇರ್ಪಡೆ ಆಗಬೇಕಿತ್ತು. ಆದರೆ, ಈಗಾಗಲೇ ಬಜೆಟ್​ ಮಿತಿಮೀರಿರುವುದರಿಂದ ನಿರ್ಮಾಪಕ ಕರಣ್​ ಇದಕ್ಕೆ ನೋ ಎಂದಿದ್ದಾರೆ. ಇನ್ನು, ಚಿತ್ರದ ಕೆಲಸವನ್ನು ಬೇಗನೆ ಪೊರ್ಣಗೊಳಿಸುವಂತೆ ನಿರ್ಮಾಪಕರ ಕಡೆಯಿಂದ ನಿರ್ದೇಶಕರಿಗೆ ಸೂಚನೆ ಬಂದಿದೆ. ಒಂದೊಮ್ಮೆ ಸಿನಿಮಾ ಶೂಟಿಂಗ್​ ಪೂರ್ಣಗೊಂಡರೆ ಸಿನಿಮಾ ರಿಲೀಸ್​ಗೂ ಮೊದಲಿನ ಹಲವು ಡೀಲ್​ಗಳನ್ನು ಮಾಡಿಕೊಳ್ಳಬಹುದು. ಇದರಿಂದ ಒಂದಷ್ಟು ಹಣ ಬರಲಿದೆ ಎಂಬುದು ಕರಣ್​ ಲೆಕ್ಕಚಾರ.

ವಿಜಯ್​ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಇದೇ ಮೊದಲ ಬಾರಿಗೆ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಪುರಿ ಜಗನ್ನಾಥ್​​​ ನಿರ್ದೇಶನ ಮಾಡುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂನಲ್ಲಿ ಚಿತ್ರ ತೆರೆಗೆ ಬರುತ್ತಿದೆ. ಸಿಂಹ ಹಾಗೂ ಹುಲಿಯಿಂದ ಹುಟ್ಟಿದ ತಳಿಗೆ ಲೈಗರ್​ ಎಂದು ಕರೆಯಲಾಗುತ್ತದೆ.  ಈ ಕಾರಣಕ್ಕೆ ಸಿನಿಮಾ ಪೋಸ್ಟರ್​ ಹಿಂಭಾಗದಲ್ಲಿ ಅರ್ಧ ಹುಲಿ ಅರ್ಧ ಸಿಂಹದ ಚಿತ್ರವಿದೆ.

ಇದನ್ನೂ ಓದಿ:  ಕೈಯಲ್ಲಿ ಬೆಂಕಿ ಹಿಡಿದು ಬಂದ ಮೈಕ್​ ಟೈಸನ್​; ‘ಲೈಗರ್​’ನಲ್ಲಿ ಬಾಕ್ಸಿಂಗ್​ ಲೆಜೆಂಡ್ ಫಸ್ಟ್​ ಲುಕ್​ ನೋಡಿ ಫ್ಯಾನ್ಸ್​ ಫಿದಾ  

ರಾಜಮೌಳಿ ತಂದೆ ಮೊಬೈಲ್​ ವಾಲ್​ಪೇಪರ್​ನಲ್ಲಿ ನಿರ್ದೇಶಕ ಪುರಿ ಜಗನ್ನಾಥ್ ಫೋಟೋ; ಕಾರಣ ಏನು?

Published On - 6:31 pm, Wed, 10 November 21

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ