AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Liger: ಮೈಕ್ ಟೈಸನ್​ ಜತೆ ವಿಜಯ್​ ದೇವರಕೊಂಡ ಫೈಟ್​; ‘ಲೈಗರ್​’ ಮೂಲಕ ಭಾರತೀಯ ಚಿತ್ರರಂಗಕ್ಕೆ ಬಾಕ್ಸಿಂಗ್​ ಲೆಜೆಂಡ್​ ಎಂಟ್ರಿ

Mike Tyson: ಬಾಕ್ಸಿಂಗ್​ ಜಗತ್ತಿನಲ್ಲಿ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್​ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಅಂಥ ದಿಗ್ಗಜನನ್ನು ‘ಲೈಗರ್​’ ಸಿನಿಮಾ ತಂಡ ಭಾರತಕ್ಕೆ ಕರೆತರುತ್ತಿದೆ.

Liger: ಮೈಕ್ ಟೈಸನ್​ ಜತೆ ವಿಜಯ್​ ದೇವರಕೊಂಡ ಫೈಟ್​; ‘ಲೈಗರ್​’ ಮೂಲಕ ಭಾರತೀಯ ಚಿತ್ರರಂಗಕ್ಕೆ ಬಾಕ್ಸಿಂಗ್​ ಲೆಜೆಂಡ್​ ಎಂಟ್ರಿ
ಲೈಗರ್​ ಸಿನಿಮಾ ಪೋಸ್ಟರ್​
TV9 Web
| Edited By: |

Updated on:Oct 09, 2021 | 7:55 PM

Share

ನಟ ವಿಜಯ್​ ದೇವರಕೊಂಡ ಅವರು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ‘ಅರ್ಜುನ್​ ರೆಡ್ಡಿ’ ಸಿನಿಮಾದಿಂದ ಟಾಲಿವುಡ್​ನಲ್ಲಿ ಮಿಂಚಿದ ಬಳಿಕ ಅವರ ಮೇಲೆ ಬಾಲಿವುಡ್​ ಮಂದಿ ಕೂಡ ಕಣ್ಣಿಟ್ಟರು. ಈಗ ವಿಜಯ್​ ದೇವರಕೊಂಡ ನಟಿಸುತ್ತಿರುವ ‘ಲೈಗರ್’ ಸಿನಿಮಾ ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಈ ಸಿನಿಮಾಗೆ ಈಗ ವಿಶ್ವ ಬಾಕ್ಸಿಂಗ್​ ಲೆಜೆಂಡ್​ ಮೈಕ್​ ಟೈಸನ್​ ಅವರು ಎಂಟ್ರಿ ನೀಡುತ್ತಿದ್ದಾರೆ. ಈ ಸುದ್ದಿ ಕೇಳಿದ ಬಳಿಕ ವಿಜಯ್​ ದೇವರಕೊಂಡ ಫ್ಯಾನ್ಸ್​ ನಿರೀಕ್ಷೆ ಇಮ್ಮಡಿ ಆಗಿದೆ.

ಬಾಕ್ಸಿಂಗ್​ ಜಗತ್ತಿನಲ್ಲಿ ಅಮೆರಿಕದ ಮೈಕ್​ ಟೈಸನ್​ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್​ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಅಂಥ ದಿಗ್ಗಜನನ್ನು ‘ಲೈಗರ್​’ ಸಿನಿಮಾ ತಂಡ ಭಾರತಕ್ಕೆ ಸ್ವಾಗತಿಸುತ್ತಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅವರು ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಜಯ್​ ದೇವರಕೊಂಡ ಮತ್ತು ಮೈಕ್​ ಟೈಸನ್​ ಮುಖಾಮುಖಿ ಆಗುವ ದೃಶ್ಯಗಳನ್ನು ನೋಡಲು ಫ್ಯಾನ್ಸ್​ ಎಗ್ಸೈಟ್​ ಆಗಿದ್ದಾರೆ. ಬಾಕ್ಸಿಂಗ್ ರಿಂಗ್​ನಲ್ಲಿ ಅವರಿಬ್ಬರ ಹಣಾಹಣಿ ಹೇಗಿರಲಿದೆ ಎಂಬ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ.

‘ಕಿಂಗ್​ ಆಫ್​ ದಿ ರಿಂಗ್​ ಎನಿಸಿಕೊಂಡ ಮೈಕ್​ ಟೈಸನ್​ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ನಮ್ಮ ಲೈಗರ್​ ತಂಡದಿಂದ ಸ್ವಾಗತ’ ಎಂದು ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್​ ಜೋಹರ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರ ಜೊತೆಗೆ ಅವರು ಒಂದು ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ.

ಮೂಲಗಳ ಪ್ರಕಾರ ಟೈಸನ್​ ಅವರದ್ದು ಒಂದು ಚಿಕ್ಕ ಅತಿಥಿ ಪಾತ್ರ ಆಗಿರಲಿದ್ದು, ಕ್ಲೈಮ್ಯಾಕ್ಸ್​ಗಿಂತಲೂ ಮುನ್ನ ಅವರು ಕಾಣಿಸಿಕೊಳ್ಳಲಿದ್ದಾರೆ. ಅವರ ಎಂಟ್ರಿಯಿಂದಾಗಿ ಚಿತ್ರದ ಕಥೆಗೆ ಟ್ವಿಸ್ಟ್​ ಸಿಗಲಿದೆ ಎನ್ನಲಾಗಿದೆ. ಗೋವಾದಲ್ಲಿ ಇದರ ಚಿತ್ರೀಕರಣ ನಡೆಯಲಿದ್ದು, ಶೀಘ್ರದಲ್ಲೇ ಅವರು ಭಾರತಕ್ಕೆ ಬರಲಿದ್ದಾರೆ. ​ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಲೈಗರ್’ ಚಿತ್ರದಿಂದ ವಿಜಯ್​ ದೇವರಕೊಂಡ ವೃತ್ತಿಜೀವನಕ್ಕೆ ಹೊಸ ಮೈಲೇಜ್​ ಸಿಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:

ಪ್ರತಿಭಾವಂತ ಹುಡುಗಿಗೆ ಕೊಟ್ಟ ಮಾತು ಉಳಿಸಿಕೊಂಡ ವಿಜಯ್​ ದೇವರಕೊಂಡ; ಷಣ್ಮುಖಪ್ರಿಯಾಗೆ ಸಿಕ್ತು ಚಾನ್ಸ್​​

ವಿಜಯ್​ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ

Published On - 9:08 am, Tue, 28 September 21

ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!